Articles

ಚಿಗರೆಗಳ ವಿಚಿತ್ರ ಬಾಕ್ಸಿಂಗ್! ಫೈಟ್ ನೋಡಿ ಬಹುಶಃ ಆಫ್ರಿಕಾದಿಂದ ಬಂದ ಚಿರತೆಗಳಿಂದ ರಕ್ಷಿಸಿಕೊಳ್ಳುವ ತಯಾರಿ ಎಂದರು ನೆಟ್ಟಿಗರು.

ವನ್ಯ ಪ್ರಾಣಿಗಳ ವಿಡಿಯೋಗಳು ಹೆಚ್ಚು ಕಡಿಮೆ ಎಲ್ಲರಿಗೂ ಆಕರ್ಷಿಸುತ್ತವೆ. ಅವುಗಳ ಮುಗ್ಧ ಚಟುವಟಿಕೆ ನೆಟ್ಟಿಗರನ್ನು ತನ್ನೆಡೆಗೆ ಸಹಜವಾಗಿ ಆಕರ್ಷಣೆ ಮಾಡಿಕೊಳ್ಳುತ್ತವೆ.

ಸದ್ಯ ಚಿಗರೆಗಳ ಒಂದು ದೃಶ್ಯ ನೆಟ್ಟಿಗರಿಗೆ ತುಂಬಾ ಇಂಪ್ರೆಸ್ ಮಾಡಿದೆ. ಈ ದೃಶ್ಯ ನೋಡಲು ತುಂಬಾ ಅಪರೂಪದ ದೃಶ್ಯ ಎನ್ನಬಹುದು. ಈ ವಿಡಿಯೋದಲ್ಲಿ ಕೆಲವು ಚಿಗರೆಗಳು ತುಂಬಾ ಸುಂದರವಾದ ಪರಿಸರದಲ್ಲಿ ಸುತ್ತಾಡುತ್ತಾ ಮೆಯುತ್ತಿವೆ. ಒಮ್ಮೆಲೆ ಈ ನಯನ ಮನೋಹರ ತಾಣದಲ್ಲಿ ಎರಡು ಚಿಗರೆಗಳು ಜಗಳ ಆಡಲು ಶುರು ಮಾಡುತ್ತವೆ. ಈ ಜಗಳ ತುಂಬಾ ವಿಶೇಷವಾಗಿದೆ. ಏನೆಂದರೆ, ಈ ಚಿಗರೆಗಳು ಜಟಾಪಟಿಯಲ್ಲಿ ತುಂಬಾ ಸುಂದರವಾಗಿ ಬಾಕ್ಸಿಂಗ್ ತರ ಒಂದಕ್ಕೊಂದು ಪಂಚ್ ಹೊಡೆಯುತ್ತಿವೆ. ಸಾಮಾನ್ಯವಾಗಿ ಚಿಗರೆಗಳು ಈ ರೀತಿಯಲ್ಲಿ ಜಗಳ ಕಾಯುವುದಿಲ್ಲ. ಇದು ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗಿದೆ.

ವೀಡಿಯೋ ನೋಡಿ

ಪ್ರಸ್ತುತ ಸುಂದರ ವಿಡಿಯೋವನ್ನು ಐಎಫ್ಎಸ್ ಅಧಿಕಾರಿಯಾದ ಸುಸಾಂತ್ ನಂದಾ ಅವರು ತಮ್ಮ ಟ್ವಿಟರ್ ಹ್ಯಾಂಡಲ್ ನಿಂದ ಶೇರ್ ಮಾಡಿದ್ದಾರೆ. ಈ ವೀಡಿಯೋವನ್ನು ಇಲ್ಲಿಯವರೆಗೆ ಸಾವಿರಾರು ಸಂಖ್ಯೆಯಲ್ಲಿ ವೀಕ್ಷಣೆಯನ್ನು ಪಡೆದಿದೆ. ಹಾಗೂ ಲೈಕ್ಸ್ ಗಳನ್ನು ಸಹ ಹೊಂದಿದೆ. ವಿಡಿಯೋ ನೋಡಿದ ನೆಟ್ಟಿಗರು ಅನೇಕ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಒಬ್ಬ ಯೂಸರ್ ಬಹುಶಃ ನಮೀಬಿಯಾದಿಂದ ಹೊಸದಾಗಿ ಬಂದ ಚಿರತೆಗಳಿಂದ ಸ್ವರಕ್ಷಣೆ ಮಾಡಿಕೊಳ್ಳಲು ಬಾಕ್ಸಿಂಗ್ ಫೈಟ್ ಪ್ರಾಕ್ಟೀಸ್ ಮಾಡುತ್ತಿರಬಹುದು ಎಂದಿದ್ದಾನೆ.

Leave a Comment

Your email address will not be published. Required fields are marked *