“ಜಿಂದಗಿ ಏಕ್ ಸಫರ್ ಹೈ ಸುಹಾನಾ, ಯಂಹಾ ಕಲ್ ಕ್ಯಾ ಹೋ ಕಿಸ್ ನೆ ಜಾನಾ” ಇದು ಹಳೆಯ ಹಿಂದಿ ಚಲನಚಿತ್ರದ ಪ್ರಸಿದ್ದ ಹಾಡು. ಸಾಕಷ್ಟು ಜನಪ್ರಿಯತೆ ಗಳಿಸಿದ ಈ ಹಾಡಿನ ಅರ್ಥ ಕೂಡ ಅಷ್ಟೇ ಸೊಗಸಾಗಿದೆ. ಇದನ್ನೇ ನಮಗೆ ಅರ್ಥವಾಗುವ ಕನ್ನಡದಲ್ಲಿ ಹಳಬೇಕೆಂದರೆ, ಜೀವನವೆಂಬುದು ನೀರ ಮೇಲಿನ ಗುಳ್ಳಿ ಇದ್ದ ಹಾಗೆ, ಯಾವಾಗ ಟಪಕ್ ಅಂತ ಒಡೆಯುತ್ತೊ ಗೊತ್ತಿಲ್ಲ, ಇದ್ದಷ್ಟು ದಿನ ಹಾಯಾಗಿರೋಣ ಎಂಬುದು ಈ ಹಾಡಿನ ಸಾರಾಂಶ.
ಇಲ್ಲಿ ಹಾಕಿರುವ ವಿಡಿಯೊದಲ್ಲಿ ಇರುವವರು ಕೂಡ ತಮ್ಮ ಜೀವನ ನೀರ ಮೇಲಿನ ಗುಳ್ಳೆಯ ಇದ್ದ ಹಾಗೆ ಎಂದುಕೊಂಡು ದೃತಿಗೆಡದೆ ಸಾಧ್ಯವಾದಷ್ಟು ಹಾಯಾಗಿರೋಕೆ ಪ್ರಯತ್ನಿಸಿದ್ದಾರೆ. ವಿಲ್ ಪವರ್ ಗಟ್ಟಿಯಾಗಿದ್ದರೆ ಅದೆಂಥ ಮಾರಕ ಕಾಯಿಲೆಯನ್ನಾದರೂ ದೂರ ಇರಿಸಬಹುದು. ಅದಕ್ಕೆಂದೇ ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ ಪ್ರಯತ್ನ ಅಲ್ಲಿನ ವೈದ್ಯರದು.
ಮೊದಲೇ ನ್ಯೂಸ್ ಚಾನೆಲ್ ಗಳು ಭಯಬೀಳಿಸಿರುತ್ತವೆ, ಇನ್ನು ಪಾಸಿಟಿವ್ ಆಗಿ ಒಳಬಂದ ಮೇಲೆ ಇಲ್ಲಿನ ವಾತಾವರಣ ಕಂಡು ರೋಗಿಗಳು ಮತ್ತಷ್ಟು ಹೆದರಿಕೊಳ್ಳಬಾರದು ಎಂಬ ಸದುದ್ದೇಶದಿಂದ ಆಸ್ಪತ್ರೆಯ ಎಲ್ಲ ಸ್ಟಾಫ್ ಇಲ್ಲಿ ಈ ಹಾಡು ನೃತ್ಯ ಆಯೋಜಿಸಿದ್ದರು. ಸ್ವಲ್ಪ ಕೊರೋನ ಲಕ್ಷಣ ಇರುವವರು, ಆಕ್ಸಿಜನ್ ಮೇಲೆ ಇದ್ದವರು, ಮುದುಕರು, ಮಹಿಳೆಯರು ಹೀಗೆ ಎಲ್ಲರನ್ನೂ ತಮ್ಮ ಜೊತೆ ನರ್ತಿಸಿ ನಲಿಯುವಂತೆ ಮಾಡಿದ ಅವರ ಪ್ರಯತ್ನ ನಿಜಕ್ಕೂ ಪ್ರಶಂಸಿನೀಯ.
ಹಾಡಿನುದ್ದಕ್ಕೂ ಎಲ್ಲರೋಗಿಗಳು, ಡಾಕ್ಟರ್ ಗಳು, ನರ್ಸ್ ಗಳು, ಎಲ್ಲ ಸ್ಟಾಫ್ ಗಳು ಎಷ್ಟು ಚೆನ್ನಾಗಿ ಇನ್ವಾಲ್ವ್ ಆಗಿ ಡ್ಯಾನ್ಸ್ ಮಾಡಿದ್ದಾರೆ ನೋಡಿ. ಗುಜರಾತಿನ ಪಾರುಲ್ ಸೇವಾಶ್ರಮ ಆಸ್ಪತ್ರೆಯಲ್ಲಿನ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೆಸ್ಬುಕ್ -ಟ್ವೀಟರ್ ಸೇರಿದಂತೆ ಎಲ್ಲ ಕಡೆ ಇದರದೇ ಹವಾ.
ಇದರಿಂದ ರೋಗಿಗಳಿಗೆ ಮನರಂಜನೆ ಸಿಗುವುದರ ಜೊತೆಗೆ ಅವರಲ್ಲಿ ಅಂತಃಶಕ್ತಿ ಅಧಿಕವಾಗುತ್ತದೆ. ಚಿಂತೆ ಕಡಿಮೆಯಾಗುತ್ತದೆ, ಖಿನ್ನತೆ ದೂರವಾಗುತ್ತದೆ, ಇನ್ನು ನಾಕು ಹುಷಾರಾಗುವವರು ಮೂರೇ ದಿನಕ್ಕೆ ಆರಾಮಾಗುತ್ತಾರೆ. ಇದನ್ನೆಲ್ಲ ಮನಗಂಡೇ ಆಸ್ಪತ್ರೆ ಆಡಳಿತ ಮಂಡಳಿ ಈ ನೃತ್ಯ ಆಯೋಜಿಸಿದ್ದು. ವಿಡಿಯೊ ನೋಡಿ, ಖಂಡಿತ ನಿಮಗೆ ಖುಷಿಯಾಗುವುದು.
-Team Infotrend
