ಶುಗರ್ ಕಂಟ್ರೋಲ್ ಮಾಡುವುದು ಹೇಗೆ? 10 ಟಿಪ್ಸ್ | How to control diabetes?

ಶುಗರ್ ಕಂಟ್ರೋಲ್ ಮಾಡುವುದು ಹೇಗೆ?

ಶುಗರ್ ಕಂಟ್ರೋಲ್ ಮಾಡುವುದು ಹೇಗೆ?: ಈಗಿನ ಜೀವನ ಶೈಲಿಯಲ್ಲಿ 40 ರ ನಂತರ ಡಯಾಬಿಟಿಸ್ ಅಥವಾ ಸಕ್ಕರೆ ಕಾಯಿಲೆ ಅಥವಾ ಮಧುಮೇಹ ಬರುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ, ಅದರಲ್ಲಿಯೂ ಪುರುಷ ರೋಗಿಗಳ ಸಂಖ್ಯೆಯಂತೂ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ನನಗೆ ಸಕ್ಕರೆ ಕಾಯಿಲೆ ಇದೆ ಇದನ್ನು ನಿಯಂತ್ರಣದಲ್ಲಿಟ್ಟುಕೊಂಡು ನಾನು ಬದುಕುವುದು ಹೇಗೆ ಎಂಬ ಚಿಂತೆ ಬಹುತೇಕ ಡಯಾಬಿಟಿಸ್ ರೋಗಿಗಳನ್ನು ಕಾಡುತ್ತಲೇ ಇರುತ್ತದೆ. ಅದಕ್ಕಾಗಿ ನೀವು ಚಿಂತೆ ಮಾಡಬೇಕಿಲ್ಲ, ಬದಲಾಗಿ ನಿಮ್ಮ ಆಹಾರಕ್ರಮ ಹಾಗೂ ಜೀವನಶೈಲಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡರೆ ಸಾಕು, ಡಯಾಬಿಟಿಸ್ ನಿಂದ ನಿಮ್ಮ ದೇಹಕ್ಕಾಗುವ ಹಾನಿಯಿಂದ ನೀವು ರಕ್ಷಿಸಿಕೊಳ್ಳಬಹುದು. ಇಂದಿನ ಲೇಖನದಲ್ಲಿ ನಾವು ಶುಗರ್ ಕಂಟ್ರೋಲ್ ಮಾಡುವುದು ಹೇಗೆ? (How to control diabetes) ಎಂಬ ಬಗ್ಗೆ ನೋಡೋಣ.

ಶುಗರ್ ಕಂಟ್ರೋಲ್ ಮಾಡುವುದು ಹೇಗೆ?

ಇನ್ಸೂಲಿನ ಪ್ರತಿರೋಧದ ನಡುವೆ ಆಹಾರದ ಪರಿಣಾಮ :

ಅಕ್ಕಿ, ಬ್ರೆಡ್ ಹಾಗೂ ಕಲ್ಲಂಗಡಿಗಳತಹ ಹೆಚ್ಚಿನ GI (ಗ್ಲೈಸೆಮಿಕ್ ಇಂಡೆಕ್ಸ್) ಹೊಂದಿರುವ ಆಹಾರ ಪದಾರ್ಥಗಳಿಂದ ನಿಮ್ಮ ದೇಹದಲ್ಲಿ ಹರಿಯುವ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗಿ ಡಯಾಬಿಟಿಸ್ ಬರುತ್ತದೆ. ಓಟ್ಸ್ ಮತ್ತು ಅವಕಾಡೋಗಳಂತಹ ಕಡಿಮೆ GI ಆಹಾರಗಳು ನಿಧಾನವಾಗಿ ಜೀರ್ಣವಾಗುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶ ವೇಗವಾಗಿ ಹೆಚ್ಚಾಗುವುದಿಲ್ಲ. ಅತಿಯಾಗಿ ಪ್ರೊಸೆಸ್ ಮಾಡಿದ ಆಹಾರ ಸೇವನೆ ಮಾಡುವುದರಿಂದ ಅಂತಹ ಆಹಾರ ಪದಾರ್ಥಗಳಲ್ಲಿರುವ ಹೈ ಕಾರ್ಬೋಹೈಡ್ರೇಟ್ ಮತ್ತು ಸ್ಯಾಚುರೆಟೆಡ್ ಫ್ಯಾಟ್ಸ್ ಸೇವನೆಯು ಇನ್ಸೂಲಿನ ಪ್ರತಿರೋಧದ ಮೇಲೆ ಪರಿಣಾಮ ಬೀರುತ್ತವೆ, ಅಂದರೆ ಅಂತಹ ಆಹಾರ ಪದಾರ್ಥಗಳು ಬಹುಬೇಗನೆ ಜೀರ್ಣವಾಗಿ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚುತ್ತಾ ಸಾಗುತ್ತದೆ.

