ಗರ್ಭಿಣಿ ಆಗುವುದು ಹೇಗೆ? ಇವುಗಳ ಕಡೆಗೆ ಗಮನ ಕೊಟ್ಟರೆ ಗರ್ಭ ಧಾರಣೆ ಪಕ್ಕಾ!

ಭೂಮಿಯ ಮೇಲೆ ಹೆಣ್ಣಾಗಿ ಹುಟ್ಟಿದ ಮೇಲೆ ಮದುವೆಯಾಗುವುದು ಹಾಗೂ ಗರ್ಭವತಿಯಾಗಿ ಮಕ್ಕಳಿಗೆ ಜನ್ಮನೀಡಿ ಅವುಗಳ ಲಾಲನೆ ಪಾಲನೆ ಮಾಡುವುದು ಪ್ರತಿ ಹೆಣ್ಣಿನ ಕನಸಾಗಿರುತ್ತದೆ, ಆದರೆ ಕೆಲವೊಮ್ಮೆ ಹಲವಾರು ಕಾರಣಗಳಿಂದ ಅದೆಷ್ಟೋ ಸ್ತ್ರೀಯರಿಗೆ ಗರ್ಭಧಾರಣೆ ಸಾಧ್ಯವಾಗದೇ ಮಕ್ಕಳನ್ನು ಎತ್ತಿ ಆಡಿಸುವ ಕನಸು ಕನಸಾಗಿಯೇ ಉಳಿದಿರುತ್ತದೆ. ಅದಕ್ಕೆ ದೇಹದಲ್ಲಿನ ಕೆಲವು ಸಮಸ್ಯೆ ಹಾಗೂ ಜೀವನ ಶೈಲಿಯೂ ಸಹ ಪ್ರಮುಖ ಕಾರಣವಾಗಿರುತ್ತದೆ. ಮಗುವನ್ನು ಪಡೆಯುವ ಕನಸು ನನಸಾಗಿಸಿಕೊಳ್ಳಲು ಜೀವನದಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಿದ್ದು, ಅವುಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ ಬನ್ನಿ. “ಗರ್ಭಿಣಿ ಆಗುವುದು ಹೇಗೆ?” ಎಂಬುದು ಈ ಲೇಖನದ ಪ್ರಮುಖ ಸಾರಾಂಶ.

ಗರ್ಭಿಣಿ ಆಗುವುದು ಹೇಗೆ

ಗರ್ಭಿಣಿ ಆಗುವುದು ಹೇಗೆ?

 

ಪರಿಚಯ

ತಾಯಿಯಾಗುವುದು ತುಂಬಾ ಆಹ್ಲಾದಕರ ಭಾವನೆ, ಸಾಮಾನ್ಯವಾಗಿ ಎಲ್ಲಾ ಮಹಿಳೆಯರು ಈ ಅನುಭವ ಅನುಭವಿಸಲು ಬಯಸುತ್ತಾರೆ. ತ್ವರಿತವಾಗಿ ಗರ್ಭಿಣಿಯಾಗಲು ಯಾವುದೇ ಖಚಿತವಾದ ಸೂತ್ರವಿಲ್ಲ. ಆದರೆ ಗರ್ಭಾವಸ್ಥೆಯನ್ನು ತ್ವರಿತವಾಗಿ ಸಾಧಿಸಲು ಕೆಲವು ಬದಲಾವಣೆಗಳಿವೆ. ಶೀಘ್ರದಲ್ಲೇ ಗರ್ಭಿಣಿಯಾಗಲು ಸಹಾಯ ಮಾಡುವ ಅಂತಹ ಸಲಹೆಗಳನ್ನು ನಾವಿಲ್ಲಿ ನೋಡೋಣ.

ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ

ನಿಮಗೆಲ್ಲ ಗೊತ್ತಿರುವ ಹಾಗೇ ಮಹಿಳೆಯರ ದೇಹದಲ್ಲಿರುವ ಹಾರ್ಮೋನ್ ನ ಸಹಾಯದಿಂದ ಓವರಿಯಲ್ಲಿ ಅಂಡಾಣು ಉತ್ಪತ್ತಿಯಾಗುತ್ತದೆ, ಆ ಹಾರ್ಮೋನ್ ಸಮಪ್ರಮಾಣದಲ್ಲಿದ್ದರೆ ಮಾತ್ರ ಎಗ್ ಪ್ರೊಡಕ್ಷನ್ ಹಾಗೂ ಒವುಲೇಷನ್ ಆಗಲು ಸಹಕಾರಿಯಾಗುತ್ತದೆ. ಆದರೆ ಕೆಲವು ಮಹಿಳೆಯರ ದೇಹದ ತೂಕ ಅವರ ಎತ್ತರ ಹಾಗೂ ವಯಸ್ಸಿಗೆ ತಕ್ಕಂತೆ ಇರದೇ, ಹೆಚ್ಚು ಅಥವಾ ಕಡಿಮೆ ಇರುವ ಕಾರಣ ಹಾರ್ಮೋನ್ ಕಡಿಮೆ ಅಥವಾ ಹೆಚ್ಚು ಉತ್ಪತ್ತಿಯಾಗುತ್ತದೆ. ಇದರಿಂದಾಗಿ ಕೆಲವು ಮಹಿಳೆಯರಲ್ಲಿ ಎಗ್ ಪ್ರೊಡಕ್ಷನ್ ಆಗುವುದು ಕಷ್ಟಕರವಾಗಿ ಗರ್ಭವತಿಯಾಗುವುದು ತಡವಾಗುತ್ತಿರುತ್ತದೆ, ಹಾಗಾಗಿ ಮಹಿಳೆಯರು ತಮ್ಮ ಎತ್ತರ ಹಾಗೂ ವಯಸ್ಸಿಗೆ ಅನುಗುಣವಾಗಿ ತಮ್ಮ ದೇಹದ ತೂಕವನ್ನು ಕಾದುಕೊಳ್ಳುವುದು ಅತೀ ಮುಖ್ಯವಾಗಿರುತ್ತದೆ.

ನಿಯಮಿತ ವ್ಯಾಯಾಮ ಹಾಗೂ ಉತ್ತಮ ಆಹಾರ ಸೇವನೆ

ಮೇಲೆ ತಿಳಿಸಿದಂತೆ ಮಹಿಳೆಯರ ದೇಹದ ತೂಕ ಅವರ ಎತ್ತರ ಹಾಗೂ ವಯಸ್ಸಿಗೆ ಅನುಗುಣವಾಗಿ ಸಮತೋಲನದಿಂದ ಇರಬೇಕು, ಆ ರೀತಿ ದೇಹವನ್ನು ಸಮತೋಲನದಲ್ಲಿ ಇಡಬೇಕಾದರೆ ನಿಯಮಿತವಾದ, ಅಂದರೆ ಪ್ರೊಟೀನ್, ವಿಟಮಿನ್ ಹಾಗೂ ಐರನ್ ಕಂಟೆಂಟ್ ಚೆನ್ನಾಗಿರುವ ಆಹಾರ ಪದಾರ್ಥಗಳನ್ನು ನಿಯಮಿತವಾಗಿ ಸೇವನೆ ಮಾಡಬೇಕು ಹಾಗೂ ಹೆಚ್ಚು ಅಲ್ಲದ ಹಾಗೇನೇ ಕಡಿಮೆಯೂ ಅಲ್ಲದ ರೀತಿಯಲ್ಲಿ ಸಮತೋಲನದಲ್ಲಿ ದಿನನಿತ್ಯ ವ್ಯಾಯಾಮ ಮಾಡಬೇಕು. ಅಂದರೆ ಸ್ತ್ರೀ ಹಾಗೂ ಪುರುಷ ಇಬ್ಬರಲ್ಲಿಯೂ ಫರ್ಟಿಲಿಟಿ ಹೆಚ್ಚಾಗಿ ಆದಷ್ಟು ಬೇಗನೆ ಮಗು ಹೊಂದುವ ಕನಸು ನನಸಾಗುತ್ತದೆ.

