Funny Jokes: ಹೆಂಡತಿ: ಕೆಲಸದವಳ ಜೊತೆ ಏನಾದ್ರೂ ಆಟ ಅಡಿದ್ರಾ? ಗಂಡ: ಅರೆ ಯಾಕೀ ಅನುಮಾನ..? ಹೆಂಡತಿ…

ಮನುಷ್ಯನ ಜೀವನ ಬಹಳ ಒತ್ತಡಗಳಿಂದ ತುಂಬಿದೆ. ಪ್ರತಿನಿತ್ಯ ಒಂದಲ್ಲಾ ಒಂದು ಕೆಲಸದಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳು ಸ್ವಲ್ಪ ಬಿಡುವು ಮಾಡಿಕೊಂಡು ತಮ್ಮ ಕುಟುಂಬದೊಂದಿಗೆ ಸಮಯವನ್ನು ಕಳೆಯುತ್ತಾರೆ. ಆದರೆ ಮನಸ್ಸಿನಲ್ಲಿ ಸಂತೋಷ ಎನ್ನುವುದು ಇದ್ದಾಗ ಮಾತ್ರವೇ ಹೊರಗಿನ ಜಗತ್ತಿನಲ್ಲಿ ಕೂಡ ಸಂತೋಷವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಮನಸ್ಸಿನಲ್ಲಿ ಸಂತೋಷ ತುಂಬಿರುವ ವ್ಯಕ್ತಿಯ ಆರೋಗ್ಯವೂ ಕೂಡಾ ಚೆನ್ನಾಗಿರುತ್ತದೆ. ಮನಸ್ಸಿನ ಸಂತೋಷಕ್ಕೆ ಒಂದು ನಗು ಅತ್ಯಾವಶ್ಯಕ. ದಿನದಲ್ಲಿ ಒಮ್ಮೆಯಾದರೂ ಮನಃಪೂರ್ವಕವಾಗಿ ನಕ್ಕಾಗ ದೇಹದಲ್ಲಿನ ಒತ್ತಡವು ಕೂಡಾ ಕಡಿಮೆಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಆ ನಗುವಿಗೆ ಒಂದೇ ಒಂದು ಮೂಲ ಎಂದರೆ ಅದು ನಗೆಹನಿಗಳು. ಇಂದಿನ ಈ ಪೋಸ್ಟ್ ಮೂಲಕ ಕೆಲವು ಜನಪ್ರಿಯ ನಗೆಹನಿ ಗಳನ್ನು ನಾವು ನಿಮ್ಮ ಮುಂದೆ ಇಡುತ್ತಿದ್ದು ಒಮ್ಮೆ ಇವುಗಳನ್ನು ಓದಿ ಮನಸಾರೆ ನಕ್ಕು ಬಿಡಿ. ನಿಮ್ಮ ಮನಸ್ಸಿನ ಒತ್ತಡಗಳನ್ನು ದೂರ ಮಾಡಿ.

ಜೋಕ್ 1
ಅಪ್ಪ ತನ್ನ ಮಗ ಜೀನ್ಸ್ ಪ್ಯಾಂಟ್ ಗೆ ಬಟನ್ ಹೊಲೆಯುತ್ತಿರುವುದನ್ನು ನೋಡಿದ.

ಮಗ ನಿನಗೆ ಮದುವೆ ಮಾಡಿದ್ದೇವೆ, ಮನೆಗೆ ಸೊಸೆ ಕೂಡ ಬಂದಿದ್ದಾಳೆ ಆದರೂ ನಿನ್ನ ಪ್ಯಾಂಟ್ ಗೆ ನೀನೆ ಏಕೆ ಗುಂಡಿ ಹಾಕುತ್ತಿರುವೆ ? ಎಂದ..

