ಬರುತ್ತಿದೆ POCO M3 Pro 5G, ಹೆಚ್ಚು ಮಾರಾಟವಾದ ಈ ಫೋನಿನ 5G ರೂಪಾಂತರ ಹೇಗಿದೆ ಗೊತ್ತಾ?

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಪೊಕೊ ಶೀಘ್ರದಲ್ಲೇ ಭಾರತ ಸೇರಿದಂತೆ ಎಲ್ಲ ಕಡೆ ತನ್ನ ಅತ್ಯುತ್ತಮ ಬಜೆಟ್ ಫೋನ್ ಪೊಕೊ ಎಂ 3 ಯ Pro ಮಾದರಿಯ 5 ಜಿ ರೂಪಾಂತರವಾದ POCO M3 Pro 5G ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಪೊಕೊ ಎಂ 3 ಪ್ರೊ ನ 4 ಜಿ ಮತ್ತು 5 ಜಿ ರೂಪಾಂತರಗಳನ್ನು ಮೇ 19 ರಂದು ವಿಶ್ವಾದ್ಯಂತ ಬಿಡುಗಡೆ ಮಾಡಲಾಗುವುದು.

ವಿಶೇಷ ವಿನ್ಯಾಸದೊಂದಿಗೆ ಪೊಕೊ ಎಂ 3 ಪ್ರೊ 5 ಜಿ ಅನ್ನು ಪರಿಚಯಿಸಲಾಗುವುದು ಎಂದು ವರದಿಯಾಗಿದೆ. ಪೊಕೊ ಎಂ 3 ಪ್ರೊ ಮತ್ತು ಪೊಕೊ ಎಂ 3 ಪ್ರೊ 5 ಜಿ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡುವ ಮೊದಲು ಅನಾವರಣಗೊಳಿಸಲಾಯಿತು. ಪೊಕೊ ಎಂ 3 ಪ್ರೊ 5 ಜಿ ಅನ್ನು ಮೀಡಿಯಾ ಟೆಕ್ ಪ್ರೊಸೆಸರ್ ಜೊತೆಗೆ ನೀಡಬಹುದು.

ಕಡಿಮೆ ಬೆಲೆಗೆ ಹೆಚ್ಚಿನ ವೈಶಿಷ್ಟ್ಯಗಳು!
POCO M3 Pro 5G ಯ ಸಂಭಾವ್ಯ ವೈಶಿಷ್ಟ್ಯಗಳ ಬಗ್ಗೆ ಮಾತನಾಡುತ್ತಾ, ಇದು 90Hz ರಿಫ್ರೆಶ್ ರೇಟ್ ನೊಂದಿಗೆ 6.5 ಇಂಚಿನ ಐಪಿಎಸ್ ಎಲ್ಸಿಡಿ ಡಿಸ್ಪ್ಲೇಯನ್ನು ಹೊಂದಿರುತ್ತದೆ. ಈ ಫೋನ್‌ ನ ಪರದೆಯ ರೆಸಲ್ಯೂಶನ್ 1080×2400 ಪಿಕ್ಸೆಲ್‌ಗಳಾಗಿರುತ್ತದೆ. ಆಂಡ್ರಾಯ್ಡ್ 11 ರ ಎಂಐಯುಐ 12 ಆಪರೇಟಿಂಗ್ ಸಿಸ್ಟಮ್ ಆಧರಿಸಿ, ಈ ಫೋನ್ ಮೀಡಿಯಾ ಟೆಕ್ ಎಂಟಿ 6833 ಡೈಮೆನ್ಸಿಟಿ 700 5 ಜಿ ಪ್ರೊಸೆಸರ್ ಅನ್ನು ಹೊಂದಿರಲಿದೆ.

ಪೊಕೊ ಈ ಫೋನ್ ಅನ್ನು 4 ಜಿಬಿ ಮತ್ತು 6 ಜಿಬಿ ರ್ಯಾಮ್ ಆಯ್ಕೆಗಳ ಜೊತೆಗೆ 64 ಜಿಬಿ ಮತ್ತು 128 ಜಿಬಿ ಸ್ಟೋರೇಜ್ ನಲ್ಲಿ ಬಿಡುಗಡೆ ಮಾಡಲಿದೆ. POCO M3 Pro 5G ಬ್ಯಾಟರಿಯ ಬಗ್ಗೆ ಮಾತನಾಡುವುದಾದರೆ, ಇದು 5000 mAh ಬ್ಯಾಟರಿಯನ್ನು ಹೊಂದಿರುತ್ತದೆ, ಇದು 18 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ.

ಭಾರತದಲ್ಲಿ ಪೊಕೊ ಎಂ ಸರಣಿಯ ಹಾವಳಿ :
ಪೊಕೊ ಎಂ 3 ಪ್ರೊ 5 ಜಿ ಪೊಕೊ ಎಂ 3 ನಂತಹ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುತ್ತದೆ, ಇದರ ಪ್ರೈಮರಿ ಸೆನ್ಸರ್ 48 ಮೆಗಾಪಿಕ್ಸೆಲ್‌ಗಳು. ಇದರೊಂದಿಗೆ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಮತ್ತು 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಇರುತ್ತದೆ. ಸೆಲ್ಫಿಗಾಗಿ ಈ ಪೊಕೊ ಫೋನ್ 8 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿರುತ್ತದೆ.

ದೊರೆತಿರುವ ಮಾಹಿತಿಯ ಪ್ರಕಾರ, ಇದನ್ನು 15 ಸಾವಿರ ರೂಪಾಯಿಗಳ ರೇಂಜ್ ನಲ್ಲಿ ಪ್ರಾರಂಭಿಸಬಹುದು. ಈ ರೇಂಜ್ ನಲ್ಲಿ ರಿಯಲ್ ಮೀ, ರಿಯಲ್ ಮೀ 8 5 ಜಿ ಅನ್ನು ಬಿಡುಗಡೆ ಮಾಡಿದೆ. ಪೊಕೊ ಎಂ ಸರಣಿಯ ಮೊಬೈಲ್‌ಗಳು ಭಾರತದಲ್ಲಿ ಬಂಪರ್ ಮಾರಾಟವಾಗಿದೆ.
ಪೊಕೊ ಎಂ 3 ಮಾರಾಟದ ದೃಷ್ಟಿಯಿಂದ ದಾಖಲೆಗಳನ್ನು ಮಾಡಿದೆ. ಈಗ ಕಂಪನಿಯು ಉತ್ತಮ ವೈಶಿಷ್ಟ್ಯಗಳೊಂದಿಗೆ 5 ಜಿ ಫೋನ್‌ ಗಳನ್ನು ಜನರಿಗೆ ಕಡಿಮೆ ಬೆಲೆಗೆ ನೀಡಲು ಬಯಸಿದೆ, ಇದು ಪ್ರಸ್ತುತ ಹೆಚ್ಚಿನ ಬೇಡಿಕೆಯಲ್ಲಿರುವ ಫೋನ್.
-Team Infotrend