ಗರ್ಭಿಣಿ ಆಗುವುದು ಹೇಗೆ

ಧೂಮ್ರಪಾನ ಮಧ್ಯಪಾನ ಹಾಗೂ ಕೆಫಿನ್ ಕಂಟೆಂಟ್ ಹೊಂದಿರುವ ಪೇಯಗಳಿಂದ ದೂರವಿರಿ

ಇತ್ತೀಚಿನ ದಿನಗಳಲ್ಲಿ ಭಾರತದಂತಹ ಸಂಸ್ಕೃತಿ – ಪರಂಪರೆಗೆ ಹೆಸರುವಾಸಿಯಾಗಿರುವ ದೇಶದಲ್ಲಿಯೂ ಸಹ ಲಿಂಗಭೇದವಿಲ್ಲದೇ ಧೂಮ್ರಪಾನ ಹಾಗೂ ಮಧ್ಯಪಾನ ಸೇವನೆ ಮಾಡುತ್ತಿದ್ದು, ಇದರಿಂದ ಸ್ತ್ರೀ ಹಾಗೂ ಮಹಿಳೆಯರ ಹಾರ್ಮೋನ್ ಗಳಲ್ಲಿ ವ್ಯತ್ಯಾಸವುಂಟಾಗಿ ಸ್ಪರ್ಮ್ ಕೌಂಟ್ ಹಾಗೂ ಒವುಲೇಷನ್ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದ ಮಕ್ಕಳಾಗುವಲ್ಲಿಯೂ ಸಹ ಸಮಸ್ಯೆ ಉಂಟಾಗುತ್ತಿದೆ. ಇದಲ್ಲದೇ ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನ ನಿಭಾಯಿಸುವಲ್ಲಿ ಎಡವುತ್ತಿರುವ ಯುವಜನತೆ ಕೆಫಿನ್ ಕಂಟೆಂಟ್ ಹೊಂದಿರುವ ಪೇಯಗಳನ್ನು ಅಗತ್ಯಕ್ಕಿಂತ ಹೆಚ್ಚು ಸೇವನೆ ಮಾಡುತ್ತಿರುವದರಿಂದಲೂ ಸಹ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಮಕ್ಕಳಾಗುವುದು ತಡವಾಗುತ್ತಿದೆ.

ಪ್ರೈವೇಟ್ ಪಾರ್ಟ್ಸ್ ಸ್ವಚ್ಛವಾಗಿಟ್ಟುಕೊಳ್ಳಿ

ಪುರುಷರೇ ಆಗಲಿ ಮಹಿಳೆಯರೇ ಆಗಲಿ ಪ್ರೈವೇಟ್ ಪಾರ್ಟ್ಸ್ ಅನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು, ಸ್ನಾನ ಮಾಡುವಾಗ ಅಷ್ಟೇ ಸ್ವಚ್ಛಗೊಳಿಸುವುದಲ್ಲದೇ ಲೈಂಗಿಕ ಸಂಪರ್ಕ ಮಾಡಿದ ನಂತರವೂ ಸಹ ಚೆನ್ನಾಗಿ ಸ್ವಚ್ಛಗೊಳಿಸಿಕೊಳ್ಳಬೇಕು ಹಾಗೂ ನಿತ್ಯ ಸ್ನಾನಕ್ಕೆ ಬಳಸುವ ಸೋಪು ಬಳಸದೇ ಬೇರೆ ಸೋಪ್ ಬಳಸಿದರೆ ಒಳ್ಳೆಯದು. ಮಹಿಳೆಯರು ಮುಟ್ಟಾದಾಗ ಆಗಾಗ ಪ್ಯಾಡ್ ಬದಲಾಯಿಸಿಕೊಳ್ಳಲೇಬೇಕು, ಹಾಗೇನೇ ಮಹಿಳೆಯರು ತಮ್ಮ ಮಾಸಿಕ ಋತುಚಕ್ರದ ಮೇಲೆ ಗಮನವಿಡಬೇಕು, ಮಹಿಳೆಯರ ಪಿರಿಯಡ್ಸ್ ಪ್ರತಿ ತಿಂಗಳು 21 ದಿನಗಳ ಒಳಗೆ ಹಾಗೂ 35 ದಿನ ಮೀರಿದರೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ಚಿಂತೆ, ಗರ್ಭನಿರೋಧಕ ಹಾಗೂ ಇನ್ನಿತರೇ ಮಾತ್ರೆಗಳಿಂದ ದೂರವಿರಿ

