Optical Illusion : ಚಿತ್ರದಲ್ಲಿ ಕಾಣುವ ವ್ಯಕ್ತಿ ಯಾವ ದಿಕ್ಕಿಗೆ ಓಡುತ್ತಿದ್ದಾನೆ? ಉತ್ತರಿಸಿ ನಿಮ್ಮ ವ್ಯಕ್ತಿಮತ್ವ ಹೇಗಿದೆ ತಿಳಿದುಕೊಳ್ಳಿ…
ಪ್ರತಿಯೊಂದು ವಸ್ತು ಅಥವಾ ಚಿತ್ರದ ಕಡೆಗೆ ನೋಡುವ ದೃಷ್ಟಿಕೋನ, ಪದ್ಧತಿ ಪ್ರತಿಯೊಬ್ಬರದ್ದು ಬೇರೆಯಾಗಿರುತ್ತದೆ. ವ್ಯಕ್ತಿ ಮಾತನಾಡುವುದರಿಂದ, ಆತ ಇಷ್ಟಪಡುವ ಹವ್ಯಾಸಗಳಿಂದ, ಮಾಡುವ ಕೆಲಸಗಳಿಂದ ಹೀಗೆ ಆತನ ವ್ಯಕ್ತಿಮತ್ವವು ಪ್ರಕಟವಾಗುತ್ತಿರುತ್ತದೆ. ಜೊತೆಗೆ ಒಂದು ವ್ಯಕ್ತಿ ಉಳಿದವರಿಗಿಂತ ಹೇಗೆ ಭಿನ್ನವಾಗಿದ್ದಾನೆ ಎಂಬುದು ಸಹ ತಿಳಿದು ಬರುತ್ತದೆ.
ಈಗ ಇಲ್ಲಿರುವ ಆಪ್ಟಿಕಲ್ ಇಲ್ಯೂಜನ್ ಚಿತ್ರವನ್ನು ನೋಡಿದಾಗ ನಿಮಗೆ ಅಲ್ಲಿ ಯಾವ ದೃಶ್ಯ ಮೊದಲು ಕಾಣುತ್ತದೆ ಅದರಿಂದ ನಿಮ್ಮ ವ್ಯಕ್ತಿಮತ್ವದ ಬಗ್ಗೆ ತಿಳಿಯಲು ಸಹಾಯವಾಗುತ್ತದೆ.
ವ್ಯಕ್ತಿಯು ಮುಂದೆ ಹೋಗುತ್ತಿದ್ದಾನೆಯೊ ಅಥವಾ ಹಿಂದೆ?

ಪ್ರಸ್ತುತ ಚಿತ್ರವನ್ನು ‘ಫೋಟೋ ಫ್ಯಾಕ್ಟರೀಜ್’ ಶೇರ್ ಮಾಡಿದೆ. ಯಾರಿಗೆ ಈ ವ್ಯಕ್ತಿಯು ತಮ್ಮೆಡೆಗೆ ಬರುತ್ತಿದ್ದಾನೆ ಎಂದೆನಿಸುತ್ತದೆ ಅವರು ತುಂಬಾ ಕುಶಾಗ್ರ ಬುದ್ಧಿಯನ್ನು ಹೊಂದಿದವರಾಗಿರುತ್ತಾರೆ. ಮತ್ತು ತಮ್ಮ ಯಾವುದೇ ಸಮಸ್ಯೆಗಳನ್ನು ಬಿಡಿಸಿಕೊಳ್ಳಲು ಸಮರ್ಥರಾಗಿರುತ್ತಾರೆ. ಹಾಗೆಯೇ ಜೀವನದಲ್ಲಿ ಬರುವ ಕಠಿಣ ಸಮಸ್ಯೆಗಳಿಗೆ ಇವರು ಏನಾದರೂ ದಾರಿ ಹುಡುಕಿ ಮಾರ್ಗವನ್ನು ಹುಡುಕಿಕೊಳ್ಳಲು ಪ್ರಯತ್ನಶೀಲರಾಗಿರುತ್ತಾರೆ.
ಯಾರಿಗೆ ಈ ಚಿತ್ರದಲ್ಲಿಯ ವ್ಯಕ್ತಿ ಬೆಳಕಿನೆಡೆಗೆ ಹೋಗುತ್ತಿದ್ದಾನೆ ಎಂದೆನಿಸುತ್ತದೆಯೊ ಅವರ ವಿಶ್ಲೇಷಣಾತ್ಮಕ ದೃಷ್ಟಿಕೋನ ತುಂಬಾ ಚೆನ್ನಾಗಿರುತ್ತದೆ. ಪ್ರತಿಯೊಂದು ವಿಷಯದ ಬಗ್ಗೆ ಬೇರೆ ತರ್ಕ ಮಾಡುತ್ತಾರೆ. ಈ ವ್ಯಕ್ತಿಗಳು ಯಾವುದೇ ಪ್ರವಾಹದಲ್ಲಿ ಸುಮ್ಮನೆ ಹರಿದು ಹೋಗದೆ ಇವರು ತಮ್ಮ ಇಂದ್ರಿಯಗಳ ಮೇಲೆ ಮತ್ತು ತಮ್ಮ ತರ್ಕದ ಮೇಲೆ ಹೆಚ್ಚು ವಿಶ್ವಾಸವನ್ನು ಇಡುತ್ತಾರೆ. ಯಾವುದೇ ನಿರ್ಣಯ ತೆಗೆದುಕೊಳ್ಳಲು ಗಡಿಬಿಡಿ ಮಾಡುವದಿಲ್ಲ. ಯಾವಾಗ ಇವರು ಏನಾದರೂ ಕ್ರಿಯೇಟಿವಿಟಿ ಮಾಡುತ್ತಾರೋ ಆಗ ಇವರ ಮೆದುಳು ಅಥವಾ ಬುದ್ಧಿಶಕ್ತಿ ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ.