VIDEO : ಇದು ಜಗತ್ತಿನ ಅತ್ಯಂತ ನಿರ್ಭೀತ ಹಾಗೂ ಕೋಪಿಷ್ಟ ಪ್ರಾಣಿ! ಕಾಡಿನ ರಾಜ ಸಿಂಹವನ್ನೆ ಹೆದರಿಸಿ ಓಡಿಸುತ್ತದೆ!! ವಿಡಿಯೊ ನೋಡಿ
ವಿಡಿಯೊ ನೋಡುವ ಮೊದಲು ಅದರ ಬಗೆಗಿನ ಮಾಹಿತಿ ಓದಿ, ಅದೂ ಅಲ್ಲದೇ ವಿಡಿಯೊದಲ್ಲಿರುವ ಭಾಷೆ ಹಿಂದಿಯಾದ್ದರಿಂದ ಇಲ್ಲಿ ನೀವು ಅದರ ಬಗೆಗೆ ಕನ್ನಡದಲ್ಲಿ ಮಾಹಿತಿ ತಿಳಿದು ನಂತರ ವಿಡಿಯೊ ನೋಡಿ… ಹನಿ ಬಜರ್ (Honey Badger) ಎಂದು ಕರೆಯಲಾಗುವ ಇದು ಕೇವಲ ನಿರ್ಭೀತ – ಧೈರ್ಯವಂತ – ಕೋಪಿಷ್ಟ ಪ್ರಾಣಿ ಮಾತ್ರ ಅಲ್ಲ, ಅದು ಸಕತ್ ಬುದ್ದಿವಂತ ಜೀವಿ ಕೂಡ ಹೌದು, ಅದನ್ನು ಇತರೆ ಪ್ರಾಣಿಗಳ ಹಾಗೆ ಬಂಧಿಸಿಡುವುದು ಅಸಾಧ್ಯ.
ನಿಮಗೆಲ್ಲ ತಿಳಿದಿರುವ ಹಾಗೆ ಜಗತ್ತಿನ ಎಲ್ಲಾ ವಾಸಯೋಗ್ಯ ಪ್ರದೇಶದಲ್ಲಿ ವಾಸಿಸುವ ಪ್ರಾಣಿಗಳಲ್ಲಿ ಜಲವಾಸಿಯಾದ ನೀಲಿ ತಿಮಿಂಗಿಲು ಅತ್ಯಂತ ದೈತ್ಯ ಹಾಗೂ ಭಯಾನಕ ಪ್ರಾಣಿಯಾಗಿದೆ, ಆದರೆ ಭೂಮಿಯ ಮೇಲೆ ವಾಸಿಸುವ ಅತ್ಯಂತ ದೈತ್ಯ ಪ್ರಾಣಿ ಎಂದರೆ ಅದು ಆನೆ. ಮತ್ತು ಭೂಮಿಯ ಮೇಲೆ ಅಂದರೆ ಕಾಡಿನಲ್ಲಿ ವಾಸಿಸುವ ಅತ್ಯಂತ ಕ್ರೂ’ರ ಪ್ರಾಣಿ ಎಂದರೆ ಅದು ಸಿಂಹ.
ಸಿಂಹವನ್ನು ಕಾಡಿನ ರಾಜ ಎಂದು ಕೂಡ ಕರೆಯಲಾಗುತ್ತದೆ. ಮದಗಜವನ್ನು ಕೂಡ ಭೇಟೆಯಾಡುವ ಛಾತಿಯನ್ನು ಈ ಸಿಂಹ ಹೊಂದಿರುತ್ತದೆ. ಆದರೆ ಈ ಸಿಂಹವನ್ನೂ ಕೂಡ ಹೆದರಿಸಿ ಓಡಿಸುವ ಪ್ರಾಣಿಯೊಂದಿದೆ, ಅದೇನು ದೈತ್ಯಾಕಾರದ್ದಲ್ಲವಾದರೂ ಅದನ್ನು ಜಗತ್ತಿನ ಅತ್ಯಂತ ನಿರ್ಭೀತ, ಕೋಪಿಷ್ಟ ಹಾಗೂ ಅತ್ಯಂತ ಚಾಲಕಿ ಪ್ರಾಣಿ ಎಂದು ಪರಿಗಣಿಸಲಾಗುತ್ತದೆ.

