ಕಾರ್ಮಿಕ ಕಾರ್ಡ್ ಇದ್ದವರಿಗೆ ಸಿಗಲಿದೆ 20,000 ರೂಪಾಯಿಗಳು..! ಕೂಡಲೇ ಈ ಕೆಲಸ ತಪ್ಪದೇ ಮಾಡಿ…
ಕಾರ್ಮಿಕ ಕಾರ್ಡ್ ಇದ್ದವರಿಗೆ ಅಥವಾ ಲೆಬರ್ ಕಾರ್ಡ್ ಹೊಂದಿದವರಿಗೆ ಕಾರ್ಮಿಕ ಕಲ್ಯಾಣ ಇಲಾಖೆಯಿಂದ ಭರ್ಜರಿ ಗುಡ್ ನ್ಯೂಸ್ ಇದೆ. ಹೊಸದೊಂದು ವಿಷಯದ ಕುರಿತು ನೀವು ತಿಳಿದುಕೊಳ್ಳಲೇಬೇಕು. ಕೆಲವೊಂದು ಸ್ಕೀಮ್ ಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆ ಸ್ಕೀಮ್ಗಳು ಯಾವವು ಮತ್ತು ಅದರಿಂದಾಗುವ ಪ್ರಯೋಜನಗಳ ಬಗ್ಗೆ ಓದಿ ತಿಳಿದುಕೊಳ್ಳಿ. ಮತ್ತು ತಪ್ಪದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಕಾರ್ಮಿಕ ಕಾರ್ಡ ಇದ್ದವರಿಗಾಗಿ ಎರಡು ಸ್ಕೀಮ್ ಗಳ ಅರ್ಜಿಯನ್ನು ಆಹ್ವಾನಿಸಲಾಗಿದೆ. ನೊಂದಾಯಿತ ಕಾರ್ಮಿಕರ ಆರೋಗ್ಯದ ಹಿತ ದೃಷ್ಟಿಯಿಂದ ಕಾರ್ಮಿಕ ಕಲ್ಯಾಣ ಮಂಡಳಿ ವತಿಯಿಂದ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.
•ಕಾರ್ಮಿಕರ ಚಿಕಿತ್ಸಾ ಭಾಗ್ಯ : ಈ ಸ್ಕೀಮ್ ನ ಅಡಿಯಲ್ಲಿ ಹೃದ್ರೋಗ, ಕಿಡ್ನಿ ಜೋಡಣೆ, ಕಾನ್ಸರ್ ಶಸ್ತ್ರಚಿಕಿತ್ಸೆ, ಕಣ್ಣಿನ ಶಸ್ತ್ರಚಿಕಿತ್ಸೆ ಸೇರಿದಂತೆ ಅನೇಕ ಗಂಭೀರ ಕಾಯಿಲೆಗಳ ಚಿಕಿತ್ಸೆಗಾಗಿ 2,00,000 ರೂಪಾಯಿಗಳವರೆಗೆ ಸಹಾಯ ಧನವನ್ನು ನೀಡಲಾಗುವುದು.
•ಕಾರ್ಮಿಕರ ಆರೋಗ್ಯ ಭಾಗ್ಯ : ಈ ಸ್ಕೀಮ್ ನ ಅಡಿಯಲ್ಲಿ ನೊಂದಾಯಿತ ಫಲಾನುಭವಿಗಳಿಗೆ ಮತ್ತು ಅವರ ಅವಲಂಬಿತರಿಗೆ ಕನಿಷ್ಠ 300 ರೂಪಾಯಿಗಳಿಂದ ಗರಿಷ್ಠ 20,000 ರೂಪಾಯಿಗಳವರೆಗೆ ಸಹಾಯ ಧನವನ್ನು ನೀಡಲಾಗುವುದು.
