VIDEO : ಈಕೆಯ ಸಿಟ್ಟು ನೋಡಿದ ನೆಟ್ಟಿಗರು “ಈಯಮ್ಮ ಏನ್ ಜಾಸ್ತಿ ದಿನ ಗಂಡನ ಜೊತೆ ಜೀವನ ಮಾಡಲ್ಲ” ಎನ್ನುತ್ತಿದ್ದಾರೆ!
ಇದು ಸಾಮಾಜಿಕ ಜಾಲತಾಣದಲ್ಲಿ ಇವತ್ತು ವೈರಲ್ ಆಗುತ್ತಿರುವ ವಿಡಿಯೊ, ಇದರಲ್ಲಿ ಮದುವೆ ನಡೆಯುತ್ತಿದ್ದು, ಅಲ್ಲಿ ನಡೆದ ವಿಚಿತ್ರ ಘಟನೆಯೊಂದರ ದೃಶ್ಯ ಇಲ್ಲಿದೆ. ಸಿಹಿ ತಿನಿಸಲು ಹೋದ ವಧು ಸಿಹಿ ಬಾಯಿಗಿಡದೇ ಎಸೆದ ಘಟನೆ ನಡೆದಿದ್ದು, ಅಲ್ಲಿದ್ದ ಹೆಣ್ಣಿನ ಕಡೆಯವರಿಗೆ ಇದು ತೀವ್ರ ಮುಜುಗರ ಉಂಟುಮಾಡಿದೆ.
ಈ ಮದುವೆ ಸಮಾರಂಭದಲ್ಲಿ ಆಕೆಯ ಮೂಡ್ ಸರಿ ಇರಲಿಲ್ಲವಂತೆ, ಅದಕ್ಕಾಗಿ ಹಾಗೆ ಮಾಡಿದಳಂತೆ ಎಂದು ಆಕೆಯ ಕಡೆಯವರು ಆಮೇಲೆ ಸಮಜಾಯಿಷಿ ಕೊಡುತ್ತಿದ್ದಾರೆ. ಆಕೆಯ ಮೂಡ್ ಆಫ್ ಇದ್ದಾಗಲೇ ಸಿಹಿ ತಿನ್ನಿಸುವ ಸಂಪ್ರದಾಯ ಸುರುವಾಗಿದೆ. ಆಚರಣೆ ಪ್ರಕಾರ ವಧು ವರನಿಗೆ ಹಾಗೂ ವರ ವಧುವಿಗೆ ಸ್ವೀಟ್ ಬಾಯಿಗಿಡಬೇಕು. ಆದರೆ ಆಕೆಗೆ ಅಷ್ಟೊಂದು ವ್ಯವಧಾನ ಇರಲಿಲ್ಲ.
ಲಡ್ಡು ತಂದು ವರನ ಮುಖದ ಮುಂದೆ ಹಿಡಿದಳು ಆಗ ತಿನ್ನಿಸು ಅಂತ ವರ ಹಾಗೂ ಇತರರು ಹೇಳಿದಾಗ ತಗೆದು ಮುಖಕ್ಕೆ ಹೊಡೆದಂತೆ ಸೈಡಿಗೆ ಎಸೆದಿದ್ದಾಳೆ. ಆಗ ಅಲ್ಲಿದ್ದ ಆಕೆಯ ಕಡೆಯವರಿಗೆ ಏನು ಮಾಡಬೇಕೊ ತಿಳಿಯಲಿಲ್ಲ. ಎಲ್ಲರೂ ಪೆಚ್ಚಾಗಿ ನಿಂತರು. ಜನ ಮಾತ್ರ ಹೀಗಾದ್ರೆ ಈಯಮ್ಮ ನಾಕ್ ದಿನ ಕೂಡ ಗಂಡನ ಜೊತೆ ಬಾಳಲ್ಲ ಬಿಡಿ ಎಂದು ಮಾತಾಡತೊಡಗಿದರು.
ಆಕೆಯ ಕೋಪ ಅಲ್ಲಿದ್ದ ಎಲರಿಗೂ ಬೇಸರ ತರಿಸಿತ್ತು. ಈ ವಿಡಿಯೊವನ್ನು tube.Indian ಎಂಬ ಇನ್ಸ್ಟಾಗ್ರಾಂ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಈಗಾಗಲೇ 45 ಸಾವಿರದಷ್ಟು ವೀಕ್ಷಣೆ ಕಂಡಿರುವ ವಿಡಿಯೊಗೆ 500 ಕ್ಕೂ ಹೆಚ್ಚು ಜನ ಕಾಮೆಂಟ್ ಮಾಡಿದ್ದಾರೆ. ಬಹುತೇಕರು ಎಂದು ಅಭಿಪ್ರಾಯ ಪಡ್ತಿದಾರೆ. ವಿಡಿಯೊ ಮೇಲಿದೆ ನೋಡಿ.
-Team Infotrend