ಮಗ ಅಪ್ಪ ನೀವು ತಪ್ಪು ತಿಳಿದುಕೊಂಡಿದ್ದೀರಿ ಇದು ನನ್ನ ಪ್ಯಾಂಟ್ ಅಲ್ಲ, ಇದು ನಿಮ್ಮ ಸೊಸೆ ಜೀನ್ಸ್ ಪ್ಯಾಂಟ್ ಎಂದು ಉತ್ತರ ನೀಡಿದ..

ಈ ಮಾತನ್ನು ಕೇಳಿ ಅಪ್ಪ ಶಾಖ್ ನಿಂದ ಮೂರ್ಛೆ ಹೋಗುವುದು ಬಾಕಿ ಇತ್ತು.

ಜೋಕ್ 2
ಹುಡುಗಿಯು ತನ್ನ ಪ್ರೇಮಿಯನ್ನು ಗಟ್ಟಿಯಾಗಿ ತಬ್ಬಿಕೊಂಡಳು…

ಹುಡುಗಿ: ನನ್ನ ಹೃದಯ ಜೋರಾಗಿ ಬಡಿದುಕೊಳ್ಳುವ ಹಾಗೆ ಏನಾದರೊಂದು ವಿಷಯವನ್ನು ಹೇಳು.

ಹುಡುಗ: ಹಿಂದೆ ನಿಮ್ಮ ಅಪ್ಪ ನಿಂತಿದ್ದಾರೆ.. ನನ್ನನ್ನು ಹಾಗೆ ತಬ್ಬಿ ಕೊಂಡಿರು.. ಇಲ್ಲದೆ ಹೋದರೆ ಇವತ್ತು ನಿಮ್ಮಪ್ಪ‌ನ ಕೈಗೆ ನೀನು ಸಿಕ್ಕಿಹಾಕಿಕೊಳ್ಳುವೆ..

ಜೋಕ್ 3
ಹೊಸದಾಗಿ ಮದುವೆ ಆದಾಗ ಪತಿ ತನ್ನ ಹೆಂಡತಿಯ ಫೋನ್ ನಂಬರನ್ನು ತನ್ನ ಫೋನ್ ನಲ್ಲಿ “ನನ್ನ ಲೈಫ್” ಎಂದು ಸೇವ್ ಮಾಡಿಟ್ಟುಕೊಂಡ

ಒಂದು ವರ್ಷದ ನಂತರ ಅದನ್ನೂ ಬದಲಿಸಿ “ನನ್ನ ವೈಫ್” ಎಂದು ಸೇವ್ ಮಾಡಿದ.

ಎರಡು ವರ್ಷಗಳ ನಂತರ ಆ ಹೆಸರನ್ನು ಬದಲಿಸಿ “ಹೋಮ್” ಎಂದು ಸೇವ್ ಮಾಡಿಕೊಂಡ

ಐದು ವರ್ಷಗಳ ನಂತರ ಮತ್ತೊಮ್ಮೆ ಹೆಸರನ್ನು ಬದಲಿಸಿ “ಹಿಟ್ಲರ್” ಎಂದು ಸೇವ್ ಮಾಡಿದ

ಹತ್ತು ವರ್ಷಗಳ ನಂತರ ಈ ಎಲ್ಲ ಹೆಸರುಗಳನ್ನು ಪಕ್ಕಕ್ಕಿಟ್ಟು “ರಾಂಗ್ ನಂಬರ್” ಎಂದು ಸೇವ್ ಮಾಡಿಬಿಟ್ಟ ಪುಣ್ಯಾತ್ಮ..

ಜೋಕ್ 4

ತಾತ ಮೊಮ್ಮಗನಿಗೆ: ಓಡಿಹೋಗಿ ಬಚ್ಚಿಟ್ಟುಕೋ ನಿಮ್ಮ ಟೀಚರ್ ಇದೇ ರಸ್ತೆಯಲ್ಲಿ ಬರುತ್ತಿದ್ದಾರೆ

ಮೊಮ್ಮಗ: ತಾತ ಮೊದಲು ನೀವು ಬಚ್ಚಿಟ್ಟು ಕೊಳ್ಳಿ ಏಕೆಂದರೆ ನೀವು ಸತ್ತು ಹೋಗಿದ್ದೀರಿ ಎಂದು ಹೇಳಿ ಎರಡು ವಾರಗಳ ರಜೆ ಹಾಕಿದ್ದೇನೆ.

