ಹುಡುಗ-ಹುಡುಗಿ ರಾತ್ರಿ ನಿರ್ಜನ ರಸ್ತೆಯಲ್ಲಿ ಹಠಾತ್ ಶುರು ಮಾಡಿದರು ಡಾನ್ಸ್! ಕದ್ದು ಮಾಡಿದ ವಿಡಿಯೋ ಆಯಿತು ವೈರಲ್
ನೃತ್ಯ ಇದೊಂದು ಯುವಜನತೆಯ ಹವ್ಯಾಸದ ಪ್ರತೀಕವಾಗಿದೆ. ಇತ್ತೀಚೆಗೆ ಈ ಹವ್ಯಾಸ ಹೆಚ್ಚು ಕಡಿಮೆ ಎಲ್ಲರಿಗೂ ಇಷ್ಟವಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ನೃತ್ಯಗಳ ವಿಡಿಯೋದಲ್ಲಿ ಎಲ್ಲ ವಯಸ್ಸಿನ ಜನರು ನೃತ್ಯ ಮಾಡುವುದನ್ನು ನೋಡಬಹುದು. ಸದ್ಯ ಯುವಜೋಡಿಯ ನೃತ್ಯ ಒಂದು ಸೋಶಿಯಲ್ ಮೀಡಿಯಾದಲ್ಲಿ ಚೆನ್ನಾಗಿಯೇ ವೈರಲ್ ಆಗುತ್ತಿದೆ.
ಈ ವಿಡಿಯೋದ ದೃಶ್ಯದಲ್ಲಿ ಕಂಡುಬರುವ ಹಾಗೆ ನಿರ್ಜನವಾದ ರಸ್ತೆಯ ಮೇಲೆ ಯುವಕ ಯುವತಿಯರಿಬ್ಬರು ರಾತ್ರಿಯ ಸಮಯದಲ್ಲಿ ಡ್ಯಾನ್ಸ್ ಮಾಡಿ ತಮ್ಮ ಹವ್ಯಾಸವನ್ನು ಪೂರ್ಣಗೊಳಿಸಿಕೊಂಡಿದ್ದಾರೆ. ಯಾರ್ಯಾರ ಮನಸ್ಸಿನಲ್ಲಿ ಯಾವಾಗ ಏನು ಬರುತ್ತದೆ ಅಥವಾ ಯಾವ ಹವ್ಯಾಸ ಪೂರ್ಣ ಮಾಡಿಕೊಳ್ಳಬೇಕೆನಿಸುತ್ತದೆ ಎಂಬುದು ತಿಳಿಯಲು ಸಾಧ್ಯವಿಲ್ಲ. ಇವರಿಬ್ಬರಿಗೂ ನೈಟ್ ವಾಕ್ ಮಾಡುವಾಗ ಒಮ್ಮೆಲೇ ಡಾನ್ಸ್ ಮಾಡಬೇಕೆಂಬ ಆಸೆ ಮೂಡಿ ಬಂದಿರಬೇಕು. ತಕ್ಷಣ ಯಾರು ಇಲ್ಲದ ರಸ್ತೆಯ ಮೇಲೆ ತಮ್ಮ ಹವ್ಯಾಸವನ್ನು ಪೂರ್ಣಗೊಳಿಸಲು ತತ್ಪರವಾಗಿದ್ದಾರೆ. ಈ ಯುವ ಜೋಡಿಯ ಮುಕ್ತವಾದ ಸ್ಟೆಪ್ಸ್ ಗಳು ನಿಜಕ್ಕೂ ನೋಡಲು ತುಂಬಾ ಚಂದವಾಗಿದೆ. ಯಾರ ಭಯವಿಲ್ಲದೆ ಯಾರ ಫ್ರೆಷರ್ ಇಲ್ಲದೆ ನಾನೇ ರಾಜ ನೀನೇ ರಾಣಿ ಎಂಬಂತೆ ಇಬ್ಬರೇ ಇಬ್ಬರು ಖುಷಿಯಾಗಿ ತಮ್ಮ ಮನಸ್ಸಿನಲ್ಲಿ ಭಾವನೆಗಳನ್ನು ದೇಹಭಾಷೆಯ ಮುಖಾಂತರ ಹೊರ ಹಾಕಿದ್ದಾರೆ. ಕೆಲವೇ ಕ್ಷಣಗಳ ಈ ಸುಂದರ ಡ್ಯಾನ್ಸ್ ನಿಮಗೂ ಮೋಹಕಗೊಳಿಸುವುದು.
ವಿಡಿಯೋ ನೋಡಿ
This ❤️🫶🏻 pic.twitter.com/msaur0JvyF
— Prerna Maheshwari (@prernadaga21) September 5, 2022
ಪ್ರಸ್ತುತ ವಿಡಿಯೋ ಪ್ರೇರಣಾ ಮಹೇಶ್ವರಿ ಹೆಸರಿನ ಅಕೌಂಟ್ ನಿಂದ ಟ್ವಿಟರ್ ನಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ 2 ಲಕ್ಷ 50 ಸಾವಿರ ವೀಕ್ಷಣೆಯನ್ನು ಪಡೆದಿದೆ.