ಹಾಗಾಗಿ ನಿಮ್ಮ ಡಯಟ್ ಹಾಗೂ ಬ್ಲಡ್ ಶುಗರ್ ಲೆವೆಲ್ ಗಳ ಏರಿಳಿತಕ್ಕೂ ಇರುವ ಸಂಬಂಧವೇನು? ಹಾಗೇನೇ ಯಾವ ರೀತಿ ಆಹಾರ ಕ್ರಮ ಹಾಗೂ ಜೀವನಶೈಲಿ ಅಳವಡಿಸಿಕೊಂಡರೆ ಬ್ಲಡ್ ಶುಗರ್ ಲೆವೆಲ್ ಅನ್ನು ಕಂಟ್ರೋಲ್ ನಲ್ಲಿ ಇಡಬಹುದು ಎಂಬ ಸಂಕ್ಷಿಪ್ತ ಮಾಹಿತಿಯನ್ನು ನೋಡೋಣ.

ಬ್ಲಡ್ ಶುಗರ್ ಲೆವೆಲ್ ಸರಿಯಾಗಿಟ್ಟುಕೊಳ್ಳುವ ಡಯಟ್

How to control diabetes

ಕಾರ್ಬೋಹೈಡ್ರೇಟ್ ಗಳ ಪ್ರಭಾವ :

ಕಡಿಮೆ ಕಾರ್ಬೋಹೈಡ್ರೇಟ್ಸ್ ಹೊಂದಿರುವ ಆಹಾರ ಪದಾರ್ಥಗಳ ಸೇವನೆಯಿಂದ ಬ್ಲಡ್ ಶುಗರ್ ಲೆವೆಲ್ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು, ಉದಾಹರಣೆಗೆ ಮೊಟ್ಟೆ, ಹಸಿ ತರಕಾರಿ, ಸೊಪ್ಪು, ಬ್ರೋಕೋಲಿ, ಹುಕೋಸು ಇತ್ಯಾದಿ.

ಗ್ಲೈಸೆಮಿಕ್ ಇಂಡೆಕ್ಸ್ :

ಕಡಿಮೆ ಜಿಐ ಹೊಂದಿರುವ ಆಹಾರ ಪದಾರ್ಥಗಳ ಸೇವನೆಯಿಂದಲೂ ಸಹ ಬ್ಲಡ್ ಶುಗರ್ ಲೆವೆಲ್ ಅನ್ನು ಹತೋಟಿಯಲ್ಲಿಡಬಹುದು, ಉದಾಹರಣೆಗೆ ಅವಕಾಡೋ, ಏಪ್ರಿಕಾಟ್ ಇತ್ಯಾದಿ. ಇದರೊಟ್ಟಿಗೆ ಯಾವುದೇ ಆಹಾರ ಪದಾರ್ಥಗಳ ಸೇವನೆಯಾಗಲಿ ಒಂದು ಲಿಮಿಟ್ ನಲ್ಲಿ ಮಾಡಿದರೆ ಬ್ಲಡ್ ಶುಗರ್ ಲೆವೆಲ್ ಕಂಟ್ರೋಲ್ ಮಾಡಬಹುದು.

ಹೆಚ್ಚು ಫೈಬರ್ (ನಾರಿನಾಂಶಯುಕ್ತ) ಆಹಾರ ಸೇವನೆ :

ನಿಮಗೆ ಈಗಾಗಲೇ ತಿಳಿದಿರುವಂತೆ ಹೈ ಪ್ರೊಸೆಸ್ಡ್ ಆಹಾರ ಪದಾರ್ಥಗಳ ಸೇವನೆಯಿಂದ ಅವುಗಳ ಜೀರ್ಣಕ್ರಿಯೆ ಬಹುಬೇಗನೆ ಆಗುವ ಕಾರಣವೇ ನಿಮ್ಮ ಬ್ಲಡ್ ಶುಗರ್ ಲೆವೆಲ್ ಹೆಚ್ಚಾಗುತ್ತದೆ. ಹಾಗಾಗಿ ನಿಧಾನವಾಗಿ ಜೀರ್ಣವಾಗುವ ನಾರಿನಂಶ ಹೆಚ್ಚಾಗಿರುವ ಆಹಾರ ಪದಾರ್ಥಗಳ ಸೇವನೆ ಮಾಡುವುದರಿಂದ ಬಹುಪಾಲು ನಿಮ್ಮ ಬ್ಲಡ್ ಶುಗರ್ ಲೆವೆಲ್ ಕಡಿಮೆಯಾಗುವುದಲ್ಲದೇ, ನಿಮ್ಮ ದೇಹದ ತೂಕ ಕೂಡ ಹಿಡಿತದಲ್ಲಿರುತ್ತದೆ.

