Video: ಕಳ್ಳತನ ಮಾಡೋವಾಗ ಸಿಕ್ಕಿ ಬಿದ್ಲು ಹುಡುಗಿ: ನಂತರ ಅವಳೊಂದಿಗೆ ಏನು ಮಾಡಿದ್ದಾರೆ ನೋಡಿ

ಪರಿಸ್ಥಿತಿ ವ್ಯಕ್ತಿಯನ್ನು ಏನೇನು ಮಾಡಿಸುತ್ತದೆ ಎಂಬುದು ಹೇಳಲು ಸಾಧ್ಯವಿಲ್ಲ. ಇಂಥ ಅನೇಕ ಘಟನೆಗಳು ದಿನಂಪ್ರತಿ ನಡೆಯುತ್ತವೆ. ಎಷ್ಟೋ ವಿಡಿಯೋ ಕ್ಲಿಪ್ ಗಳು ನೋಡುತ್ತೇವೆ. ಈ ವಿಡಿಯೋದಲ್ಲಿ ಕಾಣಲು ಮುಗ್ಧ ಮತ್ತು ಸುಂದರವಾಗಿರುವ ಹುಡುಗಿಯ ಕೈಚಳಕ ಮತ್ತು ಬುದ್ಧಿಶಕ್ತಿ ನೋಡಿ ಆಕೆ ಹೇಗೆಲ್ಲ ಚಿನ್ನದ ಆಭರಣಗಳನ್ನು ಕದಿಯುವ ಕೆಲಸ ಮಾಡುತ್ತಿದ್ದಳು ಎಂಬುದು ಗೊತ್ತಾಗುತ್ತದೆ.

ಯಾವಾಗ ಈ ಹುಡುಗಿಯ ಕಳ್ಳತನ ಸಿಕ್ಕಿ ಬಿತ್ತು ಆಗ ಈ ಹುಡುಗಿ ತುಂಬಾ ಗಾಬರಿಯಾಗಿದ್ದಳು. ಆಕೆಯ ಮುಖವನ್ನು ನೋಡಿದರೆ ಯಾರಿಗೂ ಈಕೆ ಕಳ್ಳತನ ಮಾಡಿದ್ದಾಳೆಂಬ ಸಂಶಯವೂ ಸಹ ಬರುವದಿಲ್ಲ. ಯಾವಾಗ ಎಲ್ಲರೂ ಸುತ್ತುಗಟ್ಟಿ ಪ್ರಶ್ನೆಗಳ ಸುರಿಮಳೆ ಮಾಡುತ್ತಾರೆ ಆಗ ತಾನು ಕಳ್ಳತನ ಮಾಡಿದ್ದನ್ನು ಒಂದೊಂದಾಗಿ ಹೇಳುತ್ತಾಳೆ. ತನ್ನ ಉತ್ತರದಲ್ಲಿ ಹುಡುಗಿ ತಂದೆಯ ಕಾರಣವನ್ನು ಹೇಳಿದ್ದಾಳೆ. ಆಕೆಯ ತಂದೆಯ ಆರೋಗ್ಯ ಹದಗೆಟ್ಟಿದ್ದರಿಂದ ಉಪಚಾರಕ್ಕಾಗಿ ಈ ಕೆಲಸ ಮಾಡಬೇಕಾಗಿ ಬಂತು ಎಂದು ಹೇಳುತ್ತಾಳೆ. ತಂದೆಯ ಆಪರೇಷನ್ ಸಹ ಮಾಡಬೇಕಾಗಿದೆ ಎಂದು ಹೇಳುತ್ತಾ ತನ್ನ ತಪ್ಪಿಗೆ ಕ್ಷಮೆ ಕೇಳುತ್ತಿದ್ದಾಳೆ.

ಈ ಹುಡುಗಿಯು ವರ್ಮಾ ಜುವೆಲರ್ಸ್ ಹೆಸರಿನ ಅಂಗಡಿಯೊಂದರಲ್ಲಿ ಕಳವು ಮಾಡಿದ್ದಾಳೆ. ಅಲ್ಲಿದ್ದವರ ಮಾತುಗಳನ್ನು ಕೇಳಿದರೆ ಆಕೆ ಇನ್ನೂ ಅನೇಕ ಅಂಗಡಿಗಳಲ್ಲಿ ತನ್ನ ಕೈಚಳಕವನ್ನು ತೋರಿಸಿದ್ದಾಳೆಂದು ಗೊತ್ತಾಗುತ್ತದೆ.

ವಿಡಿಯೋ ನೋಡಿ

ತನ್ನ ಕಳ್ಳತನ ಸಿಕ್ಕಿಬಿದ್ದ ನಂತರ ಹುಡುಗಿಯು ಅಕ್ಷರಶಃ ಬೆದರಿ ಬಿಟ್ಟಿದ್ದಾಳೆ. ಕಾರಣ ಗಾಬರಿಯಾಗಿ ಕುಡಿಯಲು ನೀರು ಸಹ ಕೇಳುತ್ತಿದ್ದಾಳೆ. ಆಕೆ ಇಲ್ಲಿಯವರೆಗೆ ಕಳವು ಮಾಡಿದ ಕೆಲವು ಆಭರಣಗಳನ್ನು ನೀವು ನೋಡಬಹುದು. ಅದರಲ್ಲಿ ಚಿನ್ನದ ಉಂಗುರ ಮತ್ತು ಸರಗಳ ಸಮಾವೇಶವಿದೆ. ಅಲ್ಲಿ ನೆರೆದವರು ಈಕೆಗೆ ಪೊಲೀಸರ ಕೈಗೆ ಕೊಡಬೇಕೆಂದು ಸೂಚಿಸುತ್ತಿದ್ದಾರೆ. ಸದ್ಯದ ಸಮಯದಲ್ಲಿ ಯಾರ ಮೇಲೂ ವಿಶ್ವಾಸವಿಡುವಂತಹ ಪರಿಸ್ಥಿತಿ ಇಲ್ಲ. ಈಕೆ ತನ್ನ ಪರಿಸ್ಥಿತಿಯಿಂದ ಅನಿವಾರ್ಯವಾಗಿ ಕಳ್ಳತನ ಮಾಡಿ ಇಲ್ಲಿಂದ ಬಚಾವಾಗುವ ಸಲುವಾಗಿ ತಂದೆಯ ಆರೋಗ್ಯ ಸರಿಯಿಲ್ಲವೆಂದು ಏನಾದರೂ ಒಂದು ಸುಳ್ಳು ನೆಪ ಹೇಳುತ್ತಿದ್ದಾಳೆಯೋ ಅಥವಾ ನಿಜವಾದ ಕಳ್ಳಿಯೇ ಆಗಿದ್ದಾಳೆ ಎಂಬುದರ ಬಗ್ಗೆ ಮಾತ್ರ ಗೊತ್ತಾಗುತ್ತಿಲ್ಲ.