ನೋಡಲು ಏನೂ ಗೊತ್ತಿಲ್ಲದ ಮುಗ್ಧ ಪ್ರಾಣಿಯಂತೆ ಕಂಡರೂ ಸಾಕಷ್ಟು ಯೋಚನಾ ಶಕ್ತಿ ಹೊಂದಿರುವ ಹನಿ ಬಜರ್ ಅಥವಾ ಜೇನು ಕರಡಿ (?) ಯ ಬಗ್ಗೆ ತುಂಬಾ ಜನರಿಗೆ ಸರಿಯಾದ ಮಾಹಿತಿ ಇಲ್ಲ. ಆ ಬಗೆಗೆ ಅಗತ್ಯ ಮಾಹಿತಿ ಒದಗಿಸುವುದು ಈ ಬರಹದ ಉದ್ದೇಶ. ಬನ್ನಿ ಆ ಪ್ರಾಣಿಯ ವಿಶೇಷತೆ – ಚಾಣಾಕ್ಷತೆ – ಎದೆಗಾರಿಕೆ ಎಂಥದೂ ಎಂದು ನೋಡೋಣ…
ಆಫ್ರಿಕಾ, ನೈರುತ್ಯ ಏಷ್ಯಾ ಖಂಡ ಹಾಗೂ ಭಾರತದ ದ್ವಿಪಗಳಲ್ಲಿ ಹೆಚ್ಚಾಗಿ ಕಂಡುಬರುವ ಈ ಪ್ರಾಣಿಯ ಹೆಸರು ಹನಿ ಬಜರ್ (ಜೇನು ಕರಡಿ) ಎಂದು. ನೋಡಲು ಸ್ವಲ್ಪ ಮುಂಗುಸಿಯಂತೆ ಹೋಲಿಕೆ ಹಾಗೂ ಕರಡಿಯಂತೆ ಹೋಲಿಕೆ ಮತ್ತು ಗಾತ್ರ ಹೊಂದಿರುವ ಈ ಪ್ರಾಣಿ ಅದೆಷ್ಟು ಕೋಪಿಷ್ಟನೆಂದರೆ, ತನ್ನನ್ನು ಕೆಣಕಲು ಬಂದ ಯಾರನ್ನೂ ಸಹ ಸುಮ್ಮನೆ ಬಿಡುವುದಿಲ್ಲ!
ಅದು ಕಾಡಿನ ರಾಜ ಸಿಂಹವೇ ಆಗಿರಲಿ ಡೇಂ’ಜ’ರಸ್ ಹುಲಿ – ಚಿರತೆ – ಹೆಬ್ಬಾವು ಹೀಗೆ ಯಾವುದಾದರೂ ಸರಿ, ಹನಿ ಬಜರ್ ಅದನ್ನು ಹೆದರಿಸಿ ಓಡಿಸದೇ ಬಿಡದು. ಈ ಕಾರಣಕ್ಕೇ ಈ ಖ’ತ’ರ್ನಾ’ಕ್ ಪ್ರಾಣಿಯ ಹೆಸರು ಗಿನ್ನೆಸ್ ರೆಕಾರ್ಡ್ ಪುಸ್ತಕದಲ್ಲಿ ಜಗತ್ತಿನ ಅತ್ಯಂತ ಕೋಪಿಷ್ಟ ಹಾಗೂ ಕ್ರೂ’ರ ಪ್ರಾಣಿಯೆಂದು ದಾಖಲಾಗಿದೆ!

ಈ ಪ್ರಾಣಿ ಕೇವಲ ಕ್ರೂರಿ ಮತ್ತು ಕೋಪಿಷ್ಟ ಮಾತ್ರ ಅಲ್ಲ, ಬದಲಾಗಿ ಅತ್ಯಂತ ಬುದ್ಧಿವಂತ ಕೂಡ ಹೌದು. ಏಕೆಂದರೆ ಇದನ್ನು ಒಂದೆಡೆ ಬಂಧಿಸಿ ಇಡುವುದು ಅಷ್ಟು ಸುಲಭದ ಮಾತಲ್ಲ, ಬಂಧಿಸುವುದು ಅಸಾಧ್ಯ ಎಂದರೂ ಪರವಾಗಿಲ್ಲ. ಮೊಹೋಲೊಹೋಲೊ ಎಂಬ ವಿಶ್ವ ವಿಖ್ಯಾತ ವನ್ಯ ಮೃಗಗಳ ಕೇಂದ್ರದಲ್ಲಿ ಇದನ್ನು ಬಂಧಿಸುವ ವಿಫಲ ಪ್ರಯತ್ನ ನಡೆಸಲಾಗಿತ್ತು.
