ತಪ್ಪಿ ಬಾತ್ರೂಮಿನಲ್ಲಿಯ ಫೋಟೋ ಶೇರ್ ಮಾಡಿದರೆ ಗಾಯಕಿ ನೇಹಾ ಕಕ್ಕರ್?; ಸೋಷಿಯಲ್ ಮಿಡಿಯಾದಲ್ಲಿ…

ಸುಪ್ರಸಿದ್ಧ ಬಾಲಿವುಡ್ ಗಾಯಕಿ ನೇಹಾ ಕಕ್ಕರ್ ಅವರು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟಿವ್ ಆಗಿರುತ್ತಾರೆ. ಹೆಚ್ಚು ಕಡಿಮೆ ದಿನಂಪ್ರತಿ ತಮ್ಮ ಫೋಟೋಗಳನ್ನು ಅಭಿಮಾನಿಗಳ ಜೊತೆಗೆ ಶೇರ್ ಮಾಡುತ್ತಿರುತ್ತಾರೆ. ಅವರ ಅನೇಕ ಫೋಟೋಗಳು ನೋಡು ನೋಡುವಷ್ಟರಲ್ಲಿ ವೈರಲ್ ಆಗುತ್ತವೆ.

ಈಗ ಅವರು ತಮ್ಮ ಫೋಟೋಗಳನ್ನು ಮತ್ತೆ ಶೇರ್ ಮಾಡಿದ್ದಾರೆ. ಈ ಫೋಟೋಗಳು ಅವರ ಅಭಿಮಾನಿಗಳಿಗೆ ತುಂಬಾ ಹಿಡಿಸಿವೆ. ಅಭಿಮಾನಿಗಳ ಜೊತೆಗೆ ನೇಹಾ ಅವರ ಪತಿಯು ಸಹ ಮತ್ತೊಮ್ಮೆ ಈ ಫೋಟೋಗೆ ಮಾರುಹೋಗಿದ್ದಾರೆ.

ಬಾತ್ ರೂಮಿನಲ್ಲಿಯ ಫೋಟೋಗಳು ಆದವು ವೈರಲ್!

ನೇಹಾ ಕಕ್ಕರ್ ಅವರು ತಮ್ಮ ಮೂರು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಇವುಗಳಲ್ಲಿ ನೇಹಾ ಅವರು ಬಾತ್ರೂಮಿನಲ್ಲಿ ಕುಳಿತಿರುವುದು ಕಂಡುಬರುತ್ತದೆ. ಒಂದರಲ್ಲಿ ಬಾತ್ ಟಬ್ಬಿನ ಅಂಚಿಗೆ ಕುಳಿತು ಸ್ಮೈಲ್ ನೀಡಿದ್ದಾರೆ. ಈ ಸಮಯದಲ್ಲಿ ಅವರು ಬಿಳಿ ಬಣ್ಣದ ಬಾತ್ ರೋಬ್ ಧರಿಸಿದ್ದಾರೆ. ಈ ಫೋಟೋದಲ್ಲಿ ನೇಹಾ ಅವರು ತುಂಬಾ ಕ್ಯೂಟ್ ಆಗಿ ಕಾಣುತ್ತಿದ್ದಾರೆ. ಅವರ ಇದೇ ಫೋಟೋಗಳು ಮೀಡಿಯಾದಲ್ಲಿ ವೈರಲ್ ಆಗಿದೆ.

ಮುಂಜ ಮುಂಜಾನೆ ಶೇರ್ ಮಾಡಿದರು ಫೋಟೋಗಳನ್ನು…

ಈ ಫೋಟೋಗಳನ್ನು ಶೇರ್ ಮಾಡುವಾಗ ನೇಹಾ ಕಕ್ಕರ್ ಅವರು ಈ ರೀತಿ ಕ್ಯಾಪ್ಷನ್ ನಲ್ಲಿ ಹೇಳಿದ್ದಾರೆ, ‘ಗುಡ್ ಮಾರ್ನಿಂಗ್ ನಾನು ಸ್ನಾನ ಮಾಡಿದೆ, ದಿನದ ಪ್ರಾರಂಭ ಧನಾತ್ಮಕ ಚಹಾದಿಂದ ಪ್ರಾರಂಭಿಸಿ’. ಅವರ ಈ ಫೋಟೋವನ್ನು ನೋಡಿ ಪತಿ ರೋಹನ್ ಪ್ರೀತ್ ಸಿಂಗ್ ಸ್ವಂತಕ್ಕೆ ಕಂಟ್ರೋಲ್ ಮಾಡಲು ಸಾಧ್ಯವಾಗಿಲ್ಲ. ಅವರ ಈ ಫೋಟೋ ಇನ್ಸ್ಟಾಗ್ರಾಮ್ ನಲ್ಲಿ ನೋಡುತ್ತಲೇ, ‘ಆಹಾಹಾ ವಾವ್ ಹಾಯ್ ನೀವು ಎಷ್ಟೊಂದು ಸುಂದರವಾಗಿದ್ದೀರಿ’!!! ಎಂದು ಕಾಮೆಂಟ್ ಮಾಡಿದ್ದಾರೆ.

ಅಭಿಮಾನಿಗಳಿಗಂತೂ ಸಖತ್ ಇಷ್ಟವಾಗಿದೆ ಈ ಫೋಟೋ..

ಸಹೋದರ ಟೋನಿ ಕಕ್ಕರ್ ಅವರು ಸಹ ಸಹೋದರಿ ನೇಹಾ ಶೇರ್ ಮಾಡಿದ ಫೋಟೋ ನೋಡಿ ‘ಎಷ್ಟೊಂದು ಸುಂದರ’ ಎಂದು ವರ್ಣಿಸಿದ್ದಾರೆ. ನೇಹಾ ಅವರ ಅಭಿಮಾನಿಗಳಂತೂ ಅವರ ಈ ಫೋಟೋಗಳನ್ನು ನೋಡಿ ಒಂದೇ ಸವನೆ ಹೊಗಳುತ್ತಿದ್ದಾರೆ.

ಆದರೆ ಕೆಲವರಿಗೆ ನೇಹಾ ಅವರು ಶೇರ್ ಮಾಡಿದ ಈ ಫೋಟೋಗಳು ಅಷ್ಟೊಂದು ಇಷ್ಟವಾಗಿಲ್ಲ. ಆದರೆ ಫೋಟೋಗಳಿಗೆ ಮಾತ್ರ ಲೈಕ್ ಮತ್ತು ಕಾಮೆಂಟ್ಗಳು ಮಳೆಸುರಿದ ಹಾಗೆ ಸುರಿಯುತ್ತಿವೆ.