Video; ಕಾಟ ನೀಡುವ ಮಿತ್ರರು ಬರೀ ಮನುಷ್ಯರಿಗಷ್ಟೇ ಇರುವದಿಲ್ಲ; ಉಯ್ಯಾಲೆ ಆಡುತ್ತಿರುವ ಮಂಗಕ್ಕೆ ಬೇರೆ ಮಂಗ ಮಾಡಿದ್ದೇನು?

ಮನುಷ್ಯನಿಗೆ ಕಿರುಕುಳ ನೀಡುವ ಮಿತ್ರರೇನೂ ಕಡಿಮೆ ಇರುವದಿಲ್ಲ. ಈ ಕಿರುಕುಳ ನೀಡುವ ಮಿತ್ರರು ಹೊತ್ತು, ಗತ್ತು, ಸಮಯ, ಸಂದರ್ಭ ಯಾವುದು ನೋಡುವುದಿಲ್ಲ. ಅವರ ಮನಸ್ಸಿಗೆ ಬಂದಾಗ ಮಿತ್ರರನ್ನು ಗೋಳು ಹೊಯ್ದುಕೊಳ್ಳಲು ಮುಂದಾಗುತ್ತಾರೆ. ಈ ರೀತಿಯ ಮಿತ್ರರು ಬರೀ ಮನುಷ್ಯರಿಗಷ್ಟೇ ಇರುತ್ತಾರೆಂದು ತಿಳಿಯಬೇಡಿ. ಈತರ ಪ್ರಾಣಿಗಳಲ್ಲಿಯೂ ಇಂಥ ಹಾಳಾದ ಸ್ನೇಹಿತರು ಕಂಡು ಬರುತ್ತಾರೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಏನದು ಬನ್ನಿ ನೋಡೋಣ.

ಪ್ರಸ್ತುತ ವಿಡಿಯೋದಲ್ಲಿ ಒಂದು ಮಂಗವು ಸ್ಟೀಲ್ ಚಕ್ರದ ರೀತಿಯ ಉಪಕರಣದಲ್ಲಿ ಕುಳಿತು ತನ್ನಷ್ಟಕ್ಕೆ ತಾನು ನಿಧಾನವಾಗಿ ತೂಗಿಕೊಂಡು ಆಟ ಆಡುತ್ತಿದೆ. ಇನ್ನೊಂದು ಮಂಗವು ಅಲ್ಲಿಯೇ ಕುಳಿತುಕೊಂಡು ತಲೆ ತುರಿಸಿಕೊಳ್ಳುತ್ತ ತನ್ನದೇ ಗುಂಗಿನಲ್ಲಿ ಕುಳಿತಿದೆ. ಅದೇನಾಯ್ತೋ ಗೊತ್ತಿಲ್ಲ, ಕೆಳಗೆ ಕುಳಿತ ಮಂಗ ಹಠಾತ್ ಎದ್ದು ಎರಡನೆಯ ಮಂಗ ಕುಳಿತ ಚಕ್ರವನ್ನು ಗರಗರನೇ ತಿರುಗಿಸಿ ತಾನು ಮಾತ್ರ ಸರಕ್ಕನೆ ಇಳಿದು ಬಿಡುತ್ತದೆ. ಮಂಗಗಳ ಈ ವಿಡಿಯೋ ನಿಜಕ್ಕೂ ತುಂಬಾ ತಮಾಷೆಯಾಗಿದೆ. ಅಷ್ಟೇ ಅಲ್ಲ ಮನುಷ್ಯರಂತೆ ಬೇರೆ ಪ್ರಾಣಿಗಳಲ್ಲಿಯೂ ಕಿರುಕುಳ ನೀಡುವ ಮಿತ್ರರು ಇದ್ದೇ ಇರುತ್ತಾರೆ ಎಂಬುದು ಇದರಿಂದ ತಿಳಿದು ಬರುತ್ತದೆ, ಅಲ್ವಾ?

ವೀಡಿಯೋ ನೋಡಿ