ಬಾಂಗ್ಲಾ ವಲಸಿಗರು ಹಾಗೂ ರೊಹಿಂಗ್ಯಾಗಳು ಮಮತಾ ಬ್ಯಾನರ್ಜಿಯ ದೊಡ್ಡ ಶಕ್ತಿ! -ಕಂಗನಾ ರಾಣಾವತ್
ನೇರವಾಗಿ, ಧಿಟ್ಟವಾಗಿ, ನಿರಂತರವಾಗಿ ಮಾತಾಡುತ್ತಿರುವ ಕಂಗನಾ ರಾಣಾವತ್ ನಿನ್ನೆ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇಲೆ ಮುಗಿಬಿದ್ದಿದ್ದರು. ಬಲಪಂಥೀಯ ಅಥವಾ ರಾಷ್ಟ್ರವಾದಿ ವಿಚಾರಧಾರೆಯ ಕಂಗನಾ ಹಿಂದೆ ಹಲವು ಸಲ ವಿವಾದಾತ್ಮಕ (?) ಹೇಳಿಕೆ ನೀಡಿದ್ದುಂಟು. ಅದರಲ್ಲೂ ಮಹಾರಾಷ್ಟ್ರ ಸರ್ಕಾರವನ್ನು ಇನ್ನಿಲ್ಲದಂತೆ ಕಾಡಿದಳು. ಅದಕ್ಕೆ ಪ್ರತಿಯಾಗಿ ಖುದ್ದು ಸರ್ಕಾರವೇ ಆಕೆಯ ವಿರುದ್ದ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸಿತು. ಅದಕ್ಕಾಗಿ ಕೋರ್ಟ್ ನಿಂದ ಛಿಮಾರಿ ಕೂಡ ಹಾಕಿಸಿಕೊಂಡಿತು.
ಆಮೇಲೆ ಕೂಡ ಕಂಗನಾ ತಣ್ಣಗಾಗಲಿಲ್ಲ. ದೇಶವಿರೋಧಿ ಹೇಳಿಕೆ ನೀಡುವ ಅಥವಾ ಅಂಥವರಿಗೆ ಬೆಂಬಲಿಸುವವರ ಬೆವರಿಳಿಸತೊಡಗಿದಳು. ಕೆಲವೊಮ್ಮೆ ನೆಟ್ಟಿಗರಿಂದ ಸ್ವತಃ ತಾನೇ ಟ್ರೋಲ್ ಆಗುವುದುಂಟು. ಮಾತಾಡುವ ವಿಷಯದಲ್ಲಿ ಇನ್ನೂ ಸ್ವಲ್ಪ ಪಳಗಬೇಕಿರುವ ಕಂಗನಾ, ಕೆಲವು ಸಲ ಬೇಕಾಬಿಟ್ಟಿ ಮಾತಾಡಿದ್ದೂ ಉಂಟು.
ಈಗ ಪಶ್ಚಿಮ ಬಂಗಾಲದಲ್ಲಿ ಬಿಜೆಪಿ ಅಧಿಕಾರಕ್ಕೆ ಏರದ ಅಸಮಾದಾನದಲ್ಲಿ ಅವರು ದೀದಿ ಮೇಲೆ ವಾರ್ ಸುರು ಮಾಡಿದ್ದಾರೆ. ವಾಸ್ತವದಲ್ಲಿ ಪಶ್ಚಿಮ ಬಂಗಾಲದಲ್ಲಿ ವಲಸಿಗರ ಪ್ರಾಬಲ್ಯ ಇರುವುದು ನಿಜ. ಅವರನ್ನು ಮನೆಮಕ್ಕಳಂತೆ ಸಾಕಿ ಅವರಿಗೆ ಬೇಕಾದ ದಾಖಲೆ ಕೂಡ ಒದಗಿಸಲಾಗಿದೆ. ಅಂದಮೇಲೆ ಅವರ ಓಟ್ ಸಿಗುವುದು ಕೂಡ ಸಹಜ.
ಅಲ್ಲಿ ಪರಸ್ಥಿತಿ ಹೀಗಾಗಲು ಕೇಂದ್ರ ಸರಕಾರವೇ ಕಾರಣ. ಬಾಂಗ್ಲಾ ನುಸುಳುಕೋರರ ಬಗ್ಗೆ, ರೊಹಿಂಗ್ಯಾಗಳ ಬಗ್ಗೆ ಅದು ಗಟ್ಟಿ ನಿಲುವು ತಾಳಲೇ ಇಲ್ಲ. ಮೊದಲ ಬಾರಿ ಮೋದಿಯವರು ಪ್ರಧಾನಿ ಆಗುವುದಕ್ಕೂ ಮೊದಲೇ ಅಮಿತ್ ಶಾ ರವರು ಬಾಂಗ್ಲಾ ವಲಸಿಗರಿಗೆ ಸಾಮಾನು ಪ್ಯಾಕ್ ಮಾಡಿಕೊಳ್ಳಲು ಸೂಚಿಸಿದ್ದರು. ಆದರೆ ಇವತ್ತಿಗೂ ಅವರಿಂದ ಯಾರನ್ನೂ ಹೊರಗಟ್ಟಲು ಸಾಧ್ಯವಾಗಿಲ್ಲ.

ಯಾವಾಗೋ ಒಂದು ಸಲ ಬಂಗಾಲದ ಚೆಕ್ ಪೋಸ್ಟ್ ಗಳಲ್ಲಿ ಸೈನಿಕರನ್ನು ನೇಮಿಸಿದ್ದಕ್ಕೆ ದೀದಿ ಭೂಮಿ ಆಕಾಶ ಒಂದು ಮಾಡಿದ್ದರು. ಹೆದರಿದ ಕೇಂದ್ರ ಅವರನ್ನು ವಾಪಸ್ ಕರೆಸಿಕೊಂಡಿತು. ಮತ್ತೆ ಕೇಂದ್ರ ಅಂಥ ಸಾಹಸಕ್ಕೆ ಕೈ ಹಾಕಲೇ ಇಲ್ಲ. ಇದೆಲ್ಲದರ ಪರಿಣಾಮವೇ ನಿನ್ನೆಯ ಪಲಿತಾಂಶ.
ಈ ಬಗ್ಗೆಯೇ ಟ್ವೀಟ್ ಮಾಡಿರುವ ಕಂಗನಾ, ಬಾಂಗ್ಲಾ ಅಕ್ರಮ ನುಸುಳುಕೋರರು ಹಾಗೂ ರೊಹಿಂಗ್ಯಾಗಳು ದೀದಿಯ ದೊಡ್ಡ ಶಕ್ತಿ ಅಂದಿದ್ದಾರೆ. ಜೊತೆಗೆ ಪಶ್ಚಿಮ ಬಂಗಾಲ ಮತ್ತೊಂದು ಕಾಶ್ಮಿರವಾಗಲಿದೆ ಎಂಬುದನ್ನೂ ಅವರು ಹೇಳಿದ್ದಾರೆ. ನಿನ್ನೆಯಾಗಲೇ ಅಲ್ಲಿ ಗೆದ್ದ ಖುಷಿಯಲ್ಲಿ ಬಿಜೆಪಿ ಕಛೇರಿಗಳಿಗೆ ಬೆಂ’ಕಿ ಹಚ್ಚಿ ಹ’ಲ್ಲೆ ನಡೆಸಿರುವುದು ವರದಿಯಾಗಿದೆ.
-Team Infotrend