Video; ಮಜಾಕ್, ಮಸ್ತಿ, ಗೋಳು ಹೊಯ್ದುಕೊಳ್ಳುವದು ಬರೀ ಮನುಷ್ಯರಷ್ಟೇ ಅಲ್ಲ ಜಂಗಲ್ ಪ್ರಾಣಿಗಳೂ ಸಹ ಸಖತ್ತಾಗಿ ಮಾಡುತ್ತವೆ.

ಇಂಟರ್ನೆಟ್ ಜಗತ್ತಿನಲ್ಲಿ ಪ್ರಾಣಿಗಳ ತಮಾಷೆಯ ವಿಡಿಯೋಗಳು ಸಾಕಷ್ಟು ನೋಡಲು ಸಿಗುತ್ತವೆ. ಕೆಲವು ಸಲ ಪ್ರಾಣಿಗಳ ಆಶ್ಚರ್ಯ ಪಡುವಂತಹ ವಿಡಿಯೋಗಳು ವೈರಲ್ ಆಗಿಬಿಡುತ್ತವೆ. ಸದ್ಯ ಹುಲಿ ಮತ್ತು ಘೇಂಡಾಮೃಗದ ತಮಾಷೆಯ ವಿಡಿಯೋ ಒಂದು ಇಂಟರ್ನೆಟ್ ನಲ್ಲಿ ತುಂಬಾ ವೈರಲ್ ಆಗುತ್ತಿದೆ.

ಪ್ರಸ್ತುತ ವಿಡಿಯೋವನ್ನು ಅರಣ್ಯ ಅಧಿಕಾರಿಯಾದ ಸುಶಾಂತ್ ನಂದಾ ಅವರು ಟ್ವಿಟರ್ ನಲ್ಲಿ ತಮ್ಮ ಅಕೌಂಟ್ ನಿಂದ ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಸುಮ್ಮನೆ ನಿಂತ ಘೇಂಡಾಮೃಗಕ್ಕೆ ಹುಲಿಯೊಂದು ಕೆಣಕಲು ಮುಂದಾಗಿದೆ. ಅದರ ಬಾಲವನ್ನು ನೋಡಿ ಕೆಣಕಲು ಯತ್ನಿಸುವ ಹುಲಿ ಘೇಂಡಾಮೃಗ ಹೊರಳಿ ನೋಡುತ್ತಲೇ ಅಲ್ಲಿಂದ ಕಾಲ್ಕಿತ್ತಿ ಓಡಿ ಹೋಗಿದೆ. ಅರಣ್ಯದಲ್ಲಿ ಎರಡು ಘೇಂಡಾಮೃಗಗಳು ತನ್ನಷ್ಟಕ್ಕೆ ತಾನು ಹುಲ್ಲು ಮೇಯುತ್ತ ನಿಂತಿವೆ. ಆಗ ಹಿಂದಿನಿಂದ ಎರಡು ಹುಲಿಗಳು ಬಂದು ಆ ಮೃಗಗಳ ಬಾಲ ಮುಟ್ಟುವ ಅಥವಾ ಬಹುಶಃ ಜಗ್ಗುವ ಪ್ರಯತ್ನ ಮಾಡಬೇಕೆಂದುಕೊಂಡಿವೆ. ಆಗ ಘೇಂಡಾ ಸ್ವಲ್ಪ ಹಿಂದೆ ಹೊರಳುತ್ತಲೇ ಎರಡೂ ಹುಲಿಗಳು ಕ್ಷಣದಲ್ಲಿ ಪಲಾಯನ ಮಾಡಿವೆ. ಪ್ರಸ್ತುತ ವಿಡಿಯೋ ನೋಡಲು ತುಂಬಾ ತಮಾಷೆಯಿಂದ ಕೂಡಿದೆ.

ವಿಡಿಯೋ ನೋಡಿ

ಈ ವಿಡಿಯೋ ಇಲ್ಲಿಯವರೆಗೆ 50 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ವಿಡಿಯೋ ನೋಡಿದ ಯೂಸರ್ಸ್ ಗಳು ತುಂಬಾ ತಮಾಷೆಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಅದರಲ್ಲಿ ಒಬ್ಬ ಯೂಸರ್ ‘ತಪ್ಪಾದ ನಂಬರ್ ಡಯಲ್ ಮಾಡುವುದು ಕೆಲವೊಮ್ಮೆ ತುಂಬಾ ಕತರ್ನಾಕ್ ಸಾಬೀತಾಗುತ್ತದೆ’ ಎಂದಿದ್ದಾನೆ.