Video; ಜಗಳ ಅಂದ್ರೆ ಇದು ಕಣ್ರೀ! ಇಂಗ್ಲಿಷ್ ನಲ್ಲಿ ಬೈದವನಿಗೆ ತಿರುಗಿ ಅದೇ ಭಾಷೆಯಲ್ಲಿ ತಿರುಗೇಟು ಕೊಟ್ಟ ಹಳ್ಳಿ ಮಹಿಳೆ; ಪುರುಷ ತಬ್ಬಿಬ್ಬು…

ಜಗಳವಿಲ್ಲದ ಜಾಗ ಜಗತ್ತಿನ ತುಂಬಾ ಅಲೆದರೂ ಸಿಗುವದಿಲ್ಲ. ಎಲ್ಲಿ ಜನರು ಇರುತ್ತಾರೆ ಅಲ್ಲಿ ಜಗಳ ವಾಸ್ತವ್ಯ ಮಾಡಿಯೇ ಮಾಡಿರುತ್ತದೆ. ಹೀಗಾಗಿ ಜಗಳವಿಲ್ಲದ ಜಾಗವೇ ಭೂಮಿಯ ಮೇಲೆ ಇಲ್ಲ ಎಂದು ಎದೆ ತಟ್ಟಿ ಹೇಳಬಹುದು. ಜಗಳದಲ್ಲಿ ಸಾಮಾನ್ಯವಾಗಿ ಸಿಟ್ಟಿಗೆದ್ದ ವ್ಯಕ್ತಿ ತನಗೆ ಗೊತ್ತಿರುವ ಕೆಟ್ಟ ಪದಗಳನ್ನೆಲ್ಲಾ ಬಳಸುತ್ತಾನೆ. ಜಗಳ ಇನ್ನಷ್ಟು ತಾರಕಕ್ಕೆ ಏರಿದಾಗ ಅಲ್ಲಿ ಕೆಲವು ಬಾರಿ ಪೆಟ್ಟುಗಳು ಬೀಳುತ್ತವೆ.

ವಿಶ್ವದ ಯಾವುದೇ ದೇಶಕ್ಕೆ ಹೋದರೂ ಜಗಳ ಇದು ಸಾಮಾನ್ಯ. ಆದರೆ ಇದರ ಪರಿಣಾಮ ಮಾತ್ರ ಎದುರಿನ ವ್ಯಕ್ತಿಯ ಮೇಲೆ ಅಪಾರವಾಗಿ ಬಿದ್ದು ಆತನ ಸ್ನೇಹ ಮತ್ತು ಮುಂದಿನ ದಿನಗಳಲ್ಲಿ ದೊರಕಬಹುದಾದ ಎಲ್ಲಾ ಸಹಕಾರ, ಸಹಾಯಗಳಿಗೂ ಸಂಚಕಾರ ಉಂಟಾಗುತ್ತದೆ. ಒಂದು ವೇಳೆ ಸಿಟ್ಟಿನ ಭರದಲ್ಲಿ ಕೆಟ್ಟ ಪದಗಳನ್ನು ಉಪಯೋಗಿಸಿದ್ದೇ ಆದರೆ ಜಗಳದ ಬಳಿಕ ಸಮಾಧಾನಭಾವದಿಂದ ಆ ಪದಗಳನ್ನು ಉಪಯೋಗಿಸಿದ ಬಗ್ಗೆ ಕ್ಷಮಾಪಣೆ ಕೇಳಿದರೆ ಇದು ಇಬ್ಬರಿಗೂ ಉತ್ತಮ.

ಮಿತ್ರರೇ ಈಗ ಇಲ್ಲಿ ನೀವು ನೋಡಲಿರುವ ಜಗಳ ಸಕತ್ ತಮಾಷೆಯಿಂದ ಕೂಡಿದೆ. ಈ ಜಗಳವನ್ನು ನೋಡಿದ ಮೇಲೆ ನೀವು ಗಂಭೀರವಾಗುವ ಬದಲು ಬಿದ್ದು ಬಿದ್ದು ನಗುತ್ತೀರಿ. ಅಂತಹ ವಿಶೇಷ ಜಗಳವನ್ನು ನೀವಿಲ್ಲಿ ನೋಡಲಿದ್ದೀರಿ. ಪ್ರಸ್ತುತ ವಿಡಿಯೋ ದೃಶ್ಯದಲ್ಲಿ ಇನ್ನೂವರೆಗೆ ಎಲ್ಲಿಯೂ ನೋಡಲು ಸಿಗದ ರೋಚಕ ಜಗಳ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಜಗಳದಲ್ಲಿ ಇಬ್ಬರು ವ್ಯಕ್ತಿಗಳು ಕಂಡು ಬರುತ್ತಿದ್ದಾರೆ. ಇವರಲ್ಲಿ ಒಬ್ಬ ಪುರುಷ ಇನ್ನೊಬ್ಬಳು ಮಹಿಳೆ ಇದ್ದಾಳೆ.

