OMG! 2500 ರೂ. ಕೊಟ್ಟು ಖರೀದಿಸಿದ ಒಂದು ಬಟ್ಟಲು ದೊಡ್ಡ ಖಜಾನೆಯ ಬಾಗಿಲಾಗಲಿದೆ ಎಂದು ಯಾರೂ ಊಹಿಸಿರಲಿಲ್ಲ!
ದೇವರು ಅದೃಷ್ಟ ಅಥವಾ ಸಂಪತ್ತನ್ನು ಕೊಡುವುದು ನಿಧಾನವಾಗಬಹುದು ಆದರೆ ಕೊಟ್ಟರೆ ಮಾತ್ರ ಊಹೆಗೂ ನಿಲುಕದಷ್ಟೂ ನೀಡುವನು ಎನ್ನುವ ಮಾತೊಂದು ಪ್ರಚಲಿತದಲ್ಲಿತ್ತು. ಇಂತಹುದೇ ಒಂದು ವಿಸ್ಮಯವು ಅಮೆರಿಕಾದ ಕನೆಕ್ಟಿಕಟ್ ನಗರದಲ್ಲಿ ನಡೆದಿದೆ. ಇಲ್ಲಿನ ಒಬ್ಬ ವ್ಯಕ್ತಿಯು ದಾರಿಯಲ್ಲಿ ಹೋಗುವಾಗ ಅಲ್ಲಿ ಒಂದು ಸೆರಾಮಿಕ್ ಬೌಲ್ ಅನ್ನು ಖರೀದಿ ಮಾಡಿದ್ದಾನೆ. ಈತ ಈ ಸೆರಾಮಿಕ್ ಬೌಲ್ ಅನ್ನು $ 35 ಅಂದರೆ 2550 ರೂಪಾಯಿಗಳನ್ನು ನೀಡಿ ಖರೀದಿ ಮಾಡಿದ್ದನು. ಆದರೆ ಅದನ್ನು ಖರೀದಿ ಮಾಡಿದಾಗ ಅದು ತನ್ನ ಜೀವನದ ಒಂದು ಅತ್ಯಮೂಲ್ಯವಾದ ಸಂಪತ್ತಿನ ನಿಧಿಯಾಗುವುದು ಎಂದು ಆತ ಸ್ವಲ್ಪ ಕೂಡಾ ಊಹೆ ಮಾಡಿರಲಿಲ್ಲ. ಈ ಚೀನಿ ಕಲೆಯಿಂದ ನಿರ್ಮಾಣವಾದ ಈ ಸೆರಾಮಿಕ್ ಬೌಲ್ ಸಾಮಾನ್ಯ ಬೌಲ್ ಆಗಿರದೆ ಅದೊಂದು ಚೀನಿ ಕಲಾಕೃತಿಯಾಗಿದೆಯೆಂದು ತಿಳಿದು ಬಂದಾಗ ಬಹುಶಃ ಅದನ್ನು ಆತ ಕೂಡಾ ನಿರೀಕ್ಷೆಯನ್ನೇ ಮಾಡಿರಲಿಲ್ಲ ಎನ್ನಬಹುದಾಗಿದೆ.
ಹಾಗೆ ಆತ 35 ಡಾಲರ್ ನೀಡಿ ಖರೀದಿ ಮಾಡಿದ ಆ ಬೌಲ್ ನ ನಿಜವಾದ ಮೊತ್ತ ಒಂದಲ್ಲಾ ಎರಡಲ್ಲಾ ಬರೋಬ್ಬರಿ ಮೂರು ಮಿಲಿಯನ್ ಡಾಲರ್ ಗಳಿಂದ ಐದು ಮಿಲಿಯನ್ ಡಾಲರ್ ಗಳ ಮೌಲ್ಯದ್ದು ಎಂದು ತಿಳಿದು ಬಂದಿದೆ. ಬಿಳಿಯ ಬಣ್ಣದ ಈ ಸೆರಾಮಿಕ್ ಬೌಲ್ ಮೇಲೆ ನೀಲಿ ಬಣ್ಣದ ಹೂವುಗಳಿಂದ ಅಲಂಕಾರ ಮಾಡಿದ್ದು, ಅದು ಮಾತ್ರವೇ ಅಲ್ಲದೇ ಇನ್ನೂ ಅನೇಕ ಅಂದವಾದ ವಿನ್ಯಾಸಗಳನ್ನು ಕೂಡಾ ಇದರ ಮೇಲೆ ಮಾಡಲಾಗಿದ್ದು, ಇದೊಂದು ಅದ್ಭುತ ಕಲಾಕೃತಿಯಾಗಿ ಮೂಡಿ ಬಂದಿದ್ದು, ನೋಡುಗನ ಚಿತ್ತವನ್ನು ಕೂಡಲೇ ತನ್ನ ಕಡೆಗೆ ಸೆಳೆಯುವಂತಹ ಆಕರ್ಷಣೆಯನ್ನು ಹೊಂದಿದೆ ಎಂದು ಹೇಳುವಷ್ಟರ ಮಟ್ಟಕ್ಕೆ ಅದ್ಭುತವಾಗಿದೆ.
