IAS ಸಂದರ್ಶನದ ಪ್ರಶ್ನೆಗಳು : ನಾನು ನಿಮ್ಮ ಸಹೋದರಿ ಜೊತೆ ಓಡಿ ಹೋದರೆ ನೀವೇನು ಮಾಡುವಿರಿ? ಅಭ್ಯರ್ಥಿ ಕೊಟ್ಟ ಉತ್ತರಕ್ಕೆ ..
ನಮ್ಮ ದೇಶದಲ್ಲಿ ಅಧಿಕ ಸಂಖ್ಯೆಯಲ್ಲಿ ಯುವ ಜನರು ಭವಿಷ್ಯದಲ್ಲಿ ತಾವು ಐಎಎಸ್ ಅಧಿಕಾರಿಗಳಾಗುವ ಕನಸನ್ನು ಕಂಡಿರುತ್ತಾರೆ. ಹಲವರಿಗೆ ಅವರ ಜೀವನದ ಗುರಿಯೇ ಐಎಎಸ್ ಅಧಿಕಾರಿ ಆಗಬೇಕೆಂದು ಇರುತ್ತದೆ. ಐಎಎಸ್ ಅಧಿಕಾರಿಯಾಗುವುದು ಸುಲಭದ ಮಾತಲ್ಲ. ಅದಕ್ಕೆ ಕೆಲವು ಪರೀಕ್ಷೆಗಳನ್ನು ಕೂಡಾ ಎದುರಿಸಬೇಕಾಗಿರುತ್ತದೆ. ಭಾರತದಲ್ಲಿ ನಡೆಯುವ ಪರೀಕ್ಷೆಗಳಲ್ಲಿ ಐಎಎಸ್ ಪರೀಕ್ಷೆಗಳು ಅತ್ಯಂತ ಕಠಿಣವಾದ ಪರೀಕ್ಷೆಗಳು ಎಂದೇ ಪರಿಗಣಿಸಲ್ಪಟ್ಟಿದೆ. ಪ್ರತಿ ವರ್ಷ ನಮ್ಮ ದೇಶದಲ್ಲಿ ಅದೆಷ್ಟೋ ಲಕ್ಷ ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯುತ್ತಾರೆ. ಆದರೆ ಐಎಎಸ್ ಪರೀಕ್ಷೆಗಳಲ್ಲಿ ಉತ್ತಮ ರೀತಿಯಲ್ಲಿ ಪೂರ್ತಿ ಮಾಡುವುದು ಬಹಳ ಶ್ರಮದ ಕೆಲಸ ಎನ್ನಲಾಗುತ್ತದೆ. ಐಎಎಸ್ ಪರೀಕ್ಷೆಗಳನ್ನು ಪಾಸ್ ಮಾಡಲು ಕಠಿಣವಾದ ಶ್ರಮ ಹಾಗೂ ನಿರಂತರವಾದ ಅಧ್ಯಯನ ಮಾತ್ರವಲ್ಲದೇ ಪ್ರತಿ ವಿಷಯದಲ್ಲಿ ಕೂಡಾ ಉತ್ತಮ ಜ್ಞಾನವನ್ನು ಪಡೆದುಕೊಂಡಿರುವುದು ಅನಿವಾರ್ಯ. ಐಎಎಸ್ ಪರೀಕ್ಷೆಗಳು ಮೂರು ಹಂತದಲ್ಲಿ ನಡೆಯುತ್ತದೆ. ಇದರಲ್ಲಿ ಲಿಖಿತ ಪರೀಕ್ಷೆಗಳ ಜೊತೆಗೆ ಮೌಖಿಕ ಪರೀಕ್ಷೆಯಾಗಿ ಸಂದರ್ಶನ ಕೂಡಾ ನಡೆಯುತ್ತದೆ.
ಲಿಖಿತ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬೇಕಾಗುತ್ತದೆ. ಈ ಸಂದರ್ಭದಲ್ಲಿ ಹಲವು ಸಂಕೀರ್ಣವಾದ ಪ್ರಶ್ನೆಗಳನ್ನು ಅಭ್ಯರ್ಥಿಗಳ ಮುಂದೆ ಇಡಲಾಗುತ್ತದೆ. ಈ ಪ್ರಶ್ನೆಗಳನ್ನು ಕೇಳುವ ಉದ್ದೇಶ ಅಭ್ಯರ್ಥಿಗಳು ಹೇಗೆ ಪ್ರಶ್ನೆಗಳನ್ನು ಬೇಗ ಅರ್ಥ ಮಾಡಿಕೊಂಡು ಸಮರ್ಪಕವಾದ ಉತ್ತರವನ್ನು ನೀಡಬಲ್ಲರು ಎಂಬುದನ್ನು ಪರೀಕ್ಷಿಸುವುದು ಮಾತ್ರವೇ ಅಲ್ಲದೆ, ಇದು ಅವರ ಜ್ಞಾನ ಹಾಗೂ ಕೌಶಲ್ಯಕ್ಕೆ ಸವಾಲು ಕೂಡ ಆಗಿರುತ್ತದೆ. ಸಂದರ್ಶನದಲ್ಲಿ ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುವಲ್ಲಿ ಕೆಲವೊಮ್ಮೆ ಮೇಧಾವಿಗಳು ಕೂಡ ತಡ ಬಡಿಸುತ್ತಾರೆ ಎನ್ನಲಾಗುತ್ತದೆ. ಹಾಗಿದ್ದರೆ ಐಎಎಸ್ ಸಂದರ್ಶನದಲ್ಲಿ ಕೇಳಲಾಗುವ ಅಂತಹ ಕೆಲವು ಪ್ರಶ್ನೆಗಳು ಹಾಗೂ ಅವುಗಳ ಉತ್ತರಗಳನ್ನು ನಾವೀಗ ತಿಳಿಯೋಣ ಬನ್ನಿ.

