Funny Jokes: ಹೆಂಡತಿ: ರೀ ನಾನು ಅಂದವಾಗಿ ಕಾಣುವಂತ ವಸ್ತು ಏನಾದ್ರೂ ತನ್ನಿ.. ಗಂಡ ಮಾರ್ಕೆಟ್ ಇಂದ ಬರುವಾಗ…

ನಮಸ್ಕಾರ ಗೆಳೆಯರೇ, ಇಂದು ನಾವು ನಿಮಗಾಗಿ ಅಂತರ್ಜಾಲದಲ್ಲಿ ಜನಪ್ರಿಯವಾದ ಕೆಲವು ನಗೆ ಹನಿಗಳನ್ನು ನಿಮಗಾಗಿ ತಂದಿದ್ದೇವೆ. ಈ ಜೋಕ್‌ ಗಳು ನಿಮ್ಮ ನಿತ್ಯ ಜೀವನದ ಎಲ್ಲಾ ಉದ್ವೇಗವನ್ನು, ಒತ್ತಡವನ್ನು ನಿವಾರಣೆ ಮಾಡಿ ನಿಮ್ಮಲ್ಲಿ ಒಂದು ಉಲ್ಲಾಸವನ್ನು ಮೂಡಿಸುತ್ತದೆ. ನಗು ನಿಮಗೆ ಹಾಗೂ ನಿಮ್ಮ ಆರೋಗ್ಯಕ್ಕೆ ಕೂಡಾ ಬಹಳ ಒಳ್ಳೆಯದು ಮಾತ್ರವೇ ಅಲ್ಲದೇ ಒಂದು ಉಲ್ಲಾಸವನ್ನು ನೀಡುತ್ತದೆ. ಆದ್ದರಿಂದ ಇನ್ನು ವಿಳಂಬ ಯಾಕೆ? ನಗುವ ಈ ಆನಂದದಾಯಕ ಪ್ರಕ್ರಿಯೆಯನ್ನು ಪ್ರಾರಂಭಿಸೋಣ ಬನ್ನಿ.

ಜೋಕ್ ೧

ಅತ್ತೆ: ಅಳಿಯಂದಿರೇ ಮುಂದಿನ ಜನ್ಮದಲ್ಲಿ ನೀವು ಏನಾಗಿ ಹುಟ್ಟೋಕೆ ಬಯಸ್ತೀರಾ?

ಅಳಿಯ: ಹಲ್ಲಿಯಾಗಿ ಅತ್ತೆ ..

ಅತ್ತೆ: ಯಾಕೆ ಅಳಿಯಂದ್ರೆ?

ಅಳಿಯ: ಯಾಕಂದ್ರೆ ನಿಮ್ಮ ಮಗಳು ಭಯ ಪಡೋದು ಅದು ಒಂದಕ್ಕೆ ಮಾತ್ರಾನೇ..

ಜೋಕ್ ೨

ಗುಂಡ: ಏ ಪುಂಡ ನೀನು ಯಾಕೋ ಸ್ಕೂಲಿಗೆ ಹೋಗಲ್ಲ…

ಪುಂಡ: ನಾನು ಹೋಗ್ತೀನಿ ಕಣೋ, ಬಟ್ ಅಲ್ಲಿ ಪ್ರತಿ ಸಲ ನನ್ನ ಹೊಡೆದು ಓಡಿಸಿ ಬಿಡ್ತಾರೆ…

ಗುಂಡ: ಅದ್ಯಾಕೆ? ಯಾವ ಸ್ಕೂಲಿಗೆ ಹೋಗ್ತಿಯಾ?

ಪುಂಡ: ಬಾಲಕಿಯರ ಪಾಠಶಾಲೆ..

ಜೋಕ್ ೩

ಊಟ ಮಾಡಲು ಕುಳಿತಿದ್ದ ಪತಿ ತನ್ನ ಹೆಂಡತಿಯನ್ನು ಕೇಳಿದ..‌

ಪತಿ: ಏನೇ, ನೀನು ಮಾಡಿರೋ ಅಡಿಗೆ ಹೆಸರೇನು?