ಜೋಕ್ 5

ಅಯ್ಯೋ ಭಗವಂತ ಇದೆಂತಹ ವಿಚಿತ್ರ, ನಮ್ಮ ಮನೆಯ ಮಗು ಅತ್ತರೆ ಮನಸ್ಸಿಗೆ ನೋವಾಗುತ್ತದೆ.. ಬೇರೆಯವರ ಮನೆಯ ಮಗು ಅತ್ತರೆ ತಲೆಯಲ್ಲಿ ನೋವಾಗುತ್ತದೆ.

ಅದೇ ರೀತಿ ತನ್ನ ಪತ್ನಿ ಅತ್ತರೆ ತಲೆ ನೋವಾಗುತ್ತದೆ ಬೇರೆಯವರ ಪತ್ನಿಯತ್ತ ಅತ್ತರೆ ಮನಸ್ಸಿಗೆ ನೋವಾಗುತ್ತದೆ.

ಜೋಕ್ 6
ಒಬ್ಬ ಕುಡುಕ ಎಫ್ ಎಂ ರೇಡಿಯೋ ಸ್ಟೇಷನ್ ಗೆ ಕರೆ ಮಾಡಿದ
ಕುಡುಕ : ನೋಡಿ, ನನಗೆ ತಿಲಕ್ ರಸ್ತೆಯಲ್ಲಿ ಒಂದು ಪರ್ಸ್ ಸಿಕ್ಕಿದೆ ಅದರಲ್ಲಿ rs.15000, ಒಂದು ಐ ಫೋನ್ 6 ಪ್ಲಸ್ ಹಾಗೂ ಕ್ರೆಡಿಟ್ ಕಾರ್ಡ್ ಮತ್ತು ಸೀಮಾ ಎನ್ನುವ ಹುಡುಗಿಯ ಹೆಸರು ಇರುವ ಐಡಿ ಕಾರ್ಡ್ ಸಿಕ್ಕಿದೆ.

ರೇಡಿಯೋ ಜಾಕಿ: ಹೋ ನೀವು ಬಹಳ ಪ್ರಾಮಾಣಿಕರು.. ನಿಮಗೆ ಸಿಕ್ಕಿರುವ ಪರ್ಸನ್ನು ವಾಪಸ್ಸು ಕೊಡುವುದಕ್ಕಾಗಿ ಕರೆ ಮಾಡಿದ್ದೀರಿ ಅಲ್ಲವೇ?

ಕುಡುಕ: ಅಯ್ಯೋ .. ಇಲ್ಲ ಇಲ್ಲ ಆ ಸೀಮ ಎನ್ನುವ ಯುವತಿ ಗಾಗಿ ಒಂದು ನೋವಿನ ಹಾಡನ್ನು ಡೆಡಿಕೇಟ್ ಮಾಡಿಬಿಡಿ ಅಷ್ಟು ಸಾಕು…

ಜೋಕ್ 7
ಹುಡುಗ: ಇಲ್ಲಿ ಕೇಳು
ಹುಡುಗಿ: ಬಾಯಿ ಮುಚ್ಚು ತಿನ್ನುವಾಗ ಮಾತನಾಡಬಾರದು
ಹುಡುಗಿ ತಿಂದು ಮುಗಿಸಿದಳು
ಹುಡುಗಿ: ಈಗ ಹೇಳು ಅದೇನು ಹೇಳಬೇಕು
ಹುಡುಗ: ನಿನ್ನ ಪ್ಲೇಟ್ನಲ್ಲಿ ಜಿರಳೆ ಬಿದ್ದಿತ್ತು…

ಈ ಮಾತು ಕೇಳಿ ಅವಳಿಗೆ ವಾಂತಿಯಾಗುವುದು ಬಾಕಿ ಇತ್ತು…

ಜೋಕ್ 8
ಕಾಡಿನಲ್ಲಿ ಒಂದು ಎಮ್ಮೆ ವಾಗಿ ಓಡುತ್ತಿತ್ತು ಅದನ್ನು ಇಲಿ ನೋಡಿತು..

