IAS ಅಧಿಕಾರಿಗಳು ಒಂದು ತಿಂಗಳಿಗೆ ಪಡೆದುಕೊಳ್ಳುವ ಸಂಬಳ ಎಷ್ಟು? ಅವರಿಗೆ ಯಾವ ಯಾವ ಸೌಲಭ್ಯಗಳು ದೊರೆಯುತ್ತವೆ? ತಿಳಿದುಕೊಳ್ಳಿ..

ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯನ್ನು ಭಾರತದಲ್ಲಿ ಅತ್ಯಂತ ಕಷ್ಟಕರವಾದ ಪರೀಕ್ಷೆ ಎಂದು ಪರಿಗಣಿಸಲಾಗಿದೆ. ಆದರೆ ಕಷ್ಟಪಟ್ಟು ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ತಮ್ಮ ಇಡೀ ಜೀವನವನ್ನು ಬಹಳ ಆರಾಮವಾಗಿ ಕಳೆಯುತ್ತಾರೆ. ಪ್ರತಿ ವರ್ಷ ಪರೀಕ್ಷೆಗೆ ಕುಳಿತುಕೊಳ್ಳುವ ಲಕ್ಷಾಂತರ ಅಭ್ಯರ್ಥಿಗಳ ಪೈಕಿ ಬೆರಳೆಣಿಕೆಯಷ್ಟು ಅಭ್ಯರ್ಥಿಗಳು ಮಾತ್ರ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ.

ಅದರಲ್ಲಿ ಸಹ ಭಾರತೀಯ ಆಡಳಿತ ಸೇವೆಗೆ ಸೇರುವವರ ಸಂಖ್ಯೆ ತೀರಾ ಕಡಿಮೆ. ಐಎಎಸ್ ಅಧಿಕಾರಿಯ ಸಂಬಳ ಎಷ್ಟು ಎಂದು ಇಂದು ನಾವು ನಿಮಗೆ ಹೇಳಲಿದ್ದೇವೆ. ಐಎಎಸ್ ಅಧಿಕಾರಿಗಳು ಮಾನ-ಸನ್ಮಾನ ಮತ್ತು ಉತ್ತಮ ಸಂಬಳದ ಜೊತೆಗೆ ಅನೇಕ ಸೌಲಭ್ಯಗಳನ್ನು ಪಡೆಯುತ್ತಾರೆ, ಆದ್ದರಿಂದ ಜನರು ಈ ಸೇವೆಯಲ್ಲಿ ಶ್ರಮಿಸುವ ಕನಸು ಕಾಣುತ್ತಾರೆ.

ವಿವಿಧ ಸಚಿವಾಲಯಗಳು ಮತ್ತು ಆಡಳಿತ ಇಲಾಖೆಗಳಲ್ಲಿ IAS ಅಧಿಕಾರಿಗಳನ್ನು ನೇಮಿಸಲಾಗುತ್ತದೆ. ಐಎಎಸ್ ಅಧಿಕಾರಿಗಳ ಸಲುವಾಗಿ ಕ್ಯಾಬಿನೆಟ್ ಕಾರ್ಯದರ್ಶಿ ಅತ್ಯಂತ ಹಿರಿಯ ಹುದ್ದೆಯಾಗಿದೆ. 7ನೇ ವೇತನ ಆಯೋಗದ ಪ್ರಕಾರ ಐಎಎಸ್ ಅಧಿಕಾರಿ ಮೂಲ ವೇತನ 56,100 ರೂ.ಇದೆ. ಇದಲ್ಲದೆ, ಅವರಿಗೆ ಪ್ರಯಾಣ ಭತ್ಯೆ ಮತ್ತು ತುಟ್ಟಿ ಭತ್ಯೆ ಸೇರಿದಂತೆ ಅನೇಕ ಭತ್ಯೆಗಳನ್ನು ಸಹ ನೀಡಲಾಗುತ್ತದೆ.