ಈ ಅದ್ಭುತವಾದ ಕಲಾಕೃತಿಯನ್ನು ಈಗ ಹರಾಜು ಮಾಡುವ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ವರದಿಗಳ ಪ್ರಕಾರ ಪುರಾತನವಾದ ವಸ್ತುಗಳನ್ನು ಖರೀದಿ ಮಾಡಿ ಸಂಗ್ರಹಿಸುವ ಆಸಕ್ತಿಯನ್ನುಳ್ಳ ವ್ಯಕ್ತಿಯೊಬ್ಬರು ಕಳೆದ ವರ್ಷ ಇದನ್ನು ನ್ಯೂ ಹೆವನ್ ಪ್ರದೇಶದಲ್ಲಿ ಗಮನಿಸಿದಾಗ ಅವರಿಗೆ ಈ ಬಟ್ಟಲು ಬಹಳ ವಿಶೇಷವಾಗಿದೆ ಎನಿಸಿದೆ. ಮತ್ತೊಂದು ವಿಶೇಷ ಏನೆಂದರೆ ಅವರ ಅನಿಸಿಕೆ ನಿಜವೇ ಆಗಿತ್ತು ಅಲ್ಲದೇ ಇದೊಂದು ದು ರ್ಲಭ ವಿನ್ಯಾಸದ ಕಲಾಕೃತಿಯಾಗಿದ್ದು ಇದುವರೆಗೂ ಇಂತಹ ಕೇವಲ ಏಳು ಬೌಲ್ ಗಳನ್ನು ಮಾತ್ರವೇ ತಯಾರಿಸಲಾಗಿದೆ ಎನ್ನಲಾಗಿದ್ದು, ಆ ಏಳು ಬಟ್ಟಲುಗಳಲ್ಲಿ ಇದು ಕೂಡಾ ಒಂದಾಗಿದೆ.

ಈ ಅತ್ಯಮೂಲ್ಯವಾದ ಬಟ್ಟಲು 1400 ಇಸವಿಯಲ್ಲಿ ಸಿದ್ದಪಡಿಸಲಾಗಿದೆ ಎನ್ನಲಾಗಿದೆ. ಈ ಬಟ್ಟಲನ್ನು ಇದೇ ಮಾರ್ಚ್ 17 ರಂದು ಚೀನಿ ಕಲಾಕೃತಿಗಳ ಅಡಿಯಲ್ಲಿ ಹರಾಜನ್ನು ಮಾಡಲು ನಿರ್ಧರಿಸಲಾಗಿದೆ. ತಾನು ಈ ಬಟ್ಟಲನ್ನು 35 ಡಾಲರ್ ಗಳಿಗೆ ಖರೀದಿ ಮಾಡಿದ್ದ ವ್ಯಕ್ತಿಯು ಅನಂತರ ಅದರ ಮಾಹಿತಿಯನ್ನು Sotheby ಗೆ ಇ-ಮೇಲ್ ಮಾಡಿದರು. Sotheby ನ ಹರಾಜು ತಜ್ಞರು ಇಂತಹ ವಸ್ತುಗಳ ಹರಾಜಿನ ಕುರಿತಾಗ ಇ-ಮೇಲ್ ಗಳನ್ನು ಸ್ವೀಕರಿಸುತ್ತಾರೆ. ಈ ಬಾರಿ ಅವರು ಸ್ವೀಕರಿಸಿದ ಮೇಲ್ ಅವರಿಗೂ ಖುಷಿಯನ್ನು ನೀಡಿದೆ ಹಾಗೂ ಮೇಲ್ ಮಾಡಿದ ವ್ಯಕ್ತಿಗಂತೂ ಅದು ಡಬಲ್ ಖುಷಿಯನ್ನು ನೀಡಿದೆ.
Sotheby ಯ ಉಪಾಧ್ಯಕ್ಷರಾದ ಮೈಕ್ ಅಟೀರ್ ಅವರು ಮಾತನಾಡುತ್ತಾ ನಾವು ಆ ಬಟ್ಟಲನ್ನು ನೋಡಿದ ಕೂಡಲೇ ಅದೊಂದು ವಿಶೇಷವಾದ ಬಟ್ಟಲು ಎನ್ನುವುದು ಅರಿವಾಯಿತು. ಬಟ್ಟಲಿನ ಆಕಾರ, ಅದರ ಮೇಲೆ ಮಾಡಲಾದ ವಿನ್ಯಾಸ, ಅದರ ಮೇಲಿನ ನೀಲಿ ಬಣ್ಣ ಎಲ್ಲವನ್ನು ಗಮನಿಸಿದಾಗ ಅದು ಹದಿನೈದನೇ ಶತಮಾನದ ಚೀನಾದ ಮಣ್ಣಿನಿಂದ ಮಾಡಲಾಗಿದೆ ಎಂಬುದು ತಿಳಿಯಿತು. ನಂತರ ಅವರೇ ಸ್ವತಃ ಹೋಗಿ ಪರೀಕ್ಷೆ ಮಾಡಿದಾಗ ಅದು 1400 ನೇ ಇಸವಿಯದ್ದು ಎಂದು ಸ್ಪಷ್ಟವಾಯಿತು. ತಜ್ಞರು ಅದನ್ನು ಸ್ಪರ್ಶಿಸಿ ಹಾಗೂ ನೋಡಿಯೇ ಅದು ಚೀನಾದ ಮಿಂಗ್ ಕಾಲದ್ದು ಎಂಬುದನ್ನು ಅಂದಾಜಿಸಿದ್ದರು ಎನ್ನಲಾಗಿದೆ.