ಸರ್ಕಾರಿ ಜಮೀನು, ಜಾಗ, ಸೈಟ್, ಮನೆ ಇದ್ದರೆ ನಿಮ್ಮ ಹೆಸರಿಗೆ ಪಹಣಿ ವರ್ಗಾವಣೆ…
ಕರ್ನಾಟಕ ರಾಜ್ಯದ ಎಲ್ಲ ರೈತರಿಗಳಿಗೂ ಮಾನ್ಯ ಕಂದಾಯ ಸಚಿವರಾದ ಆರ್.ಅಶೋಕ್ ಅವರು ಸಿಹಿ ಸುದ್ದಿ ನೀಡಿದ್ದಾರೆ. ಯಾರು ಸರ್ಕಾರಿ ಭೂಮಿಯಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡುತ್ತಿದ್ದಾರೋ ಆ ರೈತರಿಗೆ ತಮ್ಮ ಹೆಸರಿನಲ್ಲಿ ಪಹಣಿ ವರ್ಗಾವಣೆ ಮಾಡಿಕೊಳ್ಳಲು ಹಾಗೂ ಜಾಗವನ್ನು ಅವರ ಹೆಸರಿಗೆ ಮಾಡಿಕೊಳ್ಳಲು ಫಾರಂ ನಂಬರ್ 57ರಲ್ಲಿ ಅರ್ಜಿ ಸಲ್ಲಿಸಲು ಸರ್ಕಾರವು ಆದೇಶ ನೀಡಿದೆ. ಈ ವಿಷಯದ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಲೇಖನವನ್ನು ಪೂರ್ತಿಯಾಗಿ ಓದಿ. ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿ ಯಾರು ಅನಧಿಕೃತವಾಗಿ ಜಮೀನಿನಲ್ಲಿ ಉಳುಮೆ ಮಾಡುತ್ತಿರುವರೋ ಆ ರೈತರಿಗೆ ಅವರ ಹೆಸರಿಗೆ ಮಾಡಿಕೊಳ್ಳಲು ಅವರ ಹೆಸರಿನಲ್ಲಿಯೇ ಪಹಣಿ ಮಾಡಿಕೊಳ್ಳಲು ಮತ್ತು ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿದವರಿಗೆ ಹಾಗೂ ಸ್ವಂತ ಜಮೀನು ಇಲ್ಲದವರಿಗೆ ಬಡ ಕುಟುಂಬದವರಿಗೆ ಸ್ವಂತ ಮನೆ ಇಲ್ಲದವರಿಗೆ ಸರ್ಕಾರಿ ಜಾಗಗಳನ್ನು ಒತ್ತುವರಿ ಮಾಡುತ್ತಿರುವವರಿಗೆ ಅರ್ಜಿಗಳನ್ನು ಕರೆಯಲಾಗಿದೆ.
ಸರ್ಕಾರಿ ಜಮೀನಿನಲ್ಲಿ ಅನಧಿಕೃತ ಜಮೀನನ್ನು ಸಾಗುವಳಿಯಾಗಿ ಸಕ್ರಮಗೊಳಿಸಲು ನಮೂನೆ 57 ರಲ್ಲಿ ಅರ್ಜಿ ಸಲ್ಲಿಸಲು ಸರ್ಕಾರ ಮತ್ತೆ ಕಾಲಾವಕಾಶ ವಿಸ್ತರಿಸಿದೆ. ಈ ಮೂಲಕ ರಾಜ್ಯದ ರೈತರುಗಳಿಗೆ ಸಂತಸ ಸುದ್ದಿಯನ್ನು ನೀಡಿದೆ. ಮಾನ್ಯ ಸರ್ಕಾರದ ಕಂದಾಯ ಸಚಿವರಾದ ಆರ್ ಅಶೋಕ್ ಅವರೇ ಈ ಕುರಿತು ಮಾಹಿತಿ ನೀಡಿದ್ದು ಆಧಿಕೃತವಾಗಿ ಸಾಗುವಳಿ ಮಾಡುತ್ತಿರುವವರಿಗೆ ಇದು ಅನ್ವಯ ಆಗಲಿದೆ ಎಂದು ತಿಳಿಸಿದ್ದಾರೆ. ಸರ್ಕಾರಿ ಜಮೀನಿನ ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸುವ ಸಲುವಾಗಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಾಲಂ 94ಎ ಪ್ರಕಾರ ಅವಕಾಶ ನೀಡಲಾಗಿದೆ. ಇದರ ಅನ್ವಯ ನಮೂನೆ 57ರಲ್ಲಿ ಅರ್ಜಿ ಸಲ್ಲಿಸಲು ಇಚ್ಛಿಸುವವರಿಗೆ 31,ಮೇ 2023ರ ವರೆಗೆ ಅವಕಾಶ ನೀಡಲಾಗಿದೆ.
ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಮಾಡುತ್ತಿರುವ ಸಾಗುವಳಿಯನ್ನು ಸಕ್ರಮಗೊಳಿಸಲು ಭೂ ಕಂದಾಯ ಕಾಯ್ದೆ 1964ರ ಕಾಲಂ 94ಎ, 94ಬಿ ಮತ್ತು 94ಎ4 ರ ಅಡಿಯಲ್ಲಿ ನಮೂನೆ 50 ನಮ್ಮನೆ 53 ರಲ್ಲಿ ಅರ್ಜಿ ಸಲ್ಲಿಸುವವರಿಗೆ ನಮೂನೆ 57ರಲ್ಲಿ ಅರ್ಜಿ ಸಲ್ಲಿಸಲು ಅವಧಿ ವಿಸ್ತರಿಸಲಾಗಿದೆ ಎಂದು ಹೇಳಿದ್ದಾರೆ. ಇದರ ಪ್ರಕಾರ ನೀವು ಸಹ ಇದಕ್ಕೆ ಅರ್ಜಿ ಉಳಿಸುವವರಾಗಿದ್ದರೆ ಅಥವಾ ನೀವು ಸಹ ಸರ್ಕಾರಿ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದರೆ ಸರ್ಕಾರಿ ಜಾಗದಲ್ಲಿ ಮನೆ ನಿವೇಶನ ಇತ್ಯಾದಿಗಳನ್ನು ನಿರ್ಮಿಸಿದರೆ ಸರ್ಕಾರಿ ಸೈಟ್ ಗಳನ್ನು ಹೊಂದಿದ್ದರೆ ಈ ಕೂಡಲೇ ಈ ಉಪಯುಕ್ತ ಯೋಜನೆ ಬಳಸಿಕೊಂಡು ಸಕ್ರಮ ಮಾಡಿಕೊಳ್ಳಿ ನಂತರ ಪಹಣಿಗಳನ್ನು ನಿಮ್ಮ ಹೆಸರಿಗೆ ಪಡೆದುಕೊಂಡು ಲಾಭ ಪಡೆಯಿರಿ. ಸರ್ಕಾರ ಘೋಷಿಸಿರುವ ಈ ಒಂದು ನಿರ್ಧಾರದಿಂದ ಅದೆಷ್ಟೋ ಕರ್ನಾಟಕದ ನಿವಾಸಿಗಳಿಗೆ ಸ್ವಂತ ಸೂರು ಸಿಕ್ಕ ಸ್ವಂತ ಜಮೀನು, ಸೈಟು, ನಿವೇಶನ ಹೊಂದಿದ ಸಮಾಧಾನ ಆಗಲಿದೆ.
ಬಹಳ ದಿನಗಳಿಂದ ಅಪಾರ ಸಂಖ್ಯೆಯಲ್ಲಿ ಕರ್ನಾಟಕದ ನಾಗರಿಕರು ಈ ಒಂದು ಅವಕಾಶಕ್ಕಾಗಿ ಕಾಯುತ್ತಿದ್ದರು. ಆದರೆ ಹೆಚ್ಚಿನ ಜನರಿಗೆ ಇದರ ಮಾಹಿತಿ ತಲುಪದೇ ಅವರು ಈ ಬಾರಿ ಅರ್ಜಿ ಸಲ್ಲಿಸಲು ವಿಫಲರಾಗಿ ಹೋಗಬಹುದು. ಆದ್ದರಿಂದ ನಿಮ್ಮ ಸ್ನೇಹಿತರು ಹಾಗೂ ಕುಟುಂಬಸ್ಥರ ಜೊತೆಗೆ ಈ ವಿಷಯವನ್ನು ಹಂಚಿಕೊಂಡು ಇದು ಇನ್ನು ಹೆಚ್ಚಿನ ಜನರಿಗೆ ತಲುಪಲು ಅನುಕೂಲ ಮಾಡಿ. ಈ ಹೊಸ ಯೋಜನೆಯಿಂದ ಸಾಕಷ್ಟು ನಿರೀಕ್ಷಕರಿಗೆ ಒಳಿತಾಗಲಿ.