ವರದಿಗಳ ಪ್ರಕಾರ, ಐಎಎಸ್ ಅಧಿಕಾರಿ ತಿಂಗಳಿಗೆ ಒಟ್ಟು ಒಂದು ಲಕ್ಷ ರೂ.ಗಿಂತ ಹೆಚ್ಚು ಸಂಬಳ ಪಡೆಯುತ್ತಾರೆ. ಕ್ಯಾಬಿನೆಟ್ ಕಾರ್ಯದರ್ಶಿ ಮಟ್ಟದ ಐಎಎಸ್ ಅಧಿಕಾರಿಯೊಬ್ಬರು ತಿಂಗಳಿಗೆ ಸುಮಾರು 2.5 ಲಕ್ಷ ರೂಪಾಯಿ ಸಂಬಳ ಪಡೆಯುತ್ತಾರೆ. ಐಎಎಸ್ ಅಧಿಕಾರಿಗಳಿಗೆ ವಿವಿಧ ಪೇ ಬ್ಯಾಂಡ್‌ಗಳನ್ನು ನಿಗದಿಪಡಿಸಲಾಗಿದೆ. ಇವುಗಳಲ್ಲಿ ಜೂನಿಯರ್ ಸ್ಕೇಲ್, ಸೀನಿಯರ್ ಸ್ಕೇಲ್, ಸೂಪರ್ ಟೈಮ್ ಸ್ಕೇಲ್ ಗಳ ಸಮಾವೇಶ ವಾಗಿರುತ್ತವೆ.

ಮೂಲ ವೇತನ ಮತ್ತು ದರ್ಜೆಯ ವೇತನದ ಜೊತೆಗೆ, ಅವರು ತುಟ್ಟಿ ಭತ್ಯೆ, ಬಾಡಿಗೆ ಭತ್ಯೆ, ವೈದ್ಯಕೀಯ ಭತ್ಯೆ ಮತ್ತು ಸಾರಿಗೆ ಭತ್ಯೆಯನ್ನು ಸಹ ಪಡೆಯುತ್ತಾರೆ. ಪೇ-ಬ್ಯಾಂಡ್ ಆಧರಿಸಿ, ಅವರಿಗೆ ಮನೆ, ಅಡುಗೆಯವರು ಮತ್ತು ಇತರ ಸಿಬ್ಬಂದಿಯಂತಹ ಅನೇಕ ಸೌಲಭ್ಯಗಳನ್ನು ಸಹ ಸರಕಾರ ಒದಗಿಸಲಾಗುತ್ತದೆ. ಪೋಸ್ಟಿಂಗ್ ಸಮಯದಲ್ಲಿ ಐಎಎಸ್ ಅಧಿಕಾರಿ ಬೇರೆ ಸ್ಥಳಕ್ಕೆ ಹೋಗಬೇಕಾದರೆ ಅವರಿಗೂ ಸರ್ಕಾರಿ ಮನೆ ಸಹ ನೀಡಲಾಗುತ್ತದೆ.

ಇದಲ್ಲದೆ, ಅವರಿಗೆ ತಿರುಗಾಡಲು ಕಾರುಗಳು ಮತ್ತು ಚಾಲಕರ ಸಹ ಸೌಲಭ್ಯ ವಿರುತ್ತದೆ. ಇಂತಹ ಹಲವು ಸೌಲಭ್ಯಗಳನ್ನು ಈ ಅಧಿಕಾರಿಗಳು ಪಡೆಯುತ್ತಾರೆ. ಹಾಗಾಗಿ ಬಹಳಷ್ಟು ಜನರು ಐಎಎಸ್ ಅಧಿಕಾರಿಯಾಗಬೇಕೆಂದು ಕನಸು ಕಾಣುತ್ತಾರೆ ಆದರೆ ಅದು ಅಷ್ಟು ಸುಲಭವಲ್ಲ. ಸದ್ಯಕ್ಕೆ ಎಷ್ಟೋ ಜನರು ಅಥವಾ ಹುಡುಗರು/ಹುಡುಗಿಯರು ಹಲವು ವರ್ಷಗಳಿಂದ ಈ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ. ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಸುಲಭವಲ್ಲದ ಕಾರಣ ಹಗಲು ರಾತ್ರಿ ಅಧ್ಯಯನ ಮಾಡುವುದು ಲಕ್ಷಾಂತರ ಜನರಿಗೆ ನಿರಾಶೆಯನ್ನುಂಟುಮಾಡುತ್ತದೆ. ಆದ್ರೆ ಈ ಪರೀಕ್ಷೆ ಒಮ್ಮೆ ಪಾಸ್ ಆದರೆ ಸಾಕು ಅವರ ಜೀವನಶೈಲಿಯೇ ಬದಲಾಗುತ್ತದೆ. IAS ಓದುತ್ತಿರುವ ಎಲ್ಲ ಸ್ಪರ್ಧಿಗಳಿಗೆ ಮುಂಬರುವ ಪರೀಕ್ಷೆಯ ಸಲುವಾಗಿ ಶುಭ ಹಾರೈಸುತೇವೆ.