ಇಲ್ಲಿ ಯಾವುದೋ ವಿಷಯಕ್ಕಾಗಿ ಇಬ್ಬರಲ್ಲಿ ತಂಟೆ ತಕರಾರು ಜೋರಾಗಿ ನಡೆದಿದೆ. ಈ ಸಂದರ್ಭದಲ್ಲಿ ಪುರುಷ ತನ್ನ ಸ್ಥಿಮಿತವನ್ನು ಕಳೆದುಕೊಂಡು ಒಮ್ಮೆಲೇ ಇಂಗ್ಲಿಷ್ನಲ್ಲಿ ಶಟ್ ಅಪ್ ಎನ್ನುತ್ತಾನೆ. ಅದಕ್ಕೆ ಮಹಿಳೆಯು ಪ್ರತ್ಯುತ್ತರವಾಗಿ ಬಾಯಿಮಾತಿನಿಂದ ಏಟಿಗೆ ಎದುರೇಟು ನೀಡಿದ್ದಾಳೆ ಅದು ಇಂಗ್ಲೀಷ್ ನಲ್ಲಿ. ಆತ ಶಟ್ ಅಪ್ ಅಂದ ತಕ್ಷಣ ಮಹಿಳೆ ಸ್ವಲ್ಪವೂ ತಡ ಮಾಡದೆ ಸಿಟ್ಟಿನಲ್ಲಿ ಆತನಿಗಿಂತಲೂ ಜೋರಾಗಿ ಇಂಗ್ಲಿಷ್ನಲ್ಲಿ ‘ಐ ಲವ್ ಯು’ ಎಂದು ಬಿಡಬೇಕೆ?

ನೋಡಿ ಈ ರೋಚಕ ಜಗಳದ ತಮಾಷೆಯ ದೃಶ್ಯ…

ಪ್ರಸ್ತುತ ಈ ಯುನಿಕ್ ಜಗಳವನ್ನು ಸಾಮಾಜಿಕ ಜಾಲತಾಣವಾದ instagram ನಲ್ಲಿ cutechora_official_1456 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ತಮಾಷೆಯ ಜಗಳ ನೆಟ್ಟಿಗರಿಗೆ ಫುಲ್ ಪಸಂದಾಗಿಬಿಟ್ಟಿದೆ. ಹೀಗಾಗಿ ಈ ವಿಡಿಯೋ ಇಲ್ಲಿಯವರೆಗೆ 18.9 ಮಿಲಿಯನ್ ವೀಕ್ಷಣೆ ಪಡೆದಿದ್ದು ಸುಮಾರು ಎಂಟು ಲಕ್ಷಗಳವರೆಗೆ ಮೆಚ್ಚುಗೆಯನ್ನು ಪಡೆದಿದೆ.

ಈ ವಿಡಿಯೋ ನೋಡಿದ ನೆಟ್ಟಿಗರು ಖುಷಿಯಾಗಿಯೇ ಅಷ್ಟೇ ವಿಶೇಷ ರೀತಿಯಲ್ಲಿ ತಮ್ಮ ಪ್ರತಿಕ್ರಿಯೆಗಳನ್ನು ಕಮೆಂಟ್ ರೂಪದಲ್ಲಿ ವ್ಯಕ್ತಪಡಿಸಿದ್ದಾರೆ. ಒಬ್ಬ ಯೂಸರ್ ತನ್ನ ಪ್ರತಿಕ್ರಿಯೆಯಲ್ಲಿ, ‘ಏನೇ ಹೇಳಿ ಆಂಟಿ ಈ ಮೂರು ಪದಗಳನ್ನು ಬಳಸಿ ಜಗಳವನ್ನೇ ಖತಮ್ ಮಾಡಿದ್ದಾಳೆ’ ಎಂದಿದ್ದಾನೆ. ಇನ್ನೊಬ್ಬ ಯೂಸರ್, ‘ಅಬ್ಬಾ ಆಂಟಿ ಖತರ್ನಾಕ್ ಇಂಗ್ಲಿಷ್ ಮಾತನಾಡುತ್ತಾಳೆ’ ಎಂದಿದ್ದಾನೆ.