ಕಾರ್ಮಿಕ ಕಾರ್ಡ್ ಇದ್ದವರು ಮೇಲಿನ ಎರಡು ಸ್ಕೀಮ್ ಗಳ ಪ್ರಯೋಜನವನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಅರ್ಹತೆಯನ್ನು ಮತ್ತು ಅಗತ್ಯ documents ಗಳನ್ನು ಹೊಂದಿರಬೇಕಾಗುತ್ತದೆ. ವೊದಲನೇಯದಾಗಿ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೊಂದಾಯಿತರಾಗಿರಬೇಕು ಮತ್ತು ನೊಂದಣಿ ಚಾಲ್ತಿಯಲ್ಲಿರಬೇಕು. ಫಲಾನುಭವಿಗಳು ಸರ್ಕಾರಿ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಪ್ರಮಾಣಪತ್ರವನ್ನು ಲಗತ್ತಿಸಬೇಕು. ಕನಿಷ್ಠ 2 ದಿನಗಳ ಕಾಲ ಒಳರೋಗಿ(admitted) ಆಗಿರುವ ಬಗ್ಗೆ ದಾಖಲೆ ನೀಡಬೇಕು. ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕವು ಆರು ತಿಂಗಳ ಕಾಲ ಅರ್ಜಿಯನ್ನು ಸಲ್ಲಿಸಲು ಕಾರ್ಮಿಕ ಚಿಕಿತ್ಸಾ ಭಾಗ್ಯ ಯೋಜನೆಯಡಿಯಲ್ಲಿ ಅವಕಾಶ ಇರುತ್ತದೆ. ಮತ್ತು ಕಾರ್ಮಿಕ ಆರೋಗ್ಯ ಭಾಗ್ಯ ಯೋಜನೆ ಅಡಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ದಿನಾಂಕದಿಂದ ಆರು ತಿಂಗಳ ಅವದಿಯಲ್ಲಿ ಅರ್ಜಿಯನ್ನು ಸಲ್ಲಿಸುವ ಅವಕಾಶ ನೀಡಲಾಗಿದೆ.
ಅರ್ಜಿ ಸಲ್ಲಿಸುವ ಮುನ್ನ ಅವಶ್ಯಕವಾಗಿ ಹೊಂದಿರಬೇಕಾದ ದಾಖಲೆಗಳೆಂದರೆ, ಮಂಡಳಿಯಿಂದ ನೀಡಲಾದ ನೊಂದಣಿ ಅಥವಾ ಕಾರ್ಮಿಕ ಕಾರ್ಡ್ ಅನ್ನು ಹೊಂದಿರಬೇಕು. ರೇಷನ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ಪೇಜ್ ನ ಪ್ರತಿಯನ್ನು ಹೊಂದಿರಬೇಕು. ಉದ್ಯೋಗ ಅಥವಾ ಸ್ವಯಂ ಧೃಡಿಕರಣ ಪತ್ರವನ್ನು ಹೊಂದಿರಬೇಕು. ಆಸ್ಪತ್ರೆಗೆ ದಾಖಲಾದ ಮತ್ತು ಬಿಡುಗಡೆಯಾದ ದಿನಾಂಕದೊಂದಿಗೆ ಚಿಕಿತ್ಸಾ ವಿವರಗಳನ್ನು ಒಳಗೊಂಡ ದಾಖಲಾತಿಯ ಅವಶ್ಯಕತೆ ಇದೆ. ಬಿಡುಗಡೆ ಪ್ರಮಾಣ ಪತ್ರ (discharge) ಬೇಕಾಗುತ್ತದೆ. ಕಾರ್ಮಿಕ ಚಿಕಿತ್ಸಾ ಭಾಗ್ಯ ಸ್ಕೀಮ್ ನ ಪ್ರಯೋಜನ ಪಡೆಯಲು ನಮೂನೆ 22ಎ ರಲ್ಲಿ ಆಸ್ಪತ್ರೆಯಿಂದ ಭರ್ತಿ ಮಾಡಿದ ಅರ್ಜಿಯನ್ನು ಇಟ್ಟುಕೊಂಡಿರಬೇಕು. ಈ ದಾಖಲೆಯನ್ನು ವೈದ್ಯರ ಸಹಾಯದಿಂದ ಪಡೆಯಬೇಕು.
ಈ ಎಲ್ಲಾ ಅರ್ಹತೆ ಮತ್ತು ದಾಖಲೆಗಳನ್ನು ಹೊಂದಿದವರು ಮೇಲಿನ ಸ್ಕೀಮ್ ಗಳ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿ ಸದುಪಯೋಗ ಪಡೆದುಕೊಳ್ಳಬಹುದು. ಅರ್ಜಿಯನ್ನು ಸೇವಾ ಸಿಂಧುವಿನ ಮುಖಾಂತರ ಸಲ್ಲಿಸಬೇಕು. ಇದೀಗ ಪ್ರಕ್ರಿಯೆಯು ಆರಂಭವಾಗಿದ್ದು ಅರ್ಜಿಯನ್ನು ಕೂಡಲೇ ಸಲ್ಲಿಸಬಹುದು. ಮೇಲಿನ ಎರಡು ಸ್ಕೀಮ್ಗಳನ್ನು ಕಾರ್ಮಿಕರ ಆರೋಗ್ಯದ ಕಾಳಜಿಗಾಗಿಯೇ ಜಾರಿಗೆ ತರಲಾಗಿದೆ. ಅದಕ್ಕಾಗಿ ಮಾಹಿತಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಹಂಚಿಕೊಂಡು ಅರ್ಹರು ಉಪಯೋಗ ಪಡೆಯುವಲ್ಲಿ ಸಹಕರಿಸಿ.
ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ.