VIDEO : ರಘುವೀರ್ ಹಾಗೂ ಸಿಂಧೂ ದಂಪತಿಯ ಮಗಳು ಹೇಗಿದ್ದಾಳೆ ಗೊತ್ತಾ..!

ನಿಮಗೆಲ್ಲ ತಿಳಿದಿರುವ ಹಾಗೆ ಕನ್ನಡದ ದುರಂತ ನಾಯಕನೆಂದೇ ಕರೆಯಲ್ಪಡುವ ರಘುವೀರ್ ಅವರು ಆಗರ್ಭ ಶ್ರೀಮಂತರಾಗಿದ್ದರು, ಆದರೆ ಶೃಂಗಾರ ಕಾವ್ಯ ಹಾಗೂ ತುಂಗಭದ್ರಾ ಎಂಬ ಚಿತ್ರಗಳಲ್ಲಿ ತಮ್ಮ ಜೊತೆಗೆ ನಟಿಸಿದ ನಾಯಕಿ ಸಿಂಧೂರವರನ್ನು ಪ್ರೀತಿಸಿ ಮನೆಯವರ ವಿರೋಧವಿದ್ದರೂ ಲೆಕ್ಕಿಸದೇ ಮದುವೆಯಾದ ಕಾರಣಕ್ಕೆ ತಮ್ಮ ಇಡೀ ಕುಟುಂಬವನ್ನು ದೂರ ಮಾಡಿಕೊಳ್ಳಬೇಕಾಯಿತು.

ಚಿನ್ನದ ತಟ್ಟೆಯಲ್ಲಿ ಊಟ ಮಾಡುತ್ತಿದ್ದ ಇವರು ಒಂದು ಬಾಡಿಗೆ ಮನೆಯಲ್ಲಿ ವಾಸವಿದ್ದು ಒಮ್ಮಿಂದೊಮ್ಮೆಲೇ ಆಕಾಶದೆತ್ತರದಿಂದ ಭೂಮಿಗೆ ಧುಮುಕಿದಂತೆ ಮಾಡಿಕೊಂಡಿದ್ದರು ತಮ್ಮ ಜೀವನವನ್ನು. ಆದರೂ ಇಬ್ಬರ ನಡುವಿನ ಪ್ರೀತಿ ಕಡಿಮೆಯಾಗಿರಲಿಲ್ಲ, ಅವರಿಬ್ಬರ ನಡುವೆ ಯಾವತ್ತೂ ಮನಸ್ತಾಪ ಬರಲೇ ಇಲ್ಲ.

ಆದರೆ, ಮುಟ್ಟಿದ್ದೆಲ್ಲ ಚಿನ್ನದಂತಿದ್ದ ಸಿನಿಮಾದಲ್ಲಿನ ಅವಕಾಶಗಳು ಕೂಡ ಸಂಪೂರ್ಣ ನಿಂತು ಹೋಗಿದ್ದವು, ಹೀಗಾಗಿ ತಮ್ಮ ಪತ್ನಿಯೊಂದಿಗೆ ತಮಿಳುನಾಡಿಗೆ ಹೋಗಿ ನೆಲೆಸಿದರು. ಅಲ್ಲಿ ಸಿಂಧುರವರಿಗೆ ದಾರಾವಾಹಿಯಲ್ಲಿ ಅವಕಾಶಗಳಿದ್ದವು. ಎಲ್ಲ ಸುಸೂತ್ರವಾಗಿ ನಡೆಯುತ್ತಿದ್ದಾಗ ದುರಂತ ಸಂಭವಿಸಿತು. 2007 ರಲ್ಲಿ ಸಂಭವಿಸಿದ ಸುನಾಮಿಯ ಸಂತ್ರಸ್ತರಿಗೆ ದೇಣಿಗೆ ಸಂಗ್ರಹ ಮಾಡಲು ಹೋದ ಸಿಂಧೂರವರ ಆರೋಗ್ಯ ವಿಪರೀತ ಹದಗೆಟ್ಟಿತು.

ಅಲ್ಲಿ ಬೀಸಿದ ಬಿರುಗಾಳಿಯಿಂದಾಗಿ ಶ್ವಾಸಕೋಶದ ಸೋಂಕಿಗೆ ತುತ್ತಾಗಿ ಆಸ್ಪತ್ರೆ ಪಾಲಾದರು. ರಘುವೀರ್ ಅವರು ಏನೇ ಆದರೂ ಇವರನ್ನು ಬದುಕಿಸಿಕೊಳ್ಳಲೇಬೇಕು ಎಂದು ಶತಾಯ ಗತಾಯ ಪ್ರಯತ್ನಿಸಿದರು, ಆದರೆ ಸಿಂಧೂ ಬದುಕುಳಿಯಲಿಲ್ಲ. ಯಾರಿಗೋಸ್ಕರ ತನ್ನದೆಲ್ಲ ಹಾಗೂ ತನ್ನವರನ್ನೆಲ್ಲ ಕಳೆದುಕೊಂಡಿದ್ದನೋ ಅವರೇ ನಡುವೆ ಬಿಟ್ಟು ಹೋಗಿಬಿಟ್ಟರು.

