OMG! ಭಾರಿ ಗಾತ್ರದ ಮೊಸಳೆಗೆ ನುಂಗಲು ಯತ್ನಿಸುತ್ತಿರುವ ಎನಾಕೊಂಡ! ಎರಡನ್ನು ಹಗ್ಗದ ಮುಖಾಂತರ ಬೇರ್ಪಡಿಸಿದ ಜನರು!

ಸೋಶಿಯಲ್ ಮೀಡಿಯಾದಲ್ಲೊಂದು
ವೀಡಿಯೊ ವೈರಲ್ ಆಗುತ್ತಿದ್ದು, ವೀಡಿಯೋ ನೋಡಿದವರ ನಂತರ ಅದನ್ನು ಇತರರ ಜೊತೆ ಹಾಗೂ ಸೋಶಿಯಲ್ ಮೀಡಿಯಾದ ತಮ್ಮ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹಾಗಾದರೆ ಈ ವೀಡಿಯೋದಲ್ಲಿ ವೈರಲ್ ಆಗುವಂತಹ ವಿಷಯ ಏನಿದೆ ಎನ್ನುವುದಾದರೆ, ಇದರಲ್ಲಿ ಹಾವಿನ ಜಾತಿಗಳಲ್ಲಿ ಬೃಹತ್ ಆಕಾರದ, ನೋಡಿದರೆ ಮೈಯಲ್ಲೊಂದು ಕಂಪನ ಹುಟ್ಟಿಸುವ ಹಾವು ಅನಕೊಂಡ. ಈ ಹಾವಿನ ಬಗ್ಗೆ ಹಾಲಿವುಡ್ ನಲ್ಲಿ ಸಿನಿಮಾಗಳು ಕೂಡಾ ಬಂದಿವೆ, ಸೂಪರ್ ಹಿಟ್ ಕೂಡಾ ಆಗಿವೆ. ಇಂತಹ ಹಾವೊಂದರ ವೀಡಿಯೋವೇ ಈಗಲೇ ವೈರಲ್ ಆಗುತ್ತಿರುವುದು.

ಈ ವಿಡಿಯೋದಲ್ಲಿ ಅನಕೊಂಡ ಹಾವು ಜೀವಂತ ಮೊಸಳೆಯನ್ನು ನುಂಗಿ ಹಾಕುವ ಪ್ರಯತ್ನವನ್ನು ಮಾಡಿದೆ. ಮೊಸಳೆ ಎಂದರೂ ಕೂಡಾ ಭಯಪಡುವವರು ಅನೇಕರು. ಅಂತಹುದರಲ್ಲಿ ಮೊಸಳೆ ಮತ್ತು ಅನಕೊಂಡ ಎರಡೂ ಕೂಡಾ ಒಂದೇ ಕಡೆ ಕಂಡಿರುವುದು ನಿಜಕ್ಕೂ ಭಯಾನಕ ಎನಿಸಿದೆ. ಈಗಾಗಲೇ ಅನೇಕ ಜನರು ಈ ವೀಡಿಯೊವನ್ನು ನೋಡಿದರೆ, ಇನ್ನೂ ಅನೇಕರು ಈ ವೀಡಿಯೋವನ್ನು ನೋಡಲು ಹೆದರಿದ್ದಾರೆ. ಕಾರಣ ಭೀಕರವಾದ ಹಾವು ಭಯಾನಕ ಎನಿಸುವ ಮೊಸಳೆ ಯನ್ನು ನುಂಗುತ್ತಿರುವ ದೃಶ್ಯ ಭೀಭತ್ಸ ಎನ್ನುವ ಹಾಗೆ ಕಾಣುತ್ತಿದೆ.

ವಿಡಿಯೋ ನೋಡಿ.

ಇಂತಹುದೊಂದು ಅಸಾಧಾರಣವಾದ ಘಟನೆ ನಡೆದಿರುವುದು ಬ್ರೆಜಿಲ್‌ನ ಪಾಂಟ್ ನೆಗ್ರಾ ಪ್ರದೇಶದಲ್ಲಿ ಎಂದು ಹೇಳಲಾಗುತ್ತಿದೆ. ಈ 23 ಸೆಕೆಂಡುಗಳ ಕ್ಲಿಪ್‌ನಲ್ಲಿ, ಅನಕೊಂಡ ಮೊಸಳೆಗೆ ತಾನು ಬಿಗಿಯಾಗಿ ಸುತ್ತಿಕೊಂಡಿದೆ, ಮೊಸಳೆಗೆ ತಪ್ಪಿಸಿಕೊಳ್ಳುವ ಯಾವುದೇ ಅವಕಾಶವನ್ನು ನೀಡದೆ ಅದನ್ನು ಹಿಡಿದಿದೆ. ಹಾವು ತನ್ನ ಬಲವನ್ನೆಲ್ಲಾ ಉಪಯೋಗಿಸಿ, ಮೊಸಳೆಯನ್ನು ನುಂಗುತ್ತಿರುವ ಈ ವೀಡಿಯೋ ಇದುವರೆಗೆ 15,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಆದರೆ ಈ ಭೀಕರವನ್ನು ನೋಡಿದ ಸ್ಥಳೀಯ ಜನರು ಬಹಳ ಶ್ರಮಪಟ್ಟು ಹಾವನ್ನು ಮತ್ತು ಮೊಸಳೆಯನ್ನು ಬೇರ್ಪಡಿಸಿದ್ದಾರೆ.

ಎರಡಕ್ಕೂ ಹಗ್ಗವನ್ನು ಬಿಗಿದ ಜನರು ಕಠಿಣವಾದ ಕಾರ್ಯವನ್ನು ಮಾಡಿದ್ದು ನಿಜಕ್ಕೂ ಅದ್ಭುತ ಎನಿಸಿದೆ. ಜನರು ಈ ಮೂಲಕ ಪ್ರಾಣಾಪಾಯದಲ್ಲಿ ಸಿಲುಕಿದ್ದ ಮೊಸಳೆಯನ್ನು ಕಾಪಾಡಿದರೆ, ಹಾವಿನ ಆಹಾರವನ್ನು ಕಸಿದುಕೊಂಡಿದ್ದಾರೆ. ಪ್ರತ್ಯಕ್ಷ ದರ್ಶಿಗಳ ಪ್ರಕಾರ
ಅನಕೊಂಡ ಸುಮಾರು 6 ಅಡಿ ಉದ್ದವಿತ್ತು ಎನ್ನಲಾಗಿದೆ. ಜನರು ಆ ಹಾವಿನೊಂದಿಗೆ ಫೋಟೋಗಳನ್ನು ಕೂಡಾ ತೆಗೆದುಕೊಂಡಿದ್ದಾರೆ. ಆದರೆ ಜನರ ಕಾರಣಕ್ಕೆ ಹಾವು ಕಾಡಿಗೆ ಮರಳಬೇಕಾಯಿತು. ವೀಡಿಯೋ ನೋಡಿದ ಜನರು ಕೂಡಾ ಅಯ್ಯೋ ಪಾಪ ಹಾವಿನ ಆಹಾರವನ್ನು ಈ ಜನರು ಕಸಿದುಕೊಂಡಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.