Video; ಜಿಂಕೆಯಂತೆ ಜಂಪ್ ಮಾಡಿ ಬೌಂಡರಿ ದಾಟುವ ಮುನ್ನವೇ ಬಾಲ್ ಗೆ ಅದ್ಭುತ ಫೀಲ್ಡಿಂಗ್ ಮಾಡಿ ಕಡಿವಾಣ ಹಾಕಿದ ಯುವತಿ.
ಪುರುಷರ ಕ್ರಿಕೆಟ್ ಹಾಗೆ ಇತ್ತೀಚೆಗೆ ವುಮೆನ್ಸ್ ಕ್ರಿಕೆಟ್ ಸಹ ತುಂಬಾ ಪ್ರಸಿದ್ಧಿಯನ್ನು ಪಡೆಯುತ್ತಿದೆ. ವುಮೆನ್ಸ್ ಆಟಗಾರರೂ ಸಹ ಜೆಂಟ್ಸ್ ಕ್ರಿಕೆಟಿಗರಂತೆ ಪ್ರಸಿದ್ಧಿಯನ್ನು ಪಡೆಯುತ್ತಿದ್ದಾರೆ. ಇದರಲ್ಲಿ ಭಾರತವು ಸಹ ಮುಂಚೂಣಿಯಲ್ಲಿದೆ.
ಕ್ರಿಕೆಟ್ ಜಗತ್ತಿನಲ್ಲಿ ಫೀಲ್ಡಿಂಗ್ ವಿಷಯ ಬಂದಾಗ ದಕ್ಷಿಣ ಆಫ್ರಿಕಾದ ಜಾಂಟಿ ರೋಡ್ಸ್ ಅವರು ಸದಾ ಕಾಲ ನೆನಪಿಗೆ ಬರುತ್ತಾರೆ. ಭಾರತದ ಆಟಗಾರರಲ್ಲಿಯೂ ಅನೇಕ ಜನ ಅದ್ಭುತ ಫೀಲ್ಡರ್ ಗಳು ಆಡಿದ್ದಾರೆ ಮತ್ತು ಆಡುತ್ತಿದ್ದಾರೆ. ಇದರಲ್ಲಿ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್, ರಾಬಿನ್ ಸಿಂಗ್, ಯುವರಾಜ್ ಸಿಂಗ್ ಹಾಗೂ ಸದ್ಯದ ರವೀಂದ್ರ ಜಡೇಜಾ ಇವರ ಹೆಸರುಗಳು ಮುಖ್ಯವಾಗಿ ಕೇಳಿ ಬರುತ್ತವೆ.
ಇವರೆಲ್ಲರಿಗೂ ಮೀರಿಸುವಂತಹ ಅಥವಾ ಒಂದು ಹೆಜ್ಜೆ ಮುಂದೆ ಎನ್ನುವಂತಹ ಫೀಲ್ಡಿಂಗ್ ಒಬ್ಬಳು ಯುವತಿ ಮಾಡಿದ್ದಾಳೆ. ಇದೇ ವಿಡಿಯೋವನ್ನು ಸದ್ಯ ನಿಮಗಾಗಿ ತಂದಿದ್ದೇವೆ.
ಪ್ರಸ್ತುತ ಈ ವಿಡಿಯೋದ ದೃಶ್ಯದಲ್ಲಿ ಬ್ಯಾಟರ್ ಥರ್ಡ್ ಮ್ಯಾನಲ್ಲಿ ಆಡಿದ ಬಾಲನ್ನು ಲೇಡಿ ಫೀಲ್ಡರ್ ಯಾವ ರೀತಿಯಲ್ಲಿ ಫೀಲ್ಡ್ ಮಾಡಿದ್ದಾರೆ ಎಂದರೆ ನಿಜಕ್ಕೂ ವರ್ಣಿಸುವುದು ಕಠಿಣ. ಬಾಲ್ ಇನ್ನೇನು ಕೊನೆಯ ಕ್ಷಣದಲ್ಲಿ ಬೌಂಡರಿ ಲೈನ್ ಟಚ್ ಆಗುತ್ತದೆ ಎನ್ನುವಷ್ಟರಲ್ಲಿ ಜಿಂಕೆಯಂತೆ ಯುವತಿ ಜಂಪ್ ಮಾಡಿ ಬಾಲ್ ನ್ನು ತಡೆ ಹಿಡಿದಿದ್ದಾಳೆ. ಈ ದೃಶ್ಯ ನೋಡಿ ಅಲ್ಲಿ ಕುಳಿತ ವಿರೋಧಿ ತಂಡದ ಆಟಗಾರ್ತಿಯರೂ ಸಹ ಆಶ್ಚರ್ಯದಿಂದ ಚಪ್ಪಾಳೆ ತಟ್ಟುತ್ತಿದ್ದಾರೆ.
ನೋಡಿ ಈ ಸೂಪರ್ ದೃಶ್ಯ.
View this post on Instagram
ಕ್ರಿಕೆಟ್ ನಲ್ಲಿ ಫೀಲ್ಡಿಂಗ್ ಹೇಗೆ ಮಾಡಬೇಕು ಎನ್ನುವ ಸುಂದರವಾದ ಮಾದರಿಯನ್ನು ಪ್ರೆಸೆಂಟ್ ಮಾಡಿದ ಈ ಆಟಗಾರ್ತಿಯ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದೇ ತಡ 25.4 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಮತ್ತು 2.5 ಮಿಲಿಯನ್ ಜನರು ಈ ವಿಡಿಯೋಗೆ ಲೈಕ್ ಮಾಡಿದ್ದಾರೆ.