ಹೆಂಡತಿ: ಯಾಕ್ರೀ ಹೆಸರು ಕೇಳ್ತಾ ಇದ್ದೀರಿ?

ಪತಿ : ಏನಿಲ್ಲಾ ಯಮಲೋಕದಲ್ಲಿ ಏನು ತಿಂದು ಸತ್ತೆ ಅಂದ್ರೆ ಅದರ ಹೆಸರು ಹೇಳಬೇಕಲ್ವಾ? ಅದಕ್ಕೆ…

ಜೋಕ್ ೪

ಡಾಕ್ಟರ್: ನಿಮಗೆ ಒಂಟಿತನ, ಬೇಜಾರು ಕಾಡಿದಾಗ ಏನು ಮಾಡ್ತೀರಾ?

ಪೇಷೆಂಟ್: ಏನಿಲ್ಲಾ ಡಾಕ್ಟ್ರೇ ದೇವಸ್ಥಾನಕ್ಕೆ ಹೋಗ್ತೀನಿ.

ಡಾಕ್ಟರ್: ನೈಸ್, ಅಲ್ಲಿ ಧ್ಯಾನ ಮಾಡಿ ಬೇಜಾರು ಕಳ್ಳೊಳ್ತೀರಾ ಅನ್ನಿ…

ಪೇಷೆಂಟ್: ಇಲ್ಲ ಡಾಕ್ಟ್ರೇ ಅಲ್ಲಿ ಜನರ ಚಪ್ಪಲಿಗಳನ್ನು ಮಿಕ್ಸ್ ಮಾಡಿ, ಅನಂತರ ಅವರು ಹುಡುಕಾಡೋದನ್ನು ನೋಡ್ತಾ ಎಂಟರ್ಟೈನ್ಮೆಂಟ್ ತಗೋತೀನಿ..

ಜೋಕ್ ೫
ಮೊದಲ ಖೈದಿ: ನೀನು ಜೈಲಿಗೆ ಬರೋಕೆ ಕಾರಣ ಏನು?

ಇನ್ನೊಬ್ಬ ಖೈದಿ: ಸರ್ಕಾರದ ಕೆಲಸವನ್ನು ನಾನು ಮಾಡಿದ್ದಕ್ಕೆ ಜೈಲಿಗೆ ಹಾಕಿ ಬಿಟ್ಟರು.

ಮೊದಲ ಖೈದಿ: ಹೌದಾ? ಏನು ಮಾಡ್ತಾ ಇದ್ದೆ..

ಇನ್ನೊಬ್ಬ ಖೈದಿ: ಏನಿಲ್ಲಾ ಸರ್ಕಾರದ ತರಹ ನಾನು ಕೂಡಾ ನೋಟ್ ಪ್ರಿಂಟ್ ಮಾಡ್ತಾ ಇದ್ದೆ.

ಜೋಕ್ ೬

ಮಹಿಳೆ: ಏನಪ್ಪಾ ಹಾಲಿಗೆ ಇಷ್ಟೊಂದು ನೀರು ಹಾಕ್ತೀಯಾ? ಇದು ಮೋಸ ಅಲ್ವಾ.. ದೇವರು ಅಂದ್ರೆ ಭಯ ಇಲ್ವಾ?

ಹಾಲಿನ ವ್ಯಾಪಾರಿ: ಸುಮ್ನೆ ಇರಿ ಮೇಡಂ, ನೀವು ನಿಮ್ಮ ಫೇಸ್ ಬುಕ್ ನಲ್ಲಿ ಹಾಕಿರೋ ಡಿಪಿ ನೋಡಿದ್ರೆ ಸುಂದರವಾಗಿದೆ , ಒರಿಜಿನಲ್ ಆಗಿ ನೋಡಿದ್ರೆ ಇಷ್ಟು ಕೆಟ್ಟದಾಗಿದ್ದೀರಿ, ಇದು ಮೋಸ ಅಲ್ವಾ…‌

