IPL 2022 : LED ಸ್ಟಂಪ್ ಗಳ ಬೆಲೆ ಎಷ್ಟು ನಿಮಗೆ ಗೊತ್ತಾ? ಹಾರ್ದಿಕ್ ಪಾಂಡ್ಯ ಅವರು ಎಷ್ಟು BCCI ಗೆ ಎಷ್ಟೊಂದು ಹಾನಿ ಮಾಡಿದ್ದಾರೆ ನೋಡಿ…
ಗುಜರಾತ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರು ಐಪಿಎಲ್ 2022 ರ 24ನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರಿಗೆ ನೇರ ಥ್ರೋ ಹೊಡೆದು ರನ್ ಔಟ್ ಮಾಡಿದರು. ಹಾರ್ದಿಕ್ ಪಾಂಡ್ಯ ವರು ಹೊಡೆದ ಥ್ರೋ ದಿಂದಾಗಿ ಸಂಜು ಸ್ಯಾಮ್ಸನ್ ಅವರು ಔಟಾದರು ನಿಜ. ಆದರೆ ಸ್ಟಂಪ್ ಮಾತ್ರ 2 ತುಣುಕುಗಳಾದವು. ಈ ಪಂದ್ಯದಲ್ಲಿ ಹಾರ್ದಿಕ್ ಅವರು ಪ್ರದರ್ಶಿಸಿದ ಆಲ್ರೌಂಡ್ ಆಟದಿಂದಾಗಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಆದರೆ ಹಾರ್ದಿಕ ಅವರು ಬಿಸಿಸಿಐಗೆ ತುಂಬಾ ಹಾನಿ ಮಾಡಿದರು.
ಹಾರ್ದಿಕ ಎಸೆದ ಥ್ರೋ ದಿಂದಾಗಿ ಬಿಸಿಸಿಐಗೆ 2 ಲಕ್ಷ, 5 ಲಕ್ಷ ಅಥವಾ 10 ಲಕ್ಷ ಅಲ್ಲ ಇದಕ್ಕಿಂತಲೂ ಹೆಚ್ಚಿಗೆ ಹಾನಿಯಾಗಿದೆ. ಕಾರಣ ಹೊಸ ತಂತ್ರಜ್ಞಾನದ ಸಮಾವೇಶ ಮಾಡಿರುವ ಈ ಎಲ್ಇಡಿ ಸ್ಟಂಪಗಳ ಒಂದು ಸೆಟ್ಟಿನ ಬೆಲೆ 40 ಲಕ್ಷ ರೂಪಾಯಿಗಳವರೆಗೆ ಇರುತ್ತದೆ. ಹಾರ್ದಿಕ್ ಅವರ ಥ್ರೋದಿಂದಾಗಿ ಆಯೋಜಕರ ಕಾಳಜಿ ಹೆಚ್ಚಾಗಿದೆ. ಐಪಿಎಲ್ ನ ಪ್ರಸ್ತುತ ಸೀಸನ್ನಲ್ಲಿ ಇನ್ನು 50 ಪಂದ್ಯಗಳು ಬಾಕಿ ಇವೆ. ನಡೆದ ಪಂದ್ಯಗಳಲ್ಲಿ ಇನ್ನು ಅರ್ಧ ಪಂದ್ಯಗಳು ಸಹ ಮುಗಿದಿಲ್ಲ. ಅದಕ್ಕೂ ಮೊದಲೇ ಆಯೋಜಕರಿಗೆ ದೊಡ್ಡ ಹಾನಿಯಾಗಿದೆ.
LED ಸ್ಟಂಪ್ ಗಳ ಒಂದು ಸೆಟ್ ನ ಬೆಲೆ ಮ್ಯಾಚ್ ಫೀಸ್ ಎಷ್ಟಿರುತ್ತೆ ಹೆಚ್ಚು ಕಡಿಮೆ ಅಷ್ಟೇ ಇರುತ್ತೆ. ಸುಮಾರು ಭಾರತೀಯ ಪ್ರತಿ ಆಟಗಾರನಿಗೆ ಒಂದು ಪಂದ್ಯಕ್ಕೆ 60 ಲಕ್ಷ ಮತ್ತು ಟಿ20 ಆಡುವ ಆಟಗಾರನಿಗೆ 30 ಲಕ್ಷ ನೀಡಲಾಗುತ್ತದೆ. ಸ್ಟಂಪ್ ನ ಬೆಲೆಯು 40 ಲಕ್ಷ ರೂಪಾಯಿಗಳಷ್ಟು ಇರುತ್ತದೆ.
ಈ ಸ್ಟಂಪ್ ಗಳನ್ನು ಆಸ್ಟ್ರೇಲಿಯಾದ ಬ್ರಾಂಟೆ ಏಕರ್ಮ್ಯಾನ್ LED ಕಂಪನಿಯು ನಿರ್ಮಿಸುತ್ತದೆ. ಆಸ್ಟ್ರೇಲಿಯಾದಲ್ಲಿ ನಡೆಯುವ ಬಿಗ್ ಬ್ಯಾಶ್ ಲೀಗ್ ಸ್ಪರ್ಧೆ 2013 ರಲ್ಲಿ ಮೊಟ್ಟಮೊದಲ ಬಾರಿಗೆ ಈ ಸ್ಟಂಪ್ ಗಳನ್ನು ಉಪಯೋಗಿಸಲಾಗಿತ್ತು. ನಂತರ ಐಸಿಸಿಯು 2014 ರಲ್ಲಿ ಬಾಂಗ್ಲಾದೇಶನಲ್ಲಿ ನಡೆದ ಟಿ-20 ಪಂದ್ಯದಲ್ಲಿ ಮೊದಲ ಬಾರಿಗೆ ಮಾನ್ಯತೆ ನೀಡಿತು.
ಅಂಪಾಯರ್ ಗಳಿಗೆ ಸಹಾಯ..
LED ಈ ಸ್ಟಂಪ್ ಗಳು ಅಂಪಾಯರ್ ಸಲುವಾಗಿ ತುಂಬಾ ಉಪಯುಕ್ತವಾಗಿವೆ. ಇವುಗಳಲ್ಲಿರುವ ತಂತ್ರಜ್ಞಾನದಿಂದ ಈ ಸ್ಟಂಪ್ ಗಳಿಗೆ ತುಂಬಾ ಬೆಲೆ ಇದೆ. ಬೇಲ್ಸ್ ನಲ್ಲಿರುವ ಮೈಕ್ರೋ ಪ್ರೋಸೆಸ್ ನಿಂದಾಗಿ ಎಲ್ಲ ಮೊಮೆಂಟ್ಸ್ ಗಳು ತಿಳಿದುಬರುತ್ತವೆ. ಇದರಲ್ಲಿರುವ ಬ್ಯಾಟರಿ ಕ್ಷಮತೆಯು ತುಂಬಾ ಹೆಚ್ಚಾಗಿರುತ್ತದೆ. ಹೀಗಾಗಿ ಬಾಲ್ ಬೆಲ್ಸ್ ಗಳಿಗೆ ಟಾಚ್ ಆಗುತ್ತಿದ್ದಂತೆ ಲೈಟ್ ಆನ್ ಆಗುತ್ತದೆ. ಒಂದು ಬೇಲ್ಸ್ ಬೆಲೆ 50 ಸಾವಿರ ರೂಪಾಯಿಗಳಷ್ಟಿದೆ.