ಇಲಿ: ಅಕ್ಕ ಏಕೆ ಹೀಗೆ ಓಡುತ್ತಿರುವೆ

ಎಮ್ಮೆ: ಪೋಲಿಸರು ಆನೆಯನ್ನು ಹಿಡಿಯೋದಿಕ್ಕೆ ಕಾಡಿಗೆ ಬಂದಿದ್ದಾರೆ

ಇಲಿ: ಅಕ್ಕ ನೀನು ಎಮ್ಮೆ ಅಲ್ಲವೇ? ಹಾಗಿದ್ದರೆ ನಿನಗೆ ಯಾಕೆ ಭಯ?

ಎಮ್ಮೆ : ಅಯ್ಯೋ ಒಂದು ಸಾರಿ ಸಿಕ್ಕಿಹಾಕಿಕೊಂಡರೆ 20 ವರ್ಷ ನ್ಯಾಯಾಲಯದಲ್ಲಿ ನಾನು ಆನೆಯಲ್ಲ ಎಮ್ಮೆ ಎಂದು ಸಾಬೀತು ಮಾಡೋಕೆ ಟೈಮ್ ಕಳೆದು ಹೋಗಿಬಿಡುತ್ತದೆ… ಅದಕ್ಕೆ ತಪ್ಪಿಸಿ ಕೊಳ್ಳುತ್ತಿದ್ದೇನೆ ಎಂದಿತು..

ಈ ಮಾತು ಕೇಳಿ ಇಲಿ ಕೂಡಾ ಓಟ ಕಿತ್ತಿತು..

ಜೋಕ್ 9
ಪ್ರೇಮಿಗಳಿಬ್ಬರು ಮದುವೆಯಾಗಬೇಕೆಂಬ ನಿರ್ಧಾರ ಮಾಡಿ ಪ್ರಮಾಣವನ್ನು ಸ್ವೀಕರಿಸುತ್ತಿದ್ದರು ಆಗ

ಹುಡುಗಿ: ಪ್ರಿಯತಮ ಮೊದಲೇ ಹೇಳುತ್ತಿದ್ದೇನೆ ಕೇಳಿ ಬಿಡು ನನಗೆ ಅಡುಗೆ ಮಾಡಲು ಬರುವುದಿಲ್ಲ.

ಹುಡುಗ: ಪ್ರಿಯೆ ಚಿಂತೆ ಮಾಡಬೇಡ ನಾನೂ ಮೊದಲೇ ಹೇಳುತ್ತಿದ್ದೇನೆ, ನಾನೊಬ್ಬ ಬಡ ಕವಿ ನನ್ನ ಮನೆಯಲ್ಲಿ ನಿನಗೆ ಅಡುಗೆ ಮಾಡಲು ಏನು ಸಿಗುವುದಿಲ್ಲ.

ಜೋಕ್ 10

ಹೆಂಡತಿ: ಕೆಲಸದವಳ ಜೊತೆ ನೀವೇನಾದರೂ ನಿಮ್ಮ ಆಟಗಳನ್ನು ನಡೆಸಿದ್ದೀರಾ?

ಗಂಡ: ಅರೆ ಇದ್ದಕ್ಕಿದ್ದಂತೆ ಇಂತಹ ಅನುಮಾನ ಏಕೆ?

ಹೆಂಡತಿ: ನಿನ್ನೆವರೆಗು ಅಮ್ಮಾವ್ರೇ ಅಂತ ಇದ್ದ ಕೆಲಸದವಳು ಇವತ್ತು ನನ್ನನ್ನ ಅಕ್ಕ ಅಂತ ಕರಿತಾ ಇದ್ದಾಳೆ…