ನಿಮ್ಮ ಅದೃಷ್ಟ ನಾನು ಕಾಮೆಂಟ್ ಮಾಡಿಲ್ಲ…

ಜೋಕ್ ೭

ಗಂಡ ಹೊರಗೆ ಹೋಗ್ತಾ ಇರೋದನ್ನು ನೋಡಿ

ಹೆಂಡತಿ ಗಂಡನಿಗೆ ಹಣ ಕೊಟ್ಟು: ರೀ ನಾನು ಅಂದವಾಗಿ ಕಾಣೊಂತ ವಸ್ತು ಏನಾದ್ರೂ ತನ್ನಿ…‌

ಗಂಡ ಮಾರ್ಕೆಟ್ ಇಂದ ತನಗಾಗಿ ಎರಡು ವಿಸ್ಕಿ ಬಾಟಲ್ ತಂದ..

ಜೋಕ್ ೮

ಒಬ್ಬ ವ್ಯಕ್ತಿಯ ಹೆಂಡತಿ ಗಂಡನ ಮೇಲೆ ಕೋಪ ಮಾಡಿಕೊಂಡು ತವರು ಮನೆಗೆ ಹೊರಟು ಹೋದಳು.
ಅವಳ ಗಂಡ ದಿನಾ ಅತ್ತೆ ಮನೆಗೆ ಫೋನ್ ಮಾಡ್ತಾ ಇದ್ದ… ಒಂದು ದಿನ

ಅತ್ತೆ: ಯಾಕೆ ದಿನಾ ಫೋನ್ ಮಾಡ್ತೀರಾ, ಇನ್ನು ನನ್ನ ಮಗಳು ನಿಮ್ಮ ಮನೆಗೆ ಬರಲ್ಲ….‌

ಅಳಿಯ: ಈ ಮಾತು ಕೇಳೋಕೆ‌ ತುಂಬಾ ಹಿತವಾಗಿದೆ. ಅದಕ್ಕೆ ದಿನಾ ಕಾಲ್ ಮಾಡ್ತೀನಿ..

ಜೋಕ್ ೯

ಒಬ್ಬ ಮಹಿಳೆ ವಿಧವಾ ವೇತನಕ್ಕೆ ಅರ್ಜಿ ಹಾಕಲು ಸರ್ಕಾರಿ ಕಛೇರಿಗೆ ಬಂದಳು..

ಆಫೀಸರ್: ಏನಮ್ಮಾ ನಿನ್ನ ಗಂಡ ಸತ್ತು ಎಷ್ಟು ದಿನ ಆಯ್ತು?

ಮಹಿಳೆ: ಅವರಿನ್ನೂ ಸತ್ತಿಲ್ಲ, ಮನೇಲೇ ಇದ್ದಾರೆ..

ಆಫೀಸರ್: ಅಯ್ಯೋ ಅಮ್ಮಾ ಇದು ವಿಧವಾ ವೇತನ ನಿಮಗ್ಯಾಕೆ?

ಮಹಿಳೆ: ಇದು ಸರ್ಕಾರಿ ಕೆಲಸ ಅಲ್ವಾ, ಹೇಗೂ ಲೇಟ್ ಆಗುತ್ತೆ.. ಈ ಕೆಲಸ ಆಗೋ ವೇಳೆಗೆ ನನ್ನ ಗಂಡ ಇರಲ್ಲ ಬಿಡಿ…‌

ಜೋಕ್ ೧೦

ಪತ್ನಿ: ಡಾಕ್ಟರ್ ‌ನಮ್ಮ ಎಜಮಾನ್ರು ನಿದ್ದೇಲಿ ಏನೇನೋ ಹೇಳ್ತಾ ಇರ್ತಾರೆ…

ಡಾಕ್ಟರ್: ಅದಕ್ಕೆ ನನ್ನ ಹತ್ರ ಔಷಧಿ ಇಲ್ಲಮ್ಮಾ

ಪತ್ನಿ: ಡಾಕ್ಟ್ರೇ ಹೋಗಲಿ ಅವರು ಏನು ಮಾತಾಡ್ತಾರೆ ಅಂತ ಸ್ಪಷ್ಟವಾಗಿ ಕೇಳೋಕೆ ಔಷಧಿ ಇದ್ರೆ ಕೊಡಿ.