OMG! ವ್ಯಕ್ತಿಯೊಂದಿಗೆ ಮಲಗಿವೆ 3 ಚಿರತೆಗಳು! ವಿಡಿಯೋ ವೈರಲ್!
ಚಿರತೆಗಳು ಒಬ್ಬ ವ್ಯಕ್ತಿಯೊಂದಿಗೆ ಮಲಗಿಕೊಳ್ಳುತ್ತವೆ, ಇದು ಹೇಗೆ ಸಾಧ್ಯ?
ಚಿರತೆ ಎಂದರೆ ಪ್ರತಿಯೊಬ್ಬರ ಮನದಲ್ಲಿ ಭ’ಯಭೀತವಾದ ಚಿತ್ರ ನಿರ್ಮಾಣವಾಗುವದು ಸಹಜವಾದ ಸಂಗತಿಯಾಗಿದೆ. ಇಂತಹುದರಲ್ಲಿ ಅವುಗಳೊಂದಿಗೆ ಮಲಗುವದು ಇನ್ನಷ್ಟು ಕಷ್ಟಕರ ಹಾಗೂ ಅತ್ಯಂತ ಗಂ’ಭೀರ ಸಂಗತಿಯಾಗಿದೆ. ಬಿಗ್ ಕ್ಯಾಟ್ಸ್ ಗಳು ತುಂಬಾ ಚುರುಕು ಬುದ್ದಿ ಹಾಗೂ ನಾಚಿಕೆ ಹೊಂದುವಂತಹ ಪ್ರಾಣಿಗಳಾಗಿರುತ್ತವೆ. ಆದರೆ ಅದು ನಮಗೆ ಕಾಣುವದಿಲ್ಲ. ಚಿರತೆಗಳು ನೈಸರ್ಗಿಕವಾಗಿ ನಾಚಿಕೆ ಪಡುವಂತಹ ಪ್ರಾಣಿಯಾಗಿವೆ. ಚಿರತೆಯ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ವಿಡಿಯೋ ತುಂಬಾ ವೈರಲ್ ಆಗುತ್ತಿದೆ. ಇದರಲ್ಲಿ ಚಿರತೆಗಳು ಒಬ್ಬ ವ್ಯಕ್ತಿಯೊಂದಿಗೆ ಮನುಷ್ಯರಂತೆ ಮಲಗಿಕೊಳ್ಳುತ್ತಿವೆ. ಅಷ್ಟೇ ಅಲ್ಲ ಅವು ಅವನ ಹಾಸಿಗೆಯ ಮೇಲೆ ಬಂದು ಮಲಗಿಕೊಳ್ಳುತ್ತವೆ. ಅದು ಹೇಗೆ ಸಾಧ್ಯ ಅಂತ ನಿಮ್ಮ ಮನದಲ್ಲಿ ಪ್ರಶ್ನೆ ಉದ್ಭವವಾಗಿರಬಹುದು. ಅದಕ್ಕೆ ಉತ್ತರವೇ ಈ ವಿಡಿಯೋ.
ಐಎಫ್ಎಸ್ ಅಧಿಕಾರಿ ಈ ವಿಷಯದ ವಿಡಿಯೋ ಒಂದನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಐಎಸ್ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಈ ವಿಡಿಯೋ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಅವರು ಬರೆದದ್ದು ಏನೆಂದರೆ, ‘ಚಿರತೆಗಳು ಯಾವುದಕ್ಕೆ ಹೆಚ್ಚು ಆದ್ಯತೆ ನೀಡುತ್ತವೇ’? ಅವುಗಳಿಗೆ ಗಟ್ಟಿಯಾದ ಕಾಂಕ್ರೀಟ್ ಮತ್ತು ಬೆಚ್ಚಗಿನ ಬಟ್ಟೆಗಳು, ಎಲ್ಲವೂ ತುಂಬಾ ಮುದ್ದಾಗಿ ಕಾಣುತ್ತವೆ. ಸುದ್ದಿ ಬರೆಯುವ ಹೊತ್ತಿಗೆ, ಈ ವೀಡಿಯೊ ಸುಮಾರು 89 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿತ್ತು.

ಈ ವಿಡಿಯೋದಲ್ಲಿದ್ದದ್ದಾದರೂ ಏನು?
ಒಬ್ಬ ವ್ಯಕ್ತಿಯು ನಿದ್ರಿಸುತ್ತಿರುವುದನ್ನು ಈ ವೀಡಿಯೊದಲ್ಲಿ ನೀವು ನೋಡಬಹುದು. ಅವನು ಇದ್ದಕ್ಕಿದ್ದಂತೆ ಎಚ್ಚರಗೊಳ್ಳುತ್ತಾನೆ. ಚಿರತೆ ಸಹ ಎದ್ದು ಅವನ ಬಳಿಗೆ ಬಂದು ಕುಳಿತುಕೊಳ್ಳುತ್ತದೆ. ಅವನು ಚಿರತೆಯನ್ನು ತಬ್ಬಿಕೊಳ್ಳುತ್ತಾನೆ, ತಬ್ಬಿಕೊಂಡ ನಂತರ ಚಿರತೆ ಅವನ ಬದಿಯಲ್ಲಿ ಮಲಗಿಕೊಳ್ಳುವದು. ಆಮೇಲೆ ಸ್ವಲ್ಪ ಸಮಯದ ನಂತರ ಎರಡನೆಯ ಚಿರತೆಯು ಸಹ ಅದೇ ರೀತಿ ಮಾಡುತ್ತದೆ. ನಂತರ ಮೂರನೆಯ ಚಿರತೆ ಸಹ ಹಾಗೆ ಮಾಡಿ ಮೂರು ಚಿರತೆಗಳು ನೆಲದ ಮೇಲಿಂದ ಎದ್ದು ಅವನ ಪಕ್ಕದ ಗಾದಿಯಲ್ಲಿ ಮಲಗಿಕೊಳ್ಳುತ್ತವೆ.
So what does a #cheetah prefers. Hard concrete or warm cloth. This one from an enclosure. All looks loveable though. VC Dolph C Volker. pic.twitter.com/UNzyiAulX2
— Parveen Kaswan, IFS (@ParveenKaswan) June 10, 2020
ಒಂದು ಎಕ್ಸಪೇರಿಮೆಂಟ್ ನಿಂದ ತಿಳಿದದ್ದೇನೆಂದರೆ,
ಈ ಟ್ವೀಟ್ ಪ್ರಕಾರ , ಈ ಒಂದು ವಿಡಿಯೋ 2008 ವರ್ಷದಲ್ಲಿ ನಡೆದ ‘The Cheetah Experience’ ದ ವಿಡಿಯೋ ಆಗಿದೆ. ಇದನ್ನು ದಕ್ಷಿಣ ಆಫ್ರಿಕಾದಲ್ಲಿ ಶೂಟ್ ಮಾಡಲಾಗಿತ್ತು. ಇದರಲ್ಲಿರುವ ವ್ಯಕ್ತಿಯ ಹೆಸರು Dolph Volker ಇದೆ, ಅವರು ಅಮೇರಿಕಾ ಮೂಲದವರಾಗಿದ್ದಾರೆ. ಅವರು ಕಾಡು ಪ್ರಾಣಿಗಳ ಕುರಿತು ತುಂಬಾ ಸಂಶೋಧನೆ ಮಾಡಿದ್ದಾರೆ.
ಹಾಗಿದ್ರೆ ಈ ವಿಡಿಯೋ ನಿಮಗೆ ಹೇಗೆ ಅನಿಸಿತು? ಕಾಮೆಂಟ್ ಮಾಡಿ.