Income Tax Rule: ಇಷ್ಟೊಂದು ಹಣದ ವ್ಯವಹಾರ ಮಾಡುತ್ತಿದ್ದರೆ ಎಚ್ಚರ! ಇನ್ಕಮ್ ಟಾಕ್ಸ್ ಡಿಪಾರ್ಟ್ಮೆಂಟ್ಡೆ ನಿಮ್ಮ ಹಿಂದೆ ಬೀಳಬಹುದು!

ತುಂಬಾ ಸ್ಪೀಡಾಗಿ ಚಲಿಸುತ್ತಿರುವ ಈ ಜಗತ್ತಿನಲ್ಲಿ, ಪ್ರತಿದಿನ ಜನರು ಆನ್‌ಲೈನ್ ಅಥವಾ ಬ್ಯಾಂಕ್‌ನಿಂದ ಹಣದ ವಹಿವಾಟು ನಡೆಸುತ್ತಾರೆ. ಆದರೆ ಹಲವು ಬಾರಿ ಅಧಿಕ ಮೌಲ್ಯದ ಹಣದ ವಹಿವಾಟು ಜನರಿಗೆ ಸಮಸ್ಯೆಯಾಗಿ ಪರಿಣಮಿಸಿ ಈ ಕಾರಣಕ್ಕಾಗಿ ಆದಾಯ ತೆರಿಗೆ ಇಲಾಖೆ ಹಿಂದೆ ಬೀಳುತ್ತದೆ. ಈ ರೀತಿಯ ಸಮಸ್ಯೆ ತಪ್ಪಿಸಲು ಆದಾಯ ತೆರಿಗೆ ಇಲಾಖೆಯೂ ಉಪಾಯಗಳನ್ನು ಸಹ ಸೂಚಿಸಿದೆ.

ಆದಾಯ ತೆರಿಗೆ ಇಲಾಖೆಯು ಪ್ರತಿಯೊಬ್ಬ ವ್ಯಕ್ತಿಯ ನಗದು ವಹಿವಾಟಿನ ಮೇಲೆ ನಿಗಾ ಇಡುತ್ತದೆ. ವಿಶೇಷವಾಗಿ ಹೆಚ್ಚಿನ ಮೌಲ್ಯದ ನಗದು ವಹಿವಾಟುಗಳ ಮೇಲೆ ನಿಗಾ ಇಡಲಾಗುತ್ತದೆ. ಅಧಿಕ ಮೌಲ್ಯದ ನಗದು ವಹಿವಾಟು ಮಾಡಲು ಆದಾಯ ತೆರಿಗೆ ಇಲಾಖೆ ಒಂದು ಮಿತಿ ನಿಗದಿಪಡಿಸಿದೆ. ನೀವು ಈ ಮಿತಿಯನ್ನು ದಾಟಿದ ತಕ್ಷಣ, ಆದಾಯ ತೆರಿಗೆ ಇಲಾಖೆಯ ಕಣ್ಣುಗಳು ನಿಮ್ಮ ಮೇಲೆ ಬೀಳುತ್ತವೆ ಹಾಗಾಗಿ ಅದು ನಿಮಗೆ ದೊಡ್ಡ ಸಮಸ್ಯೆಯಲ್ಲಿ ಸಿಲುಕಿಸಬಹುದು.

ಉಳಿತಾಯ(saving) ಮತ್ತು ಚಾಲ್ತಿ (current) ಖಾತೆಗಳ ಮಿತಿ.

ಅಧಿಕ ಮೌಲ್ಯದ ನಗದು ವಹಿವಾಟಿಗೆ ಆದಾಯ ತೆರಿಗೆ ಇಲಾಖೆ ನಿಗದಿಪಡಿಸಿರುವ ಮಿತಿಯ ಪ್ರಕಾರ, ಒಂದು ಹಣಕಾಸು ವರ್ಷ(Financial year)ದಲ್ಲಿ ಉಳಿತಾಯ ಬ್ಯಾಂಕ್ ಖಾತೆಯಲ್ಲಿ (saving account) 10 ಲಕ್ಷ ರೂ.ಗಿಂತ ಹೆಚ್ಚಿನ ವಹಿವಾಟು ಇರಬಾರದು. ಅದೇ ತರಹ ಚಾಲ್ತಿ ಖಾತೆ(current account) ಗಳಿಂದ 50 ಲಕ್ಷ ರೂ. ಗಳಿಗಿಂತ ಹೆಚ್ಚು ಹಣದ ವಹಿವಾಟು ಆಗಬಾರದು. ಒಂದು ವೇಳೆ ಈ ಲೀಮಿಟ್ ಕ್ರಾಸ್ ಮಾಡಿದ್ದೆ ಅದಲ್ಲಿ ಆದಾಯ ತೆರಿಗೆ ನಿಮ್ಮ ಮೇಲೆ ನಿಗಾ ಇಡುತ್ತದೆ. ಪ್ರಸಂಗ ಬಂದರೆ ಕಾರ್ಯವಾಹಿ ಸಹ ಮಾಡುತ್ತದೆ.

