ತುಂಬಿದ ಜನರ ಮಧ್ಯೆಯೇ ಲಂಗ ತೊಟ್ಟು ಚಂಗನೆ ಜಿಂಕೆಯಂತೆ ಜಿಗಿದ 18 ರ ಬಾಲೆ! 45m ವೀಕ್ಷಣೆ ಪಡೆದ ವೈರಲ್ ವಿಡಿಯೋ.
ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವಿಡಿಯೋಗಳು ವೈರಲ್ ಆಗಬೇಕೆಂಬ ಉದ್ದೇಶದಿಂದ ಹದಿಹರೆಯದ ಹುಡುಗ ಹುಡುಗಿಯರು ಅನೇಕ ರೀತಿಯ ಕಸರತ್ತುಗಳನ್ನು ಅಂಜದೇ ಮಾಡುತ್ತಾರೆ. ಈ ರೀತಿ ಬಿಂದಾಸಾಗಿ ಸ್ಟಂಟ್ ಮಾಡುವಾಗ ಕೆಲವೊಮ್ಮೆ ಹಾನಿಯೂ ಉಂಟಾಗುತ್ತದೆ. ಹೀಗಾಗಿ ಇವುಗಳನ್ನೆಲ್ಲ ತುಂಬಾ ಕಾಳಜಿಯಿಂದ ಹಾಗೂ ಅಷ್ಟೇ ಪರ್ಫೆಕ್ಟ್ ಆಗಿ ಮಾಡಿದರೆ ಒಳ್ಳೆಯದು.
ಸದ್ಯಕ್ಕೆ ಹುಡುಗಿಯ ಸ್ಟಂಟ್ ನ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ವೈರಲ್ ಆಗಿದೆ. ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ 45 ಮಿಲಿಯನ್ ವೀಕ್ಷಣೆಯನ್ನು ಪಡೆದಿದೆ. ನೆಟ್ಟಿಗರಿಗೆ ಈ ವಿಡಿಯೋ ಎಷ್ಟೊಂದು ಇಷ್ಟವಾಗಿದೆ ಎಂಬುದು ಈ ವೀಕ್ಷಣೆಯ ಸಂಖ್ಯೆಯ ಮೇಲಿಂದ ತಿಳಿದು ಬರುತ್ತದೆ.
ವಿಡಿಯೋದ ಈ ದೃಶ್ಯದಲ್ಲಿ ಯಾವುದೋ ಒಂದು ಫಂಕ್ಷನ್ ನಡೆದಿರುವ ಹಾಗೆ ಕಂಡುಬರುತ್ತಿದೆ. ಈ ಫಂಕ್ಷನ್ನಲ್ಲಿ ಎಲ್ಲರೂ ಒಳ್ಳೊಳ್ಳೆಯ ಡ್ರೆಸ್ ತೊಟ್ಟುಕೊಂಡು ಬಂದಿದ್ದಾರೆ. ಇದೇ ಸಂದರ್ಭದಲ್ಲಿ ಸುಮಾರು 18 ರಿಂದ 20 ವರ್ಷ ವಯಸ್ಸಿನ ತರುಣಿಯೊಬ್ಬಳು ಹಠಾತ್ ಸ್ಟಂಟ್ ಮಾಡುತ್ತಾಳೆ. ಈ ಸ್ಟಂಟ್ ಮಾಡಿದ್ದನ್ನು ನೋಡಿ ಅಕ್ಕಪಕ್ಕದವರೂ ಒಮ್ಮೆಲೆ ಆಶ್ಚರ್ಯ ವ್ಯಕ್ತ ಮಾಡಿದ್ದಾರೆ. ಜನರ ನಡುವೆ ನೀಳವಾದ ಲಂಗ ತೊಟ್ಟು ನಿಂತ ಹುಡುಗಿ ಒಮ್ಮೆಲೇ ಬ್ಯಾಕ್ ಫ್ಲಿಪ್ ಮಾಡುತ್ತಾಳೆ, ಅದು ಒಮ್ಮೆಯಲ್ಲ ಎರಡು ಬಾರಿ ಸರಾಗವಾಗಿ ಅಷ್ಟೆ ಸರಳವಾಗಿ. ಈ ಸಂದರ್ಭದಲ್ಲಿ ಆಕೆಯ ಲಂಗ ತುಂಬಾ ಸುಂದರವಾದ ಡಿಸೈನ್ ನೊಂದಿಗೆ ಚಿತ್ತಾರ ಬಿಡಿಸಿದೆ. ಆಕೆ ಮಾಡಿದ ಹಠಾತ್ ಸ್ಟಂಟ್ ಅಲ್ಲಿದ್ದವರ ಜೊತೆಗೆ ನೆಟ್ಟಿಗರಿಗೂ ತುಂಬಾ ಇಷ್ಟವಾಗಿದೆ.
ನೋಡಿ ಈ ವಿಡಿಯೋ…
View this post on Instagram
ಪ್ರಸ್ತುತ ವಿಡಿಯೋ ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದ್ದು ಈ ವಿಡಿಯೋ 45 ಮಿಲಿಯನ್ ವೀಕ್ಷಣೆ ಪಡೆಯುವುದರೊಂದಿಗೆ 1.4 ಮಿಲಿಯನ್ ಜನರು ತಮ್ಮ ಮೆಚ್ಚುಗೆಯ ಬಟನ್ ಕ್ಲಿಕ್ ಮಾಡಿದ್ದಾರೆ.