ಸಿಹಿ ಖಾದ್ಯಗಳಿಂದ ದೂರವಿರಿ ಮತ್ತು ಸಮತೋಲಿತ ಆಹಾರ ಸೇವಿಸಿ :

ಸಕ್ಕರೆಯಿಂದ ತಯಾರಿಸಿದ ಆಹಾರ ಪದಾರ್ಥಗಳು ಹಾಗೂ ಪೇಯಗಳಿಂದ ದೂರವಿರುವುದು ಒಳ್ಳೆಯದು, ಅಕಸ್ಮಾತ್ ಸೇವನೆ ಮಾಡಲೇಬೇಕಾದ ಅನಿವಾರ್ಯತೆ ಇದ್ದಾಗ ನೈಸರ್ಗಿಕವಾಗಿ ಸಿಗುವ ಸಿಹಿ ಪದಾರ್ಥ ಸೇವಿಸಿ. ಹಾಗೇನೇ ಊಟದಲ್ಲಿ ಕಾರ್ಬೋಹೈಡ್ರೇಟ್ಸ್, ಪ್ರೊಟೀನ್ಸ್ ಹಾಗೂ ವಿಟಮಿನ್ಸ್, ಹೆಲ್ದಿ ಫ್ಯಾಟ್ಸ್ ಹಾಗೂ ಫೈಬರ್ ನ ಅಂಶವನ್ನು ಹೊಂದಿ ಒಟ್ಟಾರೆಯಾಗಿ ಸಮತೋಲನ ಹೊಂದಿರುವ ಆಹಾರ ಪದಾರ್ಥವನ್ನು ಸೇವಿಸಿ.

ದುಶ್ಚಟಗಳಿಂದ ದೂರವಿರಿ :

ಆಹಾರ ಸೇವನೆಯನ್ನು ಯಾವಾಗ ಬೇಕಾದರೂ ಮಾಡಬೇಡಿ, ಬದಲಾಗಿ ಆಹಾರ ಸೇವನೆಗಾಗಿಯೇ ಒಂದು ಸಮಯ ಫಿಕ್ಸ್ ಮಾಡಿಕೊಳ್ಳಿ, ಇದರೊಟ್ಟಿಗೆ ದುಶ್ಚಟಗಳಿಂದ ದೂರವಿರಿ. ಪ್ರೊಟೀನ್ ಯುಕ್ತ ಆಹಾರ ಸೇವನೆಯಿಂದ ನಿಮ್ಮ ಬ್ಲಡ್ ಶುಗರ್ ಲೆವೆಲ್ ನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಬದಲಾಗಿ ನಿಮ್ಮ ದೇಹ ಸದೃಢವಾಗುತ್ತದೆ ಎಂಬ ಅಂಶ ನೆನಪಿರಲಿ.

ನಿಮ್ಮ ಊಟದ ತಟ್ಟೆಯನ್ನು ನೀವೇ ಹಾಕಿಕೊಳ್ಳಿ :

ಬೆಳಗಿನ ಉಪಹಾರ, ಮಧ್ಯಾಹ್ನದ ಭೋಜನ ಹಾಗೂ ರಾತ್ರಿ ಭೋಜನಗಳ ತಟ್ಟೆಗಳನ್ನು ಖುದ್ದಾಗಿ ನೀವೇ ಹಾಕಿಕೊಂಡರೆ ಬಹಳಷ್ಟು ಲಾಭಗಳಿವೆ, ಅಂದರೆ ನಿಮ್ಮ ಅರ್ಧ ಪ್ಲೇಟ್ ಸ್ಟಾರ್ಚ್ ಇಲ್ಲದ ಆಹಾರ ಪದಾರ್ಥಗಳಿಂದ ಅಂದರೆ ಹೇರಳವಾಗಿ ಫೈಬರ್ ನ ಅಂಶವಿರುವ ಆಹಾರ ಪದಾರ್ಥ ಗಳಿಂದ ತುಂಬಿರಬೇಕು, ಕಾಲು ಭಾಗ ಪ್ರೊಟೀನ್ ಭರಿತ ಆಹಾರವಿದ್ದರೆ ಮತ್ತೆ ಕಾಲುಭಾಗದಲ್ಲಿ ಹೋಲ್ ಗ್ರೇನ್ಸ್ ನಿಂದ ತುಂಬಿದ್ದರೆ ನಿಮ್ಮ ಬ್ಲಡ್ ಶುಗರ್ ಲೆವೆಲ್ ನಿಮ್ಮ ಹಿಡಿತದಲ್ಲಿರುತ್ತದೆ.

