OMG! ಕೊರೊನದಿಂದ ಬಚಾವಾಗಲು ಕುತ್ತಿಗೆಗೆ ಹೆಬ್ಬಾವನ್ನು ಸುತ್ತಿಕೊಂಡು ತಿರುಗುತ್ತಿರುವ ಭೂಪ!
ಜಗತ್ತಿನ ಜೀವನಶೈಲಿಯನ್ನು ಬುಡಮೇಲು ಮಾಡಿದ ಈ ಕೊರೋನಾ ವೈರಸ್ ಜನರಿಗೆ ಇನ್ನು ಏನೇನು ಉಪದ್ವ್ಯಾಪಿ ಕೆಲಸವನ್ನು ಮಾಡಲಿಕ್ಕೆ ಹಚ್ಚುತ್ತದೆಯೋ ಗೊತ್ತಿಲ್ಲ.
ಕೋರೋನಾ ದಿಂದ ದೂರ ಉಳಿಯುವುದಕ್ಕಾಗಿ WHO ದಿಂದ ಹಿಡಿದು ನಮ್ಮ ಓಣಿಯ ಡಾಕ್ಟರ್ ವರೆಗೆ ಎಲ್ಲರೂ ಹೇಳುವ ಸಾವಿರಾರು ಉಪಾಯಗಳನ್ನು ಕೇಳಿ ಕೇಳಿ ಸಾಕಾಗಿ ಹೋಗಿದೆ. ಪ್ರತಿಯೊಬ್ಬ ವ್ಯಕ್ತಿ ಇದರಿಂದ ಉಳಿದುಕೊಳ್ಳಲು ತನಗೆ ತಿಳಿದಂತೆ ಉಪಾಯ ಯೋಜನೆಗಳನ್ನು ಮಾಡುತ್ತಲೇ ಬರುತ್ತಿದ್ದಾನೆ. ಆದರೂ ಸಹಿತ ಕೋರೋನಾ ತನ್ನ ಅಟ್ಟಹಾಸವನ್ನು ಮೆರೆಯುವುದು ಬಿಡುತ್ತಿಲ್ಲ.
ಸದ್ಯ ಇಂಗ್ಲೆಂಡ್ ಮ್ಯಾಂಚೆಸ್ಟರ್ ನಲ್ಲಿಯ 46 ವರ್ಷದ ಯುವಕನೊಬ್ಬ ತುಂಬಾ ಚರ್ಚೆಯಲ್ಲಿ ಇದ್ದಾನೆ. ಈತ ತನ್ನ ಕೊರಳ ಸುತ್ತ ದೊಡ್ಡದಾದ ಹೆಬ್ಬಾವನ್ನು ಸುತ್ತಿಕೊಂಡು ತಿರುಗಾಡುತ್ತಿದ್ದಾನೆ. ಈತ ಹೆಬ್ಬಾವನ್ನು ತನ್ನ ಫೇಸ್ ಮಾಸ್ಕ್ ರೀತಿಯಲ್ಲಿ ಉಪಯೋಗ ಮಾಡಿಕೊಳ್ಳುತ್ತಿದ್ದಾನೆ. ಹೀಗಾಗಿ ಈತನ ಫೋಟೋ ಜಗತ್ತಿನ ತುಂಬಾ ವೈರಲ್ ಆಗಿದೆ.
ಇಂಗ್ಲೆಂಡಿನ ಒಂದು ಪ್ರವಾಸಿ ಬಸ್ಸಿನಲ್ಲಿ ವ್ಯಕ್ತಿಯೊಬ್ಬ ಹೆಬ್ಬಾವನ್ನು ಕೊರಳಲ್ಲಿ ಧರಿಸಿ ಬಸ್ ಹತ್ತಿದ್ದಾನೆ. ಈ ಬಸ್ಸು ಸೆಲ್ ಫೋರ್ಡ್ ನಿಂದ ಸ್ವಿಂಟನ್ ಗೆ ಹೋಗುತ್ತಿತ್ತು. ಡಿ ಇಂಡಿಪೆಂಡೆಂಟ್ ನೀಡಿದ ವರದಿಯ ಪ್ರಕಾರ, ಬಸ್ಸಿನಲ್ಲಿದ್ದ ಇನ್ನಿತರ ಪ್ರವಾಸಿಗರು ಈತನನ್ನು ನೋಡಿ ಬೆಚ್ಚಿಬಿದ್ದಿದ್ದಾರೆ. ಈ ಬಗ್ಗೆ ಒಬ್ಬಳು ಮಹಿಳೆ ಹೇಳುತ್ತಾಳೆ ಮೊದಲು ಮಾಸ್ಕ್ ಇರಬಹುದೇನೋ ಅಂತ ಎನ್ನಿಸಿತ್ತು, ಗಮನಹರಿಸಿ ನೋಡಿದಾಗ ನಿಜವಾಗಿಯೂ ನಾನು ಬೆಚ್ಚಿಬಿದ್ದೆ. ಆದರೆ ಪ್ರವಾಸದ ಮಧ್ಯದಲ್ಲಿ ಹೆಬ್ಬಾವಿನಿಂದ ಯಾರಿಗೂ ತೊಂದರೆ ಮಾತ್ರ ಆಗಿಲ್ಲ.
ಈ ಕೊರೊನಾದಿಂದ ಬಚಾವಾಗುವ ಸಲುವಾಗಿ ಹಾವಿನ ಮಾಸ್ಕ್ ಧರಿಸುವುದರಿಂದ ಲಾಭವಾಗುತ್ತದೆ ಎಂದು ಯಾವುದೇ ಅಧ್ಯಯನದಲ್ಲಿ ತಿಳಿದುಬಂದಿಲ್ಲ. ಅಥವಾ ಹಾವನ್ನು ಕೊರಳಿಗೆ ಸುತ್ತಿಕೊಳ್ಳುವುದರಿಂದ ಕೊರೊನಾದಿಂದ ಮುಕ್ತಿ ಸಿಗುವುದು ಸಹಿತ ಸುಳ್ಳು, ಎಂದು ಗ್ಲಿಸೇಷ್ಟರ್ ಶೈರ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ಹೇಳಿದ್ದಾರೆ.
ಬ್ರಿಟನ್ ಸರ್ಕಾರದ ಗಾಯಿಡ್ ಲೈನ್ಸ್ ಪ್ರಕಾರ, ನಾಗರಿಕರು ಸ್ವತಃ ತಯಾರಿಸಿದ ಮಾಸ್ಕ್ ಗಳನ್ನು ಧರಿಸಿ ಕೊಳ್ಳಬಹುದು ಎಂದು ಸೂಚಿಸಿದೆ. ಇದರ ಅರ್ಥ ಹೆಬ್ಬಾವನ್ನು ಮಾಸ್ಕ ರೀತಿಯಲ್ಲಿ ಉಪಯೋಗಿಸುವುದು ಯಾಕೋ ತುಂಬಾ ಅತಿಯಾಯಿತು ಎಂದು ಮ್ಯಾಂಚೆಸ್ಟರ್ ಪಟ್ಟಣದ ಸಾರಿಗೆ ಇಲಾಖೆ ವಕ್ತಾರರು ಹೇಳಿದ್ದಾರೆ.