VIDEO : ತನ್ನ ಮರಿಗಳ ರ ಕ್ಷ ಣೆಗಾಗಿ ಹಾವುಗಳ ವಿ ರು ದ್ಧ ಹೋ ರಾ ಟಕ್ಕೆ ಇಳಿದ ಕೋಳಿ : ತಾಯಿ ಪ್ರೀತಿಗೆ ಸಲಾಂ ಎಂದ ನೆಟ್ಟಿಗರು

ಸೋಶಿಯಲ್ ಮೀಡಿಯಾ ಗಳಲ್ಲಿ ದಿನವೊಂದಕ್ಕೆ ಅನೇಕ ವಿಡಿಯೋಗಳು ಬರುತ್ತವೆ. ಇಂತಹ ವಿಡಿಯೋಗಳು ಅನೇಕ ನಮ್ಮ ಮನಸ್ಸಿಗೆ ಹಿಡಿಸುತ್ತವೆ. ಅದರಲ್ಲೂ ವಿಶೇಷವಾಗಿ ತಾಯಿಗೆ ಸಂಬಂಧಿಸಿದಂತಹ ಯಾವುದಾದರೂ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದಾಗ ಅದನ್ನು ನೋಡಿದಂತಹ ಅನೇಕರು ಭಾವುಕರಾಗಿ ಬಿಡುತ್ತಾರೆ. ಇಂತಹದೇ ಒಂದು ವಿಡಿಯೋ ಪ್ರಸ್ತುತ ಸೋಶಿಯಲ್ ಮೀಡಿಯಾ ಗಳಲ್ಲಿ ಬಹಳ ಬೇಗ ವೈರಲ್ ಆಗುತ್ತಿದೆ.

ಈ ವಿಡಿಯೋವನ್ನು ನೋಡಿದ ಮೇಲೆ ಒಂದು ಸಲ ನೀವು ಕೂಡಾ ನಿಮ್ಮ ತಾಯಿಯನ್ನು ಆತ್ಮೀಯತೆಯಿಂದ ಅಪ್ಪಿಕೊಳ್ಳುವುದು ವಾಸ್ತವ. ಈ ವೀಡಿಯೋ ನಿಮ್ಮ ಮುಖದಲ್ಲಿ ನಗುವನ್ನು ಮೂಡಿಸುವುದೋ, ಇಲ್ಲವೋ ಹೇಳಲು ಸಾಧ್ಯವಿಲ್ಲವಾದರೂ, ಖಂಡಿತವಾಗಿಯೂ ಇದು ನಿಮ್ಮನ್ನು ಭಾವುಕರನ್ನಾಗಿ ಮಾಡುತ್ತದೆ ಎಂದು ಹೇಳಬಹುದು.

ಸೋಶಿಯಲ್ ಮೀಡಿಯಾ ಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ನೋಡಿದಾಗ ಒಂದು ಕ್ಷಣ ಕೆಲವರ ಕಣ್ಣಲ್ಲಿ ನೀರು ಬರಬಹುದು. ಏಕೆಂದರೆ ಇದು ಒಂದು ಭಾವನಾತ್ಮಕ ಸಂಬಂಧವನ್ನು ನಮ್ಮ ಮುಂದೆ ತೆರೆದಿಡುತ್ತದೆ. ಪ್ರತಿಯೊಬ್ಬರಿಗೂ ಅವರ ತಾಯಿಯನ್ನು ನೆನಪಿಸುತ್ತದೆ.

ನಾವು ಈ ವೀಡಿಯೋದಲ್ಲಿ ಗಮನಿಸಿದಾಗ ಕೋಳಿಯೊಂದು ತನ್ನ ಮರಿಗಳನ್ನು ರಕ್ಷಿಸುವ ಸಲುವಾಗಿ ತನ್ನ ಪ್ರಾಣವನ್ನೇ ಪಣಕ್ಕೆ ಒಡ್ಡಿರುವುದನ್ನು ನಾವು ನೋಡಬಹುದು. ಕೋಳಿ ತನ್ನ ಮರಿಗಳ ರಕ್ಷಣೆಗಾಗಿ ಹಾವಿನ ಜೊತೆ ಹೋ ರಾ ಟ ಮಾಡಲು ಸಜ್ಜಾಗಿದೆ. ಹೇಗೆ ನಮ್ಮ ತಾಯಿ ನಮಗಾಗಿ ಹೋ ರಾ ಟ ಮಾಡುವಳೋ, ಅದೇ ರೀತಿಯಲ್ಲಿ ಕೋಳಿಯು ತನ್ನ ಮರಿಗಳ ರಕ್ಷಣೆಗೆ ಸಜ್ಜಾಗಿದೆ.

ಈ ವೈರಲ್ ವಿಡಿಯೋವನ್ನು ಐಪಿಎಸ್ ಅಧಿಕಾರಿ ರೂಪೇನ್ ಶರ್ಮಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋ ಶೇರ್ ಮಾಡಿಕೊಂಡ ನಂತರ ಅದಕ್ಕೆ ಒಂದು ಕ್ಯಾಪ್ಶನ್ ಅನ್ನು ಅವರು ನೀಡಿದ್ದಾರೆ. ಅವರು, ಇದು ತಾಯಿಗೆ ಸಂಬಂಧಿಸಿದ್ದು, “ಎಲ್ಲ ತೊಂದರೆಗಳ ಎದುರಿಸುವ ನೆಟ್ಟಿನಲ್ಲಿ” ತಾಯಿ ಎಂದು ಬರೆದುಕೊಂಡಿದ್ದಾರೆ.

ವೀಡಿಯೊವನ್ನು ನೋಡಿದ ನಂತರ ಬಹಳಷ್ಟು ಜನ ನೆಟ್ಟಿಗರು ಭಾವುಕರಾಗಿರುವುದು ಅವರು ನೀಡಿರುವ ಪ್ರತಿಕ್ರಿಯೆಗಳ ಮೂಲಕ ತಿಳಿದುಬರುತ್ತದೆ. ಕೆಲವರು ವಿಡಿಯೋವನ್ನು ಮಾಡಿದ ವ್ಯಕ್ತಿಯು ಅವುಗಳನ್ನು ಏಕೆ ಬದುಕಿಸುವ ಪ್ರಯತ್ನ ಮಾಡಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನು ಕೆಲವು ಟ್ವಿಟ್ಟರ್ ಬಳಕೆದಾರರು ತಾಯಿ ಎಂದರೆ ತಾಯಿಯೇ ಎಂದರೆ, ಒಬ್ಬ ಟ್ವಿಟರ್ ಬಳಕೆದಾರರು “ಅದಕ್ಕೆ ತಾಯಿ ಎನ್ನುವ, ಆ ಪದಕ್ಕೆ ಪರ್ಯಾಯ ಇನ