Articles

ಗೆಳೆಯನ ಬೆನ್ನ ಮೇಲೆ ಕುಳಿತು ಆಕಾಶದಲ್ಲಿ ಸುತ್ತಾಡಲು ಹೋರಾಟ ಹಕ್ಕಿ! ನೋಡಿ ಈ ಅಮೇಜಿಂಗ್ ವಿಡಿಯೋ…

ಇಲ್ಲಿಯವರೆಗೆ ಸೋಶಿಯಲ್ ಮೀಡಿಯಾದಲ್ಲಿ ಅನೇಕ ವಿಶೇಷವಾದ ವಿಡಿಯೋಗಳನ್ನು ನೀವು ನೋಡಿರಬಹುದು. ಆದರೆ ಈಗ ನೋಡುವ ವಿಡಿಯೋ ತುಂಬಾನೇ ವಿಶೇಷವೆನ್ನಬಹುದು. ಈ ಅದ್ಭುತವಾದ ವಿಡಿಯೋ ಬೆಳ್ಳಕ್ಕಿ (ಸೀಗಲ್) ಹಕ್ಕಿಗಳಿಗೆ ಸಂಬಂಧಿಸಿದ ವಿಡಿಯೋ ಆಗಿದೆ.

ಈ ವಿಡಿಯೋದಲ್ಲಿ ಒಂದು ಹಕ್ಕಿ ಇನ್ನೊಂದು ಹಕ್ಕಿಯ ಬೆನ್ನ ಮೇಲೆ ಸವಾರಿ ಮಾಡುತ್ತ ಆಕಾಶದಲ್ಲಿ ಸುತ್ತಾಡುತ್ತ ಮಜಾ ಮಾಡುತ್ತಿದೆ. ಈ ವಿಡಿಯೋ ನೋಡಿದ ನೇಟಿಜನ್ಸ್ ಗಳು ತುಂಬಾ ಆಶ್ಚರ್ಯವನ್ನು ವ್ಯಕ್ತ ಮಾಡಿದ್ದಾರೆ.

ತುಂಬಾ ಅದ್ಭುತವಾದ ವಿಡಿಯೋ…

ಈ ಬೆಳ್ಳಕ್ಕಿಯ ಸುಂದರವಾದ ವಿಡಿಯೋವನ್ನು ಟ್ವಿಟರ್ ನಲ್ಲಿ @buitengebieden ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಒಂದು ಬೆಳ್ಳಕ್ಕಿ ಇನ್ನೊಂದು ಬೆಳ್ಳಕ್ಕಿಯ ಬೆನ್ನಿನ ಮೇಲೆ ಸವಾರಿ ಮಾಡಿ ಫ್ರೀಯಾಗಿ ಆಕಾಶದಲ್ಲಿ ಸಂಚರಿಸುತ್ತಿವೆ. ಈ ರೀತಿಯ ವಿಶೇಷವಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಇದಕ್ಕೂ ಮೊದಲು ಬಹುಶಃ ನೋಡಿರಲಿಕ್ಕಿಲ್ಲ. ವಿಡಿಯೋ ನೋಡಿದ ನೇಟಿಜನ್ಸ್ ಗಳಿಗೆ ಈ ದೃಶ್ಯ ತುಂಬಾ ವಿಶೇಷವೆನಿಸಿದೆ.

ನೋಡಿ ಈ ವಿಡಿಯೋ…

ಪ್ರಸ್ತುತ ವಿಡಿಯೋವನ್ನು ಶೇರ್ ಮಾಡುತ್ತಾ ಯೂಸರ್, ಬೆಳ್ಳಕ್ಕಿ ಪುಕ್ಕಟ್ಟೆಯಾದ ಪ್ರವಾಸ ಮಾಡುತ್ತಿದೆ, ಎಂದು ಕ್ಯಾಪ್ಶನ್ ನೀಡಿದ್ದಾನೆ. ವೀಡಿಯೋ ನೋಡಿದ ಒಬ್ಬ ಯೂಸರ್ ‘ಚಿಕ್ಕ ಸೀಗಲ್ ದಣಿದ ಮೇಲೆ ಅದಕ್ಕೆ ತನ್ನ ಬೆನ್ನ ಮೇಲೆ ತೆಗೆದುಕೊಂಡು ಹೋಗುತ್ತಿದೆ’ ಎಂದಿದ್ದಾನೆ. ಇನ್ನೊಬ್ಬ ಯೂಸರ್ ‘ಚಿಕ್ಕ ಪಕ್ಷಿಗೆ ದೊಡ್ಡ ಪಕ್ಷಿಯು ಹಾರಾಟ ಮಾಡುವ ಜ್ಞಾನವನ್ನು ನೀಡುತ್ತಿದೆ’ ಎಂದಿದ್ದಾನೆ.

Leave a Comment

Your email address will not be published. Required fields are marked *