ಪಾಕಿಸ್ತಾನಿ ಹುಡುಗ “ಜೈ ಜೈ ಶಿವಶಂಕರ್ ಹಾಡಿಗೆ ಡಾನ್ಸ್ ಮಾಡಿದನು ಸಖತ್ “..! ಈ ವಿಡಿಯೋ ಗೆಲ್ಲುವುದು ನಿಮ್ಮ ಹೃದಯವನ್ನು.

ನಮಗೆಲ್ಲರಿಗೂ ಗೊತ್ತಿರುವ ಹಾಗೆ ಪಾಕಿಸ್ತಾನದಲ್ಲಿ ಬಾಲಿವುಡ್ ಚಲನಚಿತ್ರಗಳನ್ನು ಭರ್ಜರಿಯಾಗಿ ಇಷ್ಟಪಡುತ್ತಾರೆ. ನಮ್ಮ ಚಲನಚಿತ್ರಗಳೆಂದರೆ ಅಕ್ಷರಶಃ ಮುಗಿ ಬೀಳುತ್ತಾರೆ ಅಲ್ಲಿಯ ಜನ. ಬಾಲಿವುಡ್ ನಟ ನಟಿಯರು ಅಲ್ಲಿ ಮನೆ ಮಾತಾಗಿದ್ದಾರೆ. ಸಾಕಷ್ಟು ಜನ ಬಾಲಿವುಡ್ ನಟ ನಟಿಯರ ಕಾಪಿ ಮಾಡುತ್ತಾರೆ. ಪಾಕಿಸ್ತಾನದ ಜನ ಬಾಲಿವುಡ್ ನ ಅನೇಕ ಗಾಯಕರನ್ನು ಸಹ ತುಂಬಾ ಇಷ್ಟಪಡುತ್ತಾರೆ.

ಸೋಶಿಯಲ್ ಮೀಡಿಯಾದಲ್ಲಿ ದಿನನಿತ್ಯ ಅನೇಕ ವಿಡಿಯೋಗಳು ವೈರಲ್ ಆಗುತ್ತವೆ. ಅದೇ ರೀತಿ ಈಗ ಪಾಕಿಸ್ತಾನದ ಹುಡುಗನ ಒಂದು ವಿಡಿಯೋ ಭರ್ಜರಿಯಾಗಿ ಸುದ್ದಿಯಾಗುತ್ತಿದೆ. ಈ ವಿಡಿಯೋದಲ್ಲಿ ಪಾಕಿಸ್ತಾನದ ಹುಡುಗ ಬಾಲಿವುಡ್ ಸೂಪರ್ ಹಿಟ್ ಹಾಡಾದ ಜೈ ಜೈ ಶಿವಶಂಕರ್ ಹಾಡಿಗೆ ನೃತ್ಯವನ್ನು ಮಾಡಿದ್ದಾನೆ. ಹುಡುಗನ ಈ ನೃತ್ಯವು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಗೆ ತುಂಬಾ ಇಷ್ಟವಾಗಿದೆ. ಇದೇ ಕಾರಣದಿಂದಾಗಿ ಈ ವಿಡಿಯೋ ಕ್ಲಿಪ್ ಎಲ್ಲರ ಗಮನ ಸೆಳೆಯುತ್ತಿದೆ.

ಬೇರೆ ಯಾವ ಹಾಡಾದರೂ ಅಷ್ಟೊಂದು ವಿಶೇಷ ಸುದ್ದಿ ಆಗುತ್ತಿರಲಿಲ್ಲ. ಈ ಹಾಡು ಭಾರತೀಯರ ಭಕ್ತಿ ಭಾವಕ್ಕೆ ಸಂಬಂಧಪಟ್ಟ ದೇವರ ಹಾಡಾಗಿದೆ. ಈ ಹಾಡಿಗೆ ಪಾಕಿಸ್ತಾನದ ಹುಡುಗ ಕುಣಿದಿದ್ದಾನೆಂದರೆ ನೋಡುಗರಿಗೆ ವಿಶೇಷವಾಗಿದೆ. ಅಷ್ಟೇ ಅಲ್ಲ ಹುಡುಗನು ಸಹ ತುಂಬಾ ವಿಶೇಷವಾಗಿ ಈ ಹಾಡಿಗೆ ಹೆಜ್ಜೆಗಳನ್ನು ಹಾಕಿ ನೋಡುಗರ ಗಮನ ಸೆಳೆಯುವ ಹಾಗೆ ಮತ್ತು ಪ್ರತಿಕ್ರಿಯೆ ನೀಡುವ ಮಾಡಿದ್ದಾನೆ. ಈ ಹಾಡಿಗೆ ಚಲನಚಿತ್ರದಲ್ಲಿ ಹೃತಿಕ್ ರೋಷನ್ ಅವರು ಸ್ಟೆಪ್ ಹಾಕಿದ್ದಾರೆ.

ನೋಡಿ ಈ ವಿಡಿಯೋ…

ಪ್ರಸ್ತುತ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಈ rayyansheikh123 ಹೆಸರಿನಿಂದ ಶೇರ್ ಮಾಡಲಾಗಿದೆ. ಪ್ರಸ್ತುತ ಈ ವಿಡಿಯೋ ದೃಶ್ಯವನ್ನು ಇಲ್ಲಿಯವರೆಗೆ ಲಕ್ಷಾವಧಿ ಜನರು ನೋಡಿದ್ದಲ್ಲದೆ ಸಾವಿರಾರು ಜನರು ಲೈಕ್ ಮಾಡಿದ್ದಾರೆ. ಅನೇಕ ಜನರು ಈ ವಿಡಿಯೋ ನೋಡಿ ತಮ್ಮ ಒಳ್ಳೆಯ ಪ್ರತಿಕ್ರಿಯೆಗಳನ್ನು ಸಹಿತ ಕಮೆಂಟ್ ರೂಪದಲ್ಲಿ ಹೊರ ಹಾಕಿದ್ದಾರೆ.