How to control diabetes

ದೇಹದ ತೂಕವನ್ನು ಕಂಟ್ರೋಲ್ ನಲ್ಲಿಡಿ :

ದೇಹದಲ್ಲಿ ಅನ್ ಸ್ಯಾಚುರೆಟೆಡ್ ಫ್ಯಾಟ್ಸ್ ನ ಶೇಖರಣೆಯಿಂದ ಕೇವಲ ಸಕ್ಕರೆ ಕಾಯಿಲೆ ಮಾತ್ರವಲ್ಲ ಬದಲಾಗಿ ಹೃದಯಾಘಾತದಂತಹ ಪ್ರಾಣಹಾನಿಯನ್ನುಂಟು ಮಾಡುವ ಕಾಯಿಲೆಗಳು ಸಹ ನಿಮ್ಮನ್ನು ಅವರಿಸಿಕೊಳ್ಳಬಹುದು. ಹಾಗಾಗಿ ನಿಯಮಿತವಾಗಿ ನಿರ್ಧಿಷ್ಟ ಸಮಯದಲ್ಲಿ ಉತ್ತಮ ಮಾರ್ಗದರ್ಶಕರ ಸಹಾಯದಿಂದ ವ್ಯಾಯಾಮ ಮಾಡುವುದರಿಂದ ನಿಮ್ಮ ದೇಹದ ತೂಕ ಕಡಿಮೆಯಾಗುವುದರೊಟ್ಟಿಗೆ ಬ್ಲಡ್ ಶುಗರ್ ಲೆವೆಲ್ ಹಿಡಿತವಿಟ್ಟುಕೊಳ್ಳಬಹುದು.

ಒತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಂಡು ಒಳ್ಳೆಯ ನಿದ್ರೆ ಮಾಡಿ :

ಸಧ್ಯದ ದಿನಮಾನಗಳಲ್ಲಿ ಒತ್ತಡವಿಲ್ಲದ ಜೀವನವೇ ಇಲ್ಲ, ಆದರೂ ಸಹ ಯೋಗ ಧ್ಯಾನ ಇತ್ಯಾದಿ ಇತ್ಯಾದಿ ಉತ್ತಮ ಅಭ್ಯಾಸಗಳಲ್ಲಿ ತೊಡಗಿಸಿಕೊಂಡು ಒತ್ತಡ ನಿಭಾಯಿಸಿಕೊಳ್ಳಿ ಹಾಗೂ ಒಳ್ಳೆಯ ಸುಖನಿದ್ರೆ ಮಾಡಿ, ಇದರಿಂದ ನಿಮ್ಮ ಬ್ಲಡ್ ಶುಗರ್ ಲೆವೆಲ್ ಅನ್ನು ಕಂಟ್ರೋಲ್ ನಲ್ಲಿಟ್ಟುಕೊಳ್ಳಬಹುದು, ಅಲ್ಲದೇ ದೀರ್ಘಾಯುಷ್ಯ ಪಡೆಯಬಹುದು.

ಇಂದು ನಾವು ಕೊಟ್ಟ ಮಾಹಿತಿ ಶುಗರ್ ಕಂಟ್ರೋಲ್ ಮಾಡುವುದು ಹೇಗೆ? ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ!

ಇನ್ನೂ ಓದಿ:

  1. New 200+ Love Quotes in Kannada | 200+ ಪ್ರೀತಿಯ ಸಂದೇಶಗಳು
  2. ಗರ್ಭಾವಸ್ಥೆಯ ಆರಂಭಿಕ ಲಕ್ಷಣಗಳು ತಿಳಿದುಕೊಳ್ಳಿ
  3. New 200+ Love Quotes in Kannada | 200+ ಪ್ರೀತಿಯ ಸಂದೇಶಗಳು
  4. ಪೈಲ್ಸ್ ಹೇಗೆ ಬರುತ್ತದೆ? ಬರದ ಹಾಗೆ ತಡೆಯುವುದು ಹೇಗೆ? ಬಂದ ಮೇಲೆ ಪರಿಹಾರವೇನು?
  5. ಗರ್ಭಿಣಿ ಆಗುವುದು ಹೇಗೆ? ಇವುಗಳ ಕಡೆಗೆ ಗಮನ ಕೊಟ್ಟರೆ ಗರ್ಭ ಧಾರಣೆ ಪಕ್ಕಾ!
  6. ಚಿಯಾ ಬೀಜದ ಉಪಯೋಗಗಳು ಮತ್ತು ಅಡ್ಡ ಪರಿಣಾಮಗಳು | Chia Seeds In Kannada