ಮೆಟ್ರೋದಲ್ಲಿ ಹುಡುಗಿ ಮಾಡಿದ ಸಖತ್ ಡಾನ್ಸ್ ಆಯಿತು ವೈರಲ್! ಇಂಟರ್ನೆಟ್ ನಲ್ಲಿ ಮಾತ್ರ ಶುರುವಾಯ್ತು ಕದನ…ಯಾಕೆ ನೋಡಿ.
ಸೋಶಿಯಲ್ ಮೀಡಿಯಾದ ಈ ಥಳುಕು ಬಳುಕಿನ ಈ ಜಗತ್ತಿನಲ್ಲಿ ಎಲ್ಲರೂ ಪಾಪ್ಯುಲರ್ ಆಗಲು ಯತ್ನಿಸುತ್ತಿದ್ದಾರೆ. ಇದೇ ಕಾರಣಕ್ಕಾಗಿ ಇನ್ಸ್ಟಾ ಗ್ರಾಮ್ ನಲ್ಲಿ ಅಥವಾ ಫೇಸ್ಬುಕ್ ನಲ್ಲಿ ತರತರದ ವಿಡಿಯೋಗಳು ಪೋಸ್ಟ್ ಮಾಡುವದನ್ನು ನೋಡುತ್ತೇವೆ. ಸದ್ಯ ಹೊಸದಾದ ವಿಡಿಯೋ ಒಂದು ಭರ್ಜರಿಯಾಗಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಹುಡುಗಿಯೊಬ್ಬಳು ಮೆಟ್ರೋದಲ್ಲಿಯೇ ಕುಣಿಯುತ್ತಿರುವ ದೃಶ್ಯ ಕಂಡು ಬರುತ್ತಿದೆ. ಈ ವೀಡಿಯೋವನ್ನು ಇಲ್ಲಿಯವರೆಗೆ ಸಾವಿರಾರು ಜನರು ನೋಡಿದ್ದಾರೆ. ಮತ್ತು ನೂರಾರು ಜನ ಕಾಮೆಂಟ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಲೇ ಹೊಸ ವಾದಕ್ಕೆ ಎಡೆ ಮಾಡಿ ಕೊಟ್ಟಿದೆ. ಅದೇನೆಂದರೆ, ಸಾರ್ವಜನಿಕ ಕ್ಷೇತ್ರಗಳಲ್ಲಿ ಈ ರೀತಿಯ ವೀಡಿಯೊ ಶೂಟ್ ಮಾಡುವ ಬಗ್ಗೆ ಮತ್ತು ಡಾನ್ಸ್ ಮಾಡುವ ಆಕ್ಷೇಪ ಕೇಳಿ ಬರುತ್ತಿದೆ.
ಪ್ರಸ್ತುತ ವೈರಲ್ ವಿಡಿಯೋ ಹೈದರಾಬಾದ್ ನಲ್ಲಿಯದಿದೆ ಎಂದು ತಿಳಿದು ಬರುತ್ತಿದೆ. ಈ ವೀಡಿಯೋವನ್ನು ಹಾಯ್ ಹೈದ್ರಾಬಾದ್ ಹೆಸರಿನ ಟ್ವಿಟರ್ ಪೇಜ್ ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಹುಡುಗಿಯೊಬ್ಬಳು ಥoದನಾನಂದ ಹಾಡಿಗೆ ಡಾನ್ಸ್ ಮಾಡುವದನ್ನು ನೋಡಬಹುದು. ಇದು ಪೂರ್ವ ಸುಂದರನಿಕಿಯ ಪ್ರೋಮೋ ಸಾಂಗ್ ಆಗಿದೆ. ಈ ವಿಡಿಯೋದ ಕ್ಯಾಪ್ಶನ್ ನಲ್ಲಿ “ಹೈದ್ರಾಬಾದ್ ಮೆಟ್ರೋ ನಲ್ಲಿ ಡಾನ್ಸ್ ಇದು ಯಾವಾಗ ಆಯಿತು” ಎನ್ನಲಾಗಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಚರ್ಚೆ ಗಿಟ್ಟಿಸಿದೆ. ಮತ್ತು ಜನರ ರಿಯಾಕ್ಷನ್ ತುಂಬಾ ಪಡೆಯುತ್ತಿದೆ.
ವಿಡಿಯೋ ನೋಡಿ
💃 Dance On Hyderabad Metro 🚄
When did this happen??? pic.twitter.com/ZilPdia9fx
— Hi Hyderabad (@HiHyderabad) July 20, 2022
ಯುಸರ್ಸ್ ಗಳ ಮಧ್ಯೆ ವಿವಾದಕ್ಕೆ ಕಾರಣ…
ಈ ವಿಡಿಯೋ ನೋಡಿದ ನಂತರ ಕೆಲವರು ಹುಡುಗಿಯ ಡೇರಿಂಗ್ ಮೆಚ್ಚಿ ಹೊಗಳುತ್ತಿದ್ದರೆ ಇನ್ನು ಕೆಲವರು ಪಬ್ಲಿಕ್ ಪ್ಲೇಸ್ ನಲ್ಲಿ ಹಾಗೂ ಪಬ್ಲಿಕ್ ಟ್ರಾನ್ಸ್ ಪೋರ್ಟ್ ನಲ್ಲಿ ಈ ರೀತಿಯ ಚಟುವಟಿಕೆಗಳನ್ನು ಮಾಡುವದು ಶುದ್ಧ ತಪ್ಪು ಎಂದಿದ್ದಾರೆ. ಹಾಗೂ ಹುಡುಗಿಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದಿದ್ದಾರೆ. ಒಬ್ಬನಂತೂ ತನ್ನ ಕಾಮೆಂಟ್ ನಲ್ಲಿ ಮೆಟ್ರೋದಲ್ಲಿಯ ಈ ರೀತಿಯ ವರ್ತನೆಗೆ ಸರಿಯಾದ ಶಿಕ್ಷೆ ನೀಡಬೇಕು. ಮೆಟ್ರೋ ನಿಮ್ಮ ಪ್ರೈವೇಟ್ ಪ್ರಾಪರ್ಟಿ ಅಲ್ಲ ಎಂದಿದ್ದಾನೆ. ಇನ್ನೊಬ್ಬ ಯೂಸರ್, ಆಕೆ ಯಾರ ಸ್ವಾತಂತ್ರ್ಯವನ್ನು ಕಸಿದುಕೊಂಡಿಲ್ಲ. ಮತ್ತು ಎಲ್ಲಿಯೂ ರಸ್ತಾ ರೋಕೊ ಮಾಡಿಲ್ಲ. ನನಗೆ ಆಕೆಯ ಆತ್ಮವಿಶ್ವಾಸದ ಬಗ್ಗೆ ಹೆಮ್ಮೆ ಇದೆ, ಎಂದಿದ್ದಾನೆ.