RSS ನ ಆಸ್ಪತ್ರೆ ಕೇವಲ ಹಿಂದೂಗಳಿಗಾಗಿ ಮಾತ್ರವೇ? ರತನ್ ಟಾಟಾ ಅವರ ಪ್ರಶ್ನೆಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ನೀಡಿದ ಉತ್ತರ…
ಕೇಂದ್ರದ ದಕ್ಷ ಹಾಗೂ ಕಾರ್ಯೋನ್ಮುಖ ಸಾರಿಗೆ ಸಚಿವರಾದ ನಿತೀನ್ ಗಡ್ಕರಿ ಅವರು ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದ ಪುಣೆಯ ಹತ್ತಿರ ಸಿಂಹಗಢದಲ್ಲಿ ಒಂದು ಚಾರಿಟಿ ಆಸ್ಪತ್ರೆಯ ಉದ್ಘಾಟನೆಯ ಸಲುವಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡುವಾಗ ಹಳೆಯ ನೆನಪೊಂದು ಮೆಲುಕು ಹಾಕಿದರು.
ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನಾ ಮೈತ್ರಿಯ ಸರಕಾರದಲ್ಲಿ ಸಚಿವರಾಗಿದ್ದಾಗ ನಡೆದ ಒಂದು ಘಟನೆಯನ್ನು ಹೇಳಿದರು. RSS ನ ಮಾಜಿ ಪ್ರಮುಖರಾದ ದಿವಂಗತ ಹೇಡಗೆವಾರ್ ಹೆಸರಿನಲ್ಲಿ ಆಸ್ಪತ್ರೆಯೊಂದು ಔರಂಗಾಬಾದ್ ನಲ್ಲಿ ಉದ್ಘಾಟನೆ ಮಾಡುತ್ತಿದ್ದರು. ಆಗ ಅದೇ ಕಾರ್ಯಕ್ರಮಕ್ಕೆ ರತನ್ ಟಾಟಾ ಅವರನ್ನು ಕರೆದುಕೊಂಡು ಬಂದಿದ್ದೆ. ದೇಶದಲ್ಲಿ ಬಡವರಿಗಾಗಿ ಟಾಟಾ ಅವರ ಕ್ಯಾನ್ಸರ್ ಆಸ್ಪತ್ರೆಯ ಬಹುಮೂಲ್ಯ ಸೇವೆ, ಕೊಡುಗೆ ಮೆಚ್ಚುವಂಥದ್ದು. ಹೀಗಾಗಿ ಅವರಿಗೂ ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು.
ಕಾರ್ಯಕ್ರಮಕ್ಕೆ ಆಗಮಿಸಿದ ನಂತರ ಆಸ್ಪತ್ರೆಯಲ್ಲಿ ಸುತ್ತಾಡುವಾಗ ರತನ್ ಟಾಟಾ ಅವರು ಈ ಆಸ್ಪತ್ರೆ ಬರೀ ಹಿಂದೂಗಳಿಗಾಗಿ ಇದೆಯೇ ಎಂದು ಪ್ರಶ್ನಿಸಿದರು. ಅದಕ್ಕೆ ನಾನು ಪ್ರತಿಯಾಗಿ ಯಾಕೆ ನಿಮಗೆ ಹೀಗನಿಸುತ್ತೆ? ಎಂದಾಗ, ಯಾಕೆಂದರೆ ಇದು RSS ಅವರದಲ್ವಾ ಅದಕ್ಕೆ ಹಾಗೆನಿಸಿತು ಎಂದರು ರತನ್ ಟಾಟಾ.
ಆಗ ಗಡ್ಕರಿಯವರು RSS ಕಟ್ಟಿದ ಈ ಆಸ್ಪತ್ರೆ ಸಮಾಜದ ಎಲ್ಲ ಘಟಕದವರಿಗೆ ಮತ್ತು ಎಲ್ಲಾ ಸಮುದಾಯದವರಿಗಾಗಿ ಇದೆ ಹಾಗೂ RSS ರಾಷ್ಟ್ರೀಯ ಸ್ವಯಂಸೇವಕ ಸಂಘ ಧರ್ಮದ ಆಧಾರದ ಮೇಲೆ ಎಂದಿಗೂ ಯಾವತ್ತಿಗೂ ಭೇದಭಾವ ಮಾಡುವದಿಲ್ಲ ಎಂದು ರತನ್ ಟಾಟಾ ಅವರಿಗೆ ಮನದಟ್ಟು ಮಾಡಿಕೊಟ್ಟರಂತೆ. ಇದಲ್ಲವನ್ನು ಕೇಳಿದ ನಂತರ ರತನ್ ಟಾಟಾ ಅವರು ತುಂಬಾ ಖುಷಿ ಪಟ್ಟರಂತೆ.