ಇದನ್ನು ನಾಲ್ಕು ಗೋಡೆಗಳ ಮಧ್ಯ ಬಂಧಿಸಿಟ್ಟು ಅದರ ಬಾಗಿಲು ಹಾಕಿದರು, ಆದರೆ ಈ ಚಾಲಾಕಿ ಪ್ರಾಣಿ ಆ ಬಾಗಿಲಿನ ಕೊಂಡಿಯನ್ನು ತೆಗೆಯಲು ಯಶಸ್ವಿಯಾಯಿತು, ನಂತರ ಅವರು ಆ ಬಾಗಿಲಿನ ಕೊಂಡಿ(ಚಿಲಕ)ಗೆ ತಂತಿಯನ್ನು ಸುತ್ತಿದರು. ತಂತಿಯನ್ನೂ ಕೂಡ ತೆಗೆದು ಈ ಜೇನು ಕರಡಿ ಹೊರಬಂದಿತು.
ನಂತರ ಅವರು ಆ ಗೇಟು ಬರದೇ ಇರುವಂತೆ ಬಿಗಿದಿಟ್ಟರು ಆದರೂ ಅದು ಭೂಮಿಯನ್ನೂ ಅಗೆದು ಸುರಂಗ ಮಾಡಿಕೊಂಡು ಹೊರಬಂದಿತು! ಕಲ್ಲನ್ನು ಒಂದರ ಮೇಲೊಂದು ಇಟ್ಟುಕೊಂಡು ಕಂಪೌಂಡ್ ಹತ್ತಿ ಓಡಿತು. ಒಟ್ಟಿನಲ್ಲಿ ಏನಾದರೂ ತಲೆ ಓಡಿಸಿ ಅದು ಪರಾರಿಯಾಗುತ್ತಿತ್ತು, ಅದನ್ನು ವಿಡಿಯೊದಲ್ಲಿ ನೋಡಬಹುದು.

ಮೊದಲೇ ಹೇಳಿದಂತೆ ಇದು ನೀವೆಲ್ಲ ಸಾಮಾನ್ಯವಾಗಿ ನೋಡುವ ಮುಂಗುಸಿಯಂತೆಯೇ ಹೋಲಿಕೆ ಇರುತ್ತದೆ, ಆದರೆ ದೇಹದ ಗಾತ್ರ ಸ್ವಲ್ಪ ದೊಡ್ಡದಾಗಿರುತ್ತದೆ. ಇದರ ದೇಹದ ಮೇಲೆ ಉದ್ದುದ್ದ ಕೂದಲು ಹಾಗೂ ಕಾಲಿನಲ್ಲಿ ಉದ್ದವಾದ ಬೆರಳು ಹಾಗೂ ಉಗುರುಗಳನ್ನು ಹೊಂದಿರುತ್ತವೆ. ದೇಹದ ಮೇಲ್ಭಾಗ ಅಂದರೆ ಬೆನ್ನು ತೆಳು ಬಿಳಿ ಬಣ್ಣ ಹಾಗೂ ಪೂರ್ತಿ ದೇಹ ಕಪ್ಪು ಬಣ್ಣದಿಂದ ಕೂಡಿರುತ್ತದೆ.
ಇದು ಸರ್ವೇ ಸಾಮಾನ್ಯವಾಗಿ ಕಾಡಿನಲ್ಲಿರುವ ಸಣ್ಣ ಪುಟ್ಟ ಪ್ರಾಣಿಗಳನ್ನು ತಿಂದು ಬದುಕುತ್ತದೆ. ಅಕಸ್ಮಾತ್ ಪ್ರಾಣಿಗಳು ಸಿಗದೇ ಇದ್ದರೆ ಏನೂ ಬೇಕಾದರೂ ತಿಂದು ಬದುಕುತ್ತದೆ. ಇವು ಹೆಚ್ಚಾಗಿ ನದಿಯ ದಡದಲ್ಲಿ 10 ರಿಂದ 15 ಅಡಿಯಷ್ಟು ಉದ್ದದ ಸುರಂಗ ತೋಡಿಕೊಂಡು ಅಲ್ಲಿಯೇ ವಾಸಿಸುತ್ತವೆ.
ವಿಶೇಷ ಎಂದರೆ ಇದು ಸ್ವತಃ ತಾನೇ ತನ್ನ ಮನೆ ನಿರ್ಮಿಸಿಕೊಳ್ಳುವದಿಲ್ಲ, ಬದಲಾಗಿ ಬೇರೆ ಪ್ರಾಣಿಗಳು ನಿರ್ಮಿಸಿದ ಮನೆಗಳಿಗೆ ನುಗ್ಗಿ ಅವುಗಳನ್ನೇ ಭೇಟೆಯಾಡಿ ಅಥವಾ ಹೆದರಿಸಿ ಅವುಗಳನ್ನು ಓಡಿಸಿ ಆ ಮನೆಯನ್ನೇ ತಮ್ಮದಾಗಿಸಿಕೊಳ್ಳುತ್ತವೆ! ತನಗೆ ಇಷ್ಟವಾದ ಮನೆ – ಗುಹೆಯನ್ನು ಇದು ಯಾವ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ.

