ಇದೊಂದು ನೋಡುವುದು ಉಳಿದಿತ್ತು ಬಾಕಿ! ದಯವಿಟ್ಟು ಮನೆಯಲ್ಲಿ ಮಾಡಬೇಡಿ ಕಾಪಿ; ಸಖತ್ ಡಾನ್ಸ್ ಸ್ಟೆಪ್ ನ ವಿಡಿಯೋ ವೈರಲ್!
ಇತ್ತೀಚೆಗೆ ಇನ್ಸ್ಟಾಗ್ರಾಮ್ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಪ್ರಸಿದ್ಧಿ ಪಡೆದಿದೆ. ಬಹುಶಃ Instagram ನಲ್ಲಿಯ ಕಂಟೆಂಟ್ ಗಳು ತುಂಬಾ ಚಿಕ್ಕದಾಗಿರುವ ಕಾರಣದಿಂದಾಗಿ ಇಂಟರ್ನೆಟ್ ಯೂಸರ್ಸ್ ಗಳಿಗೆ ತುಂಬಾ ಇಷ್ಟವಾಗುತ್ತದೆ. ಇಲ್ಲಿಯ ಕಾನ್ಸೆಪ್ಟ್ ಎಲ್ಲವೂ ತುಂಬಾ ಕಡಿಮೆ ಕ್ಷಣಗಳಲ್ಲಿ ಕ್ಲಿಯರ್ ಆಗುತ್ತದೆ. ಇದೇ ರೀತಿಯ ಒಂದು ಚಿಕ್ಕ ಕಾಮಿಡಿ ವಿಡಿಯೋ ನಿಮಗಾಗಿ ತಂದಿದ್ದೇವೆ.
ಹುಡುಗಿಯೊಬ್ಬಳು ಚೆನ್ನಾಗಿ ರೀಲ್ ಮಾಡಬೇಕೆಂದು ತುಂಬಾ ಇಷ್ಟದಿಂದ ತಯಾರಾಗಿ ಡಾನ್ಸ್ ನ ಸ್ಟೆಪ್ ಹಾಕಲು ಯೋಚಿಸಿದ್ದಾಳೆ. ಕೆಲವೊಂದು ಸಲ ನಾವು ಮಾಡುವುದೇ ಒಂದು, ಅಲ್ಲಿ ನಡೆಯುವದೇ ಒಂದು. ಇದೇ ರೀತಿಯ ದೃಶ್ಯ ಇಲ್ಲಿ ಕಂಡುಬರುತ್ತದೆ. ಚಿಕ್ಕ ಚಿಕ್ಕ ಸದಾ ಮಲ್ಲಿಗೆಯ ಹೂ ಬಿಟ್ಟ ಗಿಡಗಳ ಮುಂದೆ ನಿಂತು ತುಂಬಾ ಜೋಶ್ ನಿಂದ ಯುವತಿ ಡಾನ್ಸ್ ಸ್ಟೆಪ್ ಹಾಕಲು ಮುಂದಾಗಿದ್ದಾಳೆ. ಆದರೆ ಯಾಕೋ ಇಲ್ಲಿ ಅವಳ ಟೈಮ್ ಸರಿ ಇರಲಿಲ್ಲ ಅಂತ ಕಾಣುತ್ತೆ. ಮೊದಲ ಹೆಜ್ಜೆಯಲ್ಲಿ ಯುವತಿ ಒಂದು ಸುತ್ತು ತಿರುಗಿ ಸಖತ್ ಡ್ಯಾನ್ಸ್ ಮಾಡಬೇಕೆನ್ನುವಷ್ಟರಲ್ಲಿಯೇ ಪಾಪ ಬ್ಯಾಲೆನ್ಸ್ ತಪ್ಪಿ ಪುಟ್ಟ ಗಿಡಕ್ಕೆ ಸುತ್ತು ಹಾಕಿ ದೊಪ್ಪನೆ ಕೆಳಗೆ ಬೀಳುತ್ತಾಳೆ.
ನೋಡಿ ವೈರಲ್ ವಿಡಿಯೋ…
View this post on Instagram
ಪ್ರಸ್ತುತ ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ lalonsha839 ಹೆಸರಿನ ಅಕೌಂಟ್ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ 24.9 ಮಿಲಿಯನ್ ವೀಕ್ಷಣೆಯನ್ನು ಪಡೆದಿದ್ದು 1 ಮಿಲಿಯನ್ ವರೆಗೆ ಲೈಕ್ಸ್ಗಳನ್ನು ಪಡೆದಿದೆ.