OMG! ವಿಮಾನದ ಮೇಲೆ ಅಪ್ಪಳಿಸಿತು ಸಿಡಿಲು! ಮೈ ಜುಂ ಎನ್ನಿಸುವ ವಿಡಿಯೋ ವೈರಲ್!

ಲಂಡನ್, 10 ಜೂನ್: ಆಕಾಶದಲ್ಲಿ ಮಿಂಚು, ಗರ್ಜನೆ ಮತ್ತು ಸಿಡಿಲಿನ ಅಬ್ಬರ ಬರೀ ನೋಡಿದರೇನೇ ಮೈ ಜುಂ ಎಂದು ನಡುಗುವದು. ಅದೇ ಆಕಾಶದಲ್ಲಿ ವಿಮಾನ ಹಾರಾಡುತ್ತಿರುವಾಗ ವಿಮಾನದ ಮೇಲೆಯೇ ಸಿಡಿಲು ಅಪ್ಪಳಿಸಿದ ವೀಡಿಯೋ ಒಂದು ವೈರಲ್ ಆಗಿದೆ. ಬರೀ ಈ ವಿಚಾರ ಕೇಳಿದರೇನೇ ಹೇಗಾಗಬೇಡ? ಇಂಥದ್ದೇ ಒಂದು ದೃಶ್ಯ ಲಂಡನ್ ನಲ್ಲಿ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ.

ಡೇಲಿ ಮೇಲ್ ನೀಡಿದ ವೃತ್ತದ ಪ್ರಕಾರ ವಿಮಾನವು ಹಿತ್ರೋ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ಸಂದರ್ಭದಲ್ಲಿತ್ತು. ಸರಿಯಾಗಿ ಅದೇ ಸಮಯಕ್ಕೆ ವಿಮಾನದ ಮೇಲೆ ಸಿಡಿಲು ಅಪ್ಪಳಿಸಿತು. ಈ ಅದ್ಭುತ ದೃಶ್ಯವು ಕ್ಯಾಮೆರಾದಲ್ಲಿ ಸೆರೆಯಾಗಿದೆ ನಂತರ ಈ ವೀಡಿಯೋ ವೈರಲ್ ಆಗಿದೆ. ಈ ವೀಡಿಯೋವನ್ನು ನೀವು ಸರಿಯಾಗಿ ನೋಡಲಾಗಿ ಗೊತ್ತಾಗುವದು. ಸಿಡಿಲು ವಿಮಾನಕ್ಕೆ ಮೂರು ದಿಕ್ಕುಗಳಿಂದ ಅಟ್ಯಾಕ್ ಮಾಡಿತ್ತು.

ಈ ದೃಶ್ಯವನ್ನು ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿದ ವ್ಯಕ್ತಿ ಹೇಳುತ್ತಾನೆ. “ಈ ದೃಶ್ಯವನ್ನು ಸೆರೆ ಹಿಡಿದಿದ್ದೇನೆ ಎಂಬುದು ನನಗೂ ಗೊತ್ತಿರಲಿಲ್ಲ. ನಾನು ನನ್ನ ಕ್ಯಾಮೆರಾ ತೆಗೆದು ವೀಡಿಯೊ ಕ್ಲಿಕ್ ಮಾಡಿ ನೋಡಿದೆ. ಆ ದೃಶ್ಯವನ್ನು ನೋಡಿ ನಾನು ಅಕ್ಷರಶಃ ನಿಬ್ಬೆರಗಾಗಿಬಿಟ್ಟೆ. ಏಕೆಂದರೆ ಆ ದೃಶ್ಯದಲ್ಲಿ ಸಿಡಿಲು ನೇರ ವಿಮಾನಕ್ಕೆ ಅಪ್ಪಳಿಸಿತ್ತು. ಅದು ಎಷ್ಟೊಂದು ದೊಡ್ಡದಿತ್ತೆಂದರೆ ಬಹುಶಃ ಆ ಸಿಡಿಲು ಭೂಮಿಯ ಮೇಲೂ ಅಪ್ಪಳಿಸಿರಬಹುದು. ವಿಮಾನದಲ್ಲಿಯ ಯಾರಿಗೂ ಏನೂ ಆಗಿರಲಿಕ್ಕಿಲ್ಲ ಎಂದು ಆಶಿಸುವೆ”.

ವಿಮಾನದ ಮೇಲೆ ಸಿಡಿಲು ಅಪ್ಪಳಿಸಿದ ನಂತರ ಏನಾಗುವದು?

ಪ್ರಸ್ತುತ ವಿಮಾನಕ್ಕೆ ಯಾವುದೇ ಹಾನಿಯಾಗಿಲ್ಲ. ಕಾರಣ ತಜ್ಞರು ನೀಡಿದ ಮಾಹಿತಿಯ ಪ್ರಕಾರ, ಯಾತ್ರಿ ವಿಮಾನಗಳನ್ನು ಸಿಡಿಲಿನಿಂದ ರಕ್ಷಿಸುವ ಸಲುವಾಗಿ ಒಂದು ಕವಚ (ಕವರ್) ವಿರುತ್ತದೆ. ಆದ್ದರಿಂದ ವಿಮಾನದ ಮೇಲೆ ಸಿಡಿಲು ಅಪ್ಪಳಿಸಿದರೂ ವಿಮಾನದ ಒಳಗಡೆ ಯಾವ ಹಾನಿಯು ಉಂಟಾಗುವದಿಲ್ಲ. ವಿಮಾನದಲ್ಲಿಯ ಪ್ರವಾಸಿಗರಿಗೆ ಅದರ ಬೆಳಕು ಕಾಣುತ್ತದೆ, ಅದರ ಹೊರತಾಗಿ ಯಾವ ಪರಿಣಾಮವೂ ಆದಂತೆ ಅನುಭವವಾಗುವದಿಲ್ಲ.