ಇದರ ಈ ಆ’ಕ್ರ’ಮ’ಣ’ಕಾ’ರಿ ಹಾಗೂ ಕೋಪಿಷ್ಟ ಸ್ವಭಾವದಿಂದಾಗಿ ಬೇರೆ ಪ್ರಾಣಿಗಳು ಇದರಿಂದ ದೂರವೇ ಇರುತ್ತವೆ. ಇದು ತನ್ನ ಮರಿಗಳ ರಕ್ಷಣೆಗಾಗಿ ಸಿಂಹ ಹಾಗೂ ಇನ್ನಿತರೇ ದೊಡ್ಡ ದೊಡ್ಡ ಕ್ರೂ’ರ ಮೃಗಗಳನ್ನು ಕೂಡ ಹೆದರಿಸಿಕೊಳ್ಳುತ್ತದೆ. ಇನ್ನೂ ಸಣ್ಣ ಪುಟ್ಟ ಪ್ರಾಣಿಗಳಂತೂ ಇದನ್ನು ಕಂಡರೆ ಇದರೊಂದಿಗೆ ಕಾದಾಡುವುದಿರಲಿ ಹತ್ತಿರ ಬರಲು ಸಹ ಹತ್ತು ಬಾರಿ ಯೋಚಿಸುತ್ತವೆ!
ವಿ’ಷಕಾರಿ ಜಂತುಗಳಾದ ಹಾವುಗಳು ಕೂಡ ಈ ಪ್ರಾಣಿಗಳನ್ನು ಏನೂ ಮಾಡಲು ಸಾಧ್ಯವಿಲ್ಲ, ಏಕೆಂದರೆ ಇದರ ದೇಹ ವಿ’ಷ ನಿರೋಧಕ ಶಕ್ತಿ ಹೊಂದಿರುವದರಿಂದ ಹಾವಿನ ವಿ’ಷ ಅದನ್ನು ಏನೂ ಮಾಡಿಕೊಳ್ಳುವುದಿಲ್ಲ. ಉದ್ದುದ್ದ ಉಗುರುಗಳಿರುವದರಿಂದ ಇದು ಹಾವುಗಳನ್ನು ಒಂದೇ ಏಟಿಗೆ ಹೊಡೆದು ಬಿಸಾಕುತ್ತದೆ.
ಇಷ್ಟೆಲ್ಲ ವಿಶೇಷತೆ ಇರುವ ಈ ಪ್ರಾಣಿಯ ಕಿವಿ ಹಾಗೂ ಕಣ್ಣುಗಳು ಬಹಳ ಚಿಕ್ಕ ಗಾತ್ರದಲ್ಲಿರುತ್ತವೆ. ಇವು ಕೆಲವೊಮ್ಮೆ ಭಾರತದಲ್ಲಿ ಸಣ್ಣ ಮಕ್ಕಳ ಮೇಲೆಯೂ ಸಹ ಹಲ್ಲೆ ಮಾಡಿರುವ ವರದಿಗಳಾಗಿವೆ. ಒಟ್ಟಾರೆಯಾಗಿ ಅದರ ದಾರಿಗೆ ಯಾರೂ ಅಡ್ಡ ಬರಬಾರದು, ಅದನ್ನು ಯಾರೂ ತಡುವಬಾರದು, ಇದು ಅದರ ಪಾಲಿಸಿ!
ಅತೀ ಹೆಚ್ಚಾಗಿ ಮಾಂಸವನ್ನು ತಿಂದು ಬದುಕುವ ಈ ಪ್ರಾಣಿಗಳು ಅಕಸ್ಮಾತ್ ಕಂಡುಬಂದಲ್ಲಿ ಆದಷ್ಟು ಅದರಿಂದ ದೂರವೇ ಇರುವುದು ಒಳಿತು. ಏಕೆಂದರೆ ಈಗಾಗಲೇ ತಿಳಿಸಿದ ಹಾಗೆ ಹುಲಿ ಸಿಂಹಗಳಿಗೂ ಹೆದರದ ಈ ಪ್ರಾಣಿ ಮನುಷ್ಯರಿಗಂತೂ ಹೆದರುವ ಮಾತೆ ಇಲ್ಲ, ಎಚ್ಚರಿಕೆ ಇರಲಿ.
-ಮಂಜುನಾಥ್