ಪ್ರಶ್ನೆ 1: ನಮ್ಮ ತಂದೆ ತಾಯಿ ಇಬ್ಬರೂ ಅಥವಾ ಇಬ್ಬರಲ್ಲಿ ಒಬ್ಬರು ಭಾರತೀಯ ನಾಗರಿಕರಾದರೆ, ನಾವು ಏನಾಗುತ್ತೇವೆ?
ಉತ್ತರ: ಜನ್ಮದಿಂದ ಭಾರತೀಯ ಪೌರತ್ವ ಪಡೆಯುತ್ತೇವೆ.
ಪ್ರಶ್ನೆ 2 : ಪ್ರಜಾಪ್ರಭುತ್ವ ಎಂತಹ ಆಡಳಿತ ವ್ಯವಸ್ಥೆ?
ಉತ್ತರ: ಸಾಮಾನ್ಯ ನಾಗರೀಕರು ಕೂಡಾ ಹೊಣೆಗಾರಿಕೆ ಪಡೆದಿರುತ್ತಾರೆ.
ಪ್ರಶ್ನೆ 3 : ದೊಡ್ಡ ನಗರಗಳಲ್ಲಿನ ಸ್ಥಳೀಯ ಆಡಳಿತ ಸಂಸ್ಥೆ ಯನ್ನು ಏನೆಂದು ಕರೆಯುತ್ತಾರೆ?
ಉತ್ತರ: ನಗರ ಪಾಲಿಕೆ.
ಪ್ರಶ್ನೆ 4: ಪಂಚಾಯಿತಿ ಸಮಿತಿಯ ಆಡಳಿತವನ್ನು ನಿರ್ವಹಣೆ ಮಾಡುವ ಅಧಿಕಾರಿ ಯಾರು?
ಉತ್ತರ : ಬ್ಲಾಕ್ ಅಭಿವೃದ್ಧಿ ಅಧಿಕಾರಿ ( ಬಿ.ಡಿ.ಓ.)
ಪ್ರಶ್ನೆ 5 : ಭಾರತೀಯ ಸಂವಿಧಾನದ ಜನಕ ಎಂದು ಯಾರನ್ನು ಕರೆಯಲಾಗುತ್ತದೆ?
ಉತ್ತರ : ಡಾ. ಬಿ.ಆರ್. ಅಂಬೇಡ್ಕರ್.
ಪ್ರಶ್ನೆ 6 : ಭಾರತೀಯ ಸಂವಿಧಾನವು ಭಾರತದ ಪೌರರಿಗೆ ಎಷ್ಟು ಮೂಲಭೂತ ಹಕ್ಕುಗಳನ್ನು ನೀಡಿದೆ?
ಉತ್ತರ: ಆರು
ಪ್ರಶ್ನೆ 7 : 213 ನೇ ವಿಧಿ ಅಡಿಯಲ್ಲಿ ರಾಜ್ಯದ ರಾಜ್ಯಪಾಲರಿಗ ಯಾವ ವಿಶೇಷ ಅಧಿಕಾರವಿದೆ?
ಉತ್ತರ: ತಮ್ಮ ತುರ್ತು ಪರಿಸ್ಥಿತಿಯ ಅಧಿಕಾರವನ್ನು ಪ್ರಯೋಗ ಮಾಡುವ ಅಧಿಕಾರ.
ಪ್ರಶ್ನೆ 8 : ಭಾರತೀಯ ಸಂವಿಧಾನದ 370 ನೇ ವಿಧಿ ಯಾವ ವಿಷಯಕ್ಕೆ ಸಂಬಂಧಿಸಿದೆ?
ಉತ್ತರ : ಜಮ್ಮು ಮತ್ತು ಕಾಶ್ಮೀರದ ವಿಶೇಷ ಅಧಿಕಾರಗಳ ಕುರಿತಾಗಿ.
ಪ್ರಶ್ನೆ 9 : ಸ್ವತಂತ್ರ ಭಾರತದ ಮೊಟ್ಟ ಮೊದಲ ಸಾರ್ವತ್ರಿಕ ಚುನಾವಣೆ ಯಾವಾಗ ನಡೆದಿತ್ತು?