ಆದಾಯ ತೆರಿಗೆ ಇಲಾಖೆ ನೋಟಿಸ್ ಕಳುಹಿಸುತ್ತದೆ

ಆದಾಯ ತೆರಿಗೆ ಇಲಾಖೆಯು ನಿಗದಿಪಡಿಸಿದ ನಗದು ವಹಿವಾಟಿನ ಮಿತಿಯನ್ನು ನೀವು ದಾಟಿದರೆ, ಆದಾಯ ತೆರಿಗೆ ಇಲಾಖೆಯು ಸರ್ಕಾರಿ ಸಂಸ್ಥೆಗಳು ಮತ್ತು ಹಣಕಾಸು ಸಂಸ್ಥೆಗಳ ಸಹಾಯದಿಂದ ನಿಮ್ಮ ದಾಖಲೆಗಳನ್ನು ಪರಿಶೀಲಿಸುತ್ತದೆ. ಈ ಸಮಸ್ಯೆಗಳ ನಂತರ ನಿಮಗೆ ನೋಟಿಸ್ ಕಳುಹಿಸುತ್ತದೆ. ಈ ಪ್ರಕ್ರಿಯೆಯು ನಿಮಗೆ ಬಹಳಷ್ಟು ತೊಂದರೆಗಳನ್ನು ಉಂಟುಮಾಡಬಹುದು.

ಲೀಮಿಟ್ ಕ್ರಾಸ್ ಆಗುವದನ್ನು ತಪ್ಪಿಸುವುದು ಹೇಗೆ?

ಆದಾಯ ತೆರಿಗೆ ಇಲಾಖೆಯ ಪ್ರಕಾರ, ನೀವು ನಿಗದಿತ ಮಿತಿಯನ್ನು ದಾಟುವ ಬಗ್ಗೆ ತಿಳಿಸಬೇಕಾಗುತ್ತದೆ. ಇದರೊಂದಿಗೆ, ಆದಾಯ ತೆರಿಗೆಯನ್ನು ಸಲ್ಲಿಸುವಾಗ, ನಿಮ್ಮ ನಗದು ವಹಿವಾಟು ಒಂದು ಹಣಕಾಸು ವರ್ಷದಲ್ಲಿ 10 ಲಕ್ಷಗಳನ್ನು ದಾಟಬಹುದು ಎಂದು ನಮೂದಿಸಬೇಕು. ಆದಾಯ ತೆರಿಗೆ ನಮೂನೆಯಲ್ಲಿ ಇದನ್ನು ಮುಂಚಿತವಾಗಿ ನಮೂದಿಸಿದರೆ, ನೀವು ತೊಂದರೆಯಿಂದ ಪಾರಾಗುತ್ತೀರಿ.

ಹೀಗೆ ಮಾಡುವದರಿಂದಲೂ ಸಹ ಆದಾಯ ತೆರಿಗೆ ಇಲಾಖೆ ನೋಟಿಸ್ ಕಳುಹಿಸುತ್ತದೆ-

1- ಸ್ಥಿರ ಠೇವಣಿ ಖಾತೆ (Fixed Deposits) 10 ಲಕ್ಷಗಳ ಮಿತಿಯನ್ನು ಮೀರಿ ಹೋಗಬಾರದು.

2- ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ 1 ಲಕ್ಷ ಮೀರಬಾರದು. ಆರ್ಥಿಕ ವರ್ಷದಲ್ಲಿ 10 ಲಕ್ಷದ ವ್ಯವಹಾರ ಇರಬಾರದು.

3- 30 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಸ್ಥಿರಾಸ್ತಿಯ ಮಾರಾಟ ಅಥವಾ ಖರೀದಿ ಇರಬಾರದು.

4- ಮ್ಯೂಚುವಲ್ ಫಂಡ್‌ಗಳು, ಸ್ಟಾಕ್‌ಗಳು, ಬಾಂಡ್‌ಗಳಲ್ಲಿನ ಹೂಡಿಕೆಗೆ ಸಂಬಂಧಿಸಿದ ನಗದು ವಹಿವಾಟಿನ ಮಿತಿಯು ಒಂದು ಆರ್ಥಿಕ ವರ್ಷದಲ್ಲಿ 10 ಲಕ್ಷ ರೂಪಾಯಿಗಳನ್ನು ಮೀರಬಾರದು.

5- ಒಂದು ಹಣಕಾಸು ವರ್ಷದಲ್ಲಿ ವಿದೇಶಿ ವಿನಿಮಯದ ಮಾರಾಟವು ರೂ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿರಬಾರದು.

ಮೇಲೆ ತಿಳಿಸಿದ ಅಂಕಗಳ ಮಿತಿಯನ್ನು ದಾಟಿದರೆ ಇದರ ಕುರಿತು ಆದಾಯ ತೆರಿಗೆ ಇಲಾಖೆಗೆ ಐ ಟಿ ಆರ್ ಫಾರ್ಮ್ ತುಂಬುವ ಮೂಲಕ ಮಾಹಿತಿ ಕೊಡಬೇಕಾಗುತ್ತದೆ. ಒಂದು ವೇಳೆ ಈ ಪ್ರಕ್ರಿಯೆ ಮಾಡದೆ ಇದ್ದಲ್ಲಿ ತೆರಿಗೆ ಇಲಾಖೆಯು ನಿಮಗೆ ನೋಟಿಸ್ ಜಾರಿ ಮಾಡುತ್ತದೆ.