ಕೊನೆಗೆ ಅಲ್ಲಿಂದ ಅವರ ತಂದೆ ಹಾಗೂ ಸೋದರರು ರಘುವೀರ್ ಅವರನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ಮತ್ತೊಂದು ಮದುವೆ ಮಾಡಿದರು. ಆದರೆ ದುರದೃಷ್ಟ ಎಂದರೆ ರಘುವೀರ್ ಮತ್ತೆ ತಮ್ಮ ಹಳೆಯ ಜೀವನಶೈಲಿಯತ್ತ ತಿರುಗುವಾಗ, 2014 ರ ಮೇ 8 ರಂದು ಮತ್ತೊಮ್ಮೆ ಕೈ ಕೊಟ್ಟ ಅದೃಷ್ಟ ಅವರನ್ನೇ ಬಲಿ ಪಡೆಯಿತು.

ಆದರೆ ಇದೆಲ್ಲದರ ಮಧ್ಯ ರಘುವೀರ್ ಹಾಗೂ ಸಿಂಧೂ ದಂಪತಿಗೆ ಒಂದು ಹೆಣ್ಣು ಮಗುವಿತ್ತು. ಆ ಮಗುವಿನ ಹೆಸರು ಶ್ರೇಯಾ ಎಂದು. ತಾಯಿ ತೀರಿದ ಬಳಿಕ ತನ್ನ ಸೋದರ ಮಾವಂದಿರ ಆಶ್ರಯದಲ್ಲಿ ಬೆಳೆದ ಶ್ರೇಯಾ ಸದ್ಯ ಒಂದು ಮಗುವಿನ ತಾಯಿ! ನೋಡಲು ಥೇಟ್ ರಘುವೀರ್ ರಂತೆಯೇ ಕಾಣುವ ಶ್ರೇಯಾ ಖಂಡಿತ ಅವರ ತಂದೆಯನ್ನು ನೆನಪಿಸುತ್ತಾರೆ.

ಶ್ರೇಯಾ ಮದುವೆ ಆಗಿದ್ದು ಕೂಡ ತನ್ನ ತಂದೆ ತಾಯಿಯಂತೆ ಚಲನಚಿತ್ರ ಹಿನ್ನೆಲೆಯುಳ್ಳ ತಮಿಳಿನ ಯುವ ನಿರ್ದೇಶಕ ಅಶ್ವಿನ್ ರಾಮ್ ಅವರನ್ನ. ಇವರು 5 ವರ್ಷಗಳ ಹಿಂದೆ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಇವರಿಗೆ ತಂದೆ ತಾಯಿ ಇಲ್ಲ ಎನ್ನುವ ಯಾವುದೇ ರೀತಿಯಾದ ಕೊರತೆ ಬರದಂತೆ ನೋಡಿಕೊಳ್ಳುತ್ತಿದ್ದಾರೆ ಅಶ್ವಿನ್.

ಅವರ ಪ್ರೀತಿ ತುಂಬಿದ ಕುಟುಂಬದ ಕುರುಹಾಗಿ ಸದ್ಯ ಒಂದು ಮಗು ಆಗಿದೆ. ಕನ್ನಡದ ಲಕ್ಕಿ ನಟ ಎಂದೇ ಖ್ಯಾತರಾಗಿದ್ದ ರಘುವೀರ್ ಅವರ ಮಗಳು ಸಧ್ಯ ತಾಯಿಯಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಇನ್ನೂ ಶ್ರೇಯಾ ಅವರು ತಮ್ಮ ತಂದೆಯನ್ನು ಕಳೆದುಕೊಂಡಿದ್ದರೂ, ತಮ್ಮ ಚಿಕ್ಕಪ್ಪ – ದೊಡ್ಡಪ್ಪಂದಿರ ಜೊತೆಗೆ ಚೆನ್ನಾಗಿಯೇ ಇದ್ದಾರೆ. ಆಗಾಗ ಬೆಂಗಳೂರಿಗೆ ಬಂದು ಅವರನ್ನು ಭೇಟಿಯಾಗುತ್ತಿರುತ್ತಾರೆ.
-ಮಂಜುನಾಥ್