ಉತ್ತರ : 1951-52
ಪ್ರಶ್ನೆ 10 : ಕಣ್ಣೀರಿನಲ್ಲಿ ಯಾವ ಅಂಶ ಬೆರೆತಿರುತ್ತದೆ?
ಉತ್ತರ : ಉಪ್ಪಿನ ಅಂಶ
ಪ್ರಶ್ನೆ 11 : ಇನ್ಸುಲಿನ್ ನ ಆವಿಷ್ಕಾರ ಮಾಡಿದವರು ಯಾರು?
ಉತ್ತರ : ಬೆಂಟಿಂಗ್
ಪ್ರಶ್ನೆ 12 : ಸಸ್ಯ ಜನ್ಯ ಎಣ್ಣೆಯನ್ನು ಹೇಗೆ ತುಪ್ಪವನ್ನಾಗಿ ಪರಿವರ್ತನೆ ಮಾಡಲಾಗುತ್ತದೆ?
ಉತ್ತರ: ಹೈಡ್ರೊಜನೀಕರಣ ಪ್ರಕ್ರಿಯೆ ಮೂಲಕ
ಪ್ರಶ್ನೆ 13 : ಯಾವ ಅನಿಲವು ಇಂಧನ ಅನಿಲವಲ್ಲ?
ಉತ್ತರ : ಲಾಫಿಂಗ್ ಗ್ಯಾಸ್
ಪ್ರಶ್ನೆ 14 : ಯಾವ ತತ್ವವು ಪ್ರಬಲ ಕ್ಷಾರೀಯ ಆಕ್ಸೈಡ್ ಅನ್ನು ಉತ್ಪತ್ತಿ ಮಾಡುವುದು ಹಾಗೂ ಆಕ್ಸಿಜನ್ ನಲ್ಲಿ ಅದು ಸುಡುವುದು?
ಉತ್ತರ : ಸೋಡಿಯಂ
ಪ್ರಶ್ನೆ 15: ರಿಕ್ಟರ್ ಸ್ಕೇಲ್ ಯಾವುದನ್ನು ಅಳೆಯುವ ಮಾಪನವಾಗಿದೆ?
ಉತ್ತರ : ಭೂಕಂಪದ ತೀವ್ರತೆಯನ್ನು.
ಪ್ರಶ್ನೆ 16 : ಡೈನಮೈಟ್ ಅನ್ನು ಆವಿಷ್ಕಾರ ಮಾಡಿದವರು ಯಾರು?
ಉತ್ತರ : ಆಲ್ಫ್ರೆಡ್ ನೊಬೆಲ್
ಪ್ರಶ್ನೆ 17 : ನೇರವಾಗಿ ಸುಪ್ರೀಂ ಕೋರ್ಟ್ ನ ನ್ಯಾಯಾಧೀಶೆಯಾದ ದೇಶದ ಮೊದಲ ಮಹಿಳೆ ಯಾರು?
ಉತ್ತರ : ಇಂದು ಮಲ್ಹೋತ್ರ
ಪ್ರಶ್ನೆ 18 : ಕೇಂದ್ರ ಗೃಹ ಇಲಾಖೆಯು 2018 ರ ದೆಹಲಿಯ ಅತ್ಯುತ್ತಮ ಪೋಲಿಸ್ ಠಾಣೆ ಎಂದು ಯಾವ ಠಾಣೆಯನ್ನು ಗುರುತಿಸಿತ್ತು?
ಉತ್ತರ : ಕಶ್ಮೀರಿ ಗೇಟ್ ಪೋಲಿಸ್ ಠಾಣೆ.
ಪ್ರಶ್ನೆ 19 : ಸುಪ್ರೀ ಕೋರ್ಟ್ ರಾಜ್ಯಗಳಲ್ಲಿ ಪೊಲೀಸ್ ಮಹಾನಿರ್ದೇಶಕರ ನೇಮಕಕ್ಕೆ ಕನಿಷ್ಠ ಅಧಿಕಾರಾವಧಿಯನ್ನು ಎಷ್ಟು ತಿಂಗಳು ಕಡಿಮೆ ಮಾಡಿದೆ?
ಉತ್ತರ : ಆರು ತಿಂಗಳು.
ಪ್ರಶ್ನೆ 20 : ದೆಹಲಿ ಪೋಲಿಸ್ ಸ್ಥಾಪನಾ ದಿನವನ್ನು ಎಂದು ಆಚರಿಸಲಾಗುತ್ತದೆ?
ಉತ್ತರ : 16 ಜನವರಿ.
ಪ್ರಶ್ನೆ 21 : ನಾನು ನಿಮ್ಮ ಸಹೋದರಿಯೊಂದಿಗೆ ಓಡಿಹೋದರೆ ನೀವು ಏನು ಮಾಡುತ್ತೀರಿ?
ಉತ್ತರ : ನನ್ನ ಸಹೋದರಿಗೆ ನಿಮಗಿಂತ ಒಳ್ಳೆಯ ಜೋಡಿ ಸಿಗುವುದಿಲ್ಲ.