ಗರ್ಭನಿರೋಧಕ ಮಾತ್ರೆಗಳ ಸೇವನೆ ಮಾಡುವುದರಿಂದ ದೇಹದ ಹಾರ್ಮೋನ್ ಗಳ ಮೇಲೆ ವ್ಯತಿರಿಕ್ತ ಪರಿಣಾಮ ಬಿರುವುದಲ್ಲದೇ, ವೈದ್ಯರ ಸಲಹೆ ಇಲ್ಲದೇ ಅನವಶ್ಯಕ ಮಾತ್ರೆಗಳ ಸೇವನೆಯಿಂದಲೂ ಸಹ ಗರ್ಭಧಾರಣೆ ತಡವಾಗಬಹುದು. ಹಾಗೇನೇ ಲೈಂಗಿಕ ಸಂಪರ್ಕ ಹೊಂದುವಾಗ ಲೂಬ್ರಿಕೆಂಟ್ ಗಳ ಬಳಕೆಯನ್ನು ಸಹ ತ್ಯಜಿಸುವುದು ಒಳ್ಳೆಯದು, ಇದರೊಟ್ಟಿಗೆ ಅನವಶ್ಯಕ ಚಿಂತೆ ಮಾಡುವುದರಿಂದಲೂ ಸಹ ದೂರವಿರಿ.

ಗರ್ಭಿಣಿ ಆಗುವುದು ಹೇಗೆ

ನಿಯಮಿತವಾಗಿ ಲೈಂಗಿಕ ಸಂಪರ್ಕ ಹೊಂದುತ್ತಿರಿ

ನಿಯಮಿತವಾಗಿ ಲೈಂಗಿಕ ಸಂಪರ್ಕ ಹೊಂದುವುದರಿಂದ ಒವುಲೇಷನ್ ಆದಾಗ ಗರ್ಭಧಾರಣೆಯಾಗುವುದು ಸುಲಭವಾಗುತ್ತದೆ, ಹಾಗೇನೇ ಇದೇ ಸಮಯಕ್ಕೆ ಲೈಂಗಿಕ ಸಂಪರ್ಕ ಹೊಂದಬೇಕು ಎಂಬುದನ್ನು ನಿರ್ಧಾರ ಮಾಡಬೇಕು, ಇದು ಸಹ ಗರ್ಭಧಾರಣೆಯಾಗಲು ಸಹಕಾರಿಯಾಗುತ್ತದೆ. ಇದರೊಟ್ಟಿಗೆ ನಿಮ್ಮ ಒವುಲೇಷನ್ ಟೈಮ್ ಅನ್ನು ಸರಿಯಾಗಿ ತಿಳಿದುಕೊಳ್ಳಿ ಮತ್ತು ಮುಖ್ಯವಾಗಿ 20 ರಿಂದ 30 ವರ್ಷ ವಯಸ್ಸಿನ ಒಳಗೆನೇ ಮಕ್ಕಳನ್ನು ಮಾಡಿಕೊಳ್ಳುವುದು ಒಳ್ಳೆಯದು, ಏಕೆಂದರೆ 20-30 ರ ವಯಸ್ಸಿನಲ್ಲಿ ಮಹಿಳೆಯರು ಗರ್ಭಧರಿಸುವ ಪ್ರಮಾಣ ಹೆಚ್ಚಾಗಿಯೇ ಇರುತ್ತದೆ.

ಕನ್ ಕ್ಲುಜನ್

ಮೇಲಿನ ಎಲ್ಲ ಅಂಶಗಳನ್ನು ಸರಿಯಾಗಿ ಪಾಲಿಸಿದ ನಂತರವೂ ಮಗು ಹೊಂದುವ ನಿಮ್ಮ ಕನಸು ನನಸಾಗದೇ ಇದ್ದರೇ, ಸ್ತ್ರೀರೋಗ ತಜ್ಞರು ಅಥವಾ ಗೈನಕೊಲಾಜಿಸ್ಟ್ ಗಳನ್ನು ಅವಶ್ಯವಾಗಿ ಸಂಪರ್ಕಿಸಿ. “ಗರ್ಭಿಣಿ ಆಗುವುದು ಹೇಗೆ?” ನಮ್ಮ ಇಂದಿನ ಈ ಲೇಖನದ ಬಗೆಗಿನ ನಿಮ್ಮ ಅನಿಸಿಕೆ ತಪ್ಪದೆ ತಿಳಿಸಿ!