Articles

ಈ ಚಿತ್ರ ಜೂಮ್ ಮಾಡಿ ನೋಡಿದರೂ, ಇದರಲ್ಲಿಯ ಝೀಬ್ರಾಗಳನ್ನು ಕಂಡು ಹಿಡಿಯಲು ನೂರಕ್ಕೆ 99% ಜನರು ಫೇಲ್ ಆಗಿದ್ದಾರೆ. ನೀವು ಶೋಧಿಸಿ ಹೇಳಬಲ್ಲಿರಾ ಜೀಬ್ರಾ ಎಲ್ಲಿವೆ? ಅಂತ.

ಸೋಶಿಯಲ್ ಮೀಡಿಯಾದಲ್ಲಿ ದಿನನಿತ್ಯ ಅನೇಕ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗುತ್ತವೆ. ಈ ವೈರಲ್ ಆಗುವ ಫೋಟೋಗಳಲ್ಲಿ ಪಜಲ್ಸ್ ಫೋಟೋಗಳು ನೇಟಿಜನ್ಸ್ ಗಳ ಮನಸ್ಸನ್ನು ಗೆಲ್ಲುವುದರ ಜೊತೆಗೆ ತಲೆಯೂ ತಿನ್ನುತ್ತವೆ. ಇಂಥ ಫೋಟೋಗಳು ನೋಡಲು ತುಂಬಾ ಸಾಮಾನ್ಯವೆನಿಸಿದರೂ ಆ ಫೋಟೋಗಳಲ್ಲಿ ಏನಾದರೊಂದು ರಹಸ್ಯ ಅಡಗಿರುತ್ತದೆ. ಆ ರಹಸ್ಯವನ್ನು ಹುಡುಕುವುದು ಕೆಲವರಿಗೆ ತುಂಬಾ ಇಷ್ಟದ ಕೆಲಸ ಅಥವಾ ಆಟವಾಗಿರುತ್ತದೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಬೇರೆಯಾದ ಚಿತ್ರವೊಂದು ಓಡಾಡುತ್ತಿದೆ. ಆ ಚಿತ್ರದಲ್ಲಿ ಜೀಬ್ರಾ ಪ್ರಾಣಿಯು ಎಲ್ಲಿದೆಯೆಂದು ತೋರಿಸಿ ರಹಸ್ಯ ಬಯಲು ಮಾಡಬೇಕಾಗಿದೆ.

ನೀವು ನೋಡುತ್ತಿರುವ ಈ ಮೇಲಿನ ಫೋಟೋ ಮರಳುಗಾಡಿನಲ್ಲಿಯದಿದೆ. ಅಲ್ಲಿ ಜೀಬ್ರಾ ಪ್ರಾಣಿಗಳು ನಡೆದುಕೊಂದು ಹೋಗುತ್ತಿವೆ. ಕಂಡುಬರುವ ಚಿತ್ರದಲ್ಲಿ ಜೀಬ್ರಾ ಪ್ರಾಣಿಗಳು ಕರೆಕ್ಟಾಗಿ ಎಲ್ಲಿವೆ ಎಂಬುದನ್ನು ನೇಟಿಜನ್ಸ್ ಗಳಿಗೆ ಹೇಳಬೇಕಾಗಿದೆ. ನೇಟಿಜನ್ಸ್ ಗಳು ಈ ಫೋಟೋದಲ್ಲಿಯ ಚಿತ್ರವನ್ನು ತಮ್ಮ ಮಿತ್ರರಿಗೆ ಒಬ್ಬರಿಂದೊಬ್ಬರಿಗೆ ಶೇರ್ ಮಾಡಿ ಜೀಬ್ರಾ ಪ್ರಾಣಿಯನ್ನು ಶೋಧಿಸಲು ಸಹ ಹೇಳುತ್ತಿದ್ದಾರೆ.

ಮಿತ್ರರೇ, ನೀವು ಶೋಧಿಸಿದಿರಾ ಈ ಚಿತ್ರದಲ್ಲಿಯ ಜೀಬ್ರಾಗಳನ್ನು?

ನೀವು ಒಂದು ವೇಳೆ ಜೀಬ್ರಾ ಪ್ರಾಣಿಗಳನ್ನು ಶೋಧಿಸುವಲ್ಲಿ ಯಶಸ್ಸು ಕಂಡಿದ್ದರೆ ನಿಮಗೆ ನಮ್ಮ ಕಡೆಯಿಂದ ತುಂಬು ಹೃದಯದ ಶುಭಾಶಯಗಳು. ಹಾಗೂ ನಿಮ್ಮ ಕಣ್ಣುಗಳ ದೃಷ್ಟಿ ತುಂಬಾನೇ ತೀಕ್ಷ್ಣವಾಗಿವೆ ಎಂದರ್ಥ. ಚಿತ್ರದಲ್ಲಿ ಅಡಗಿದ ಯಾವುದೇ ರೀತಿಯ ರಹಸ್ಯಗಳನ್ನು ಕಂಡುಹಿಡಿಯುವಲ್ಲಿ ಅಥವಾ ಶೋಧಿಸುವಲ್ಲಿ ನಿಮ್ಮ ಕಣ್ಣುಗಳು ತೀಕ್ಷ್ಣವಾದ ದೃಷ್ಟಿ ಹೊಂದಿವೆ ಎಂದು ತಿಳಿದು ಬರುತ್ತದೆ. ಏಕೆಂದರೆ ಈ ಫೋಟೋದಲ್ಲಿ ಗಂಟೆ ಗಂಟೆಗಳವರೆಗೆ ಬಿಟ್ಟ ಕಣ್ಣುಗಳಿಂದ ಶೋಧಿಸಿದರೂ ಜೀಬ್ರಾ ಪ್ರಾಣಿ ಮಾತ್ರ ಹೆಚ್ಚುವರಿ ಜನರಿಗೆ ಕಣ್ಣಿಗೆ ಕಾಣುತ್ತಿಲ್ಲ.

ಎಲ್ಲಿ ಕಾಣುತ್ತಿವೆ ಜೀಬ್ರಾ? ಚಿತ್ರದಲ್ಲಿ ಅಡಗಿರುವ ರಹಸ್ಯವೇನು?

ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿರುವ ಈ ಚಿತ್ರವು ಆಪ್ಟಿಕಲ್ ಇಲ್ಯುಜನ್ ಪ್ರಕಾರದ್ದಾಗಿದೆ. ಹೀಗಾಗಿ ಈ ಚಿತ್ರದಲ್ಲಿ ಅಡಗಿರುವ ಜೀಬ್ರಾ ಪ್ರಾಣಿಗಳು ಸಹಜವಾಗಿ ಕಣ್ಣಿಗೆ ಕಾಣುತ್ತಿಲ್ಲ. ಒಂದು ವೇಳೆ ತುಂಬಾ ತೀಕ್ಷ್ಣವಾಗಿ ಹಾಗೂ ಸೂಕ್ಷ್ಮವಾಗಿ ಗಮನಿಸಿದಾಗ ಮಾತ್ರ ಚಿತ್ರದಲ್ಲಿರುವ ಜೀಬ್ರಾಗಳು ಕಂಡುಬರುತ್ತವೆ. ನೀವು ನೋಡುತ್ತಿರುವ ಕಪ್ಪು ಬಣ್ಣದ ಪ್ರಾಣಿಗಳು ಅವು ಪ್ರಾಣಿಗಳಲ್ಲದೆ ಜೀಬ್ರಾಗಳ ನೆರಳಾಗಿದೆ. ನೀವು ಒಂದು ವೇಳೆ ಝೀಬ್ರಾಗಳನ್ನು ಶೋಧಿಸಲು ಹೋದರೆ ಅವು ಕಾಣುವುದೇ ಇಲ್ಲ. ಕಾರಣ ಈ ಫೋಟೋ ಟಾಪ್ ಆಂಗಲ್ ನಿಂದ ಕ್ಲಿಕ್ ಮಾಡಲಾಗಿದೆ. ಹೀಗಾಗಿ ನಿಜವಾದ ಪ್ರಾಣಿಗಳು ಸ್ಪಷ್ಟವಾಗಿ ಕಾಣಿಸದೇ ಅವುಗಳ ಬರೀ ನೆರಳಿನ ಹತ್ತಿರ ರೇಖೆಗಳ ಹಾಗೆ ಜೀಬ್ರಾಗಳು ಕಂಡುಬರುತ್ತಿದೆ. ಈ ಫೋಟೋವನ್ನು ಮರಳುಗಾಡಿನಲ್ಲಿ ಸಾಯಂಕಾಲದ ಸಮಯದಲ್ಲಿ ಕ್ಲಿಕ್ಕಿಸಲಾಗಿದೆ. ಸಾಕಷ್ಟು ಜನರು ನೆರಳಿನಲ್ಲಿಯೇ ಜೀಬ್ರಾಗಳನ್ನು ಹುಡುಕಲು ಪ್ರಯತ್ನಿಸಿದ್ದಾರೆ. ಈ ಕೆಳಗೆ ಜೂಮ್ ಮಾಡಿ ನೀಡಿದ ಚಿತ್ರದಲ್ಲಿ ಒಂದುವೇಳೆ ನೀವು ನೋಡಿದರೆ ನೆರಳಿನ ಕೆಳಗಿನ ಭಾಗದಲ್ಲಿ ಜಾಳಿಗೆಯ ರೀತಿಯಲ್ಲಿ ಕಂಡುಬರುವ ಚಿತ್ರಗಳೇ ಜೀಬ್ರಾಗಳಾಗಿವೆ.

ಜೂಮ್ ಮಾಡಿದ ಈ ಚಿತ್ರದಲ್ಲಿ ನೋಡಿ ಗೊತ್ತಾಗುತ್ತದೆ…

ಈ ಫೋಟೋವನ್ನು ಪ್ರಸಿದ್ಧ ವನ್ಯಜೀವಿಗಳ ಫೋಟೋಗ್ರಾಫರ್ ಆದ ಬೆವರ್ಲಿ ಜೋಬಾರ್ಟ್ ಅವರು ತೆಗೆದಿದ್ದಾರೆ. ಈ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಐಎಫ್ಎಸ್ ಆಫೀಸರ್ ಆದ ಸುಸಾಂತ ನಂದಾ ಅವರು ತಮ್ಮ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಶೇರ್ ಮಾಡಿದ್ದಾರೆ.

Leave a Comment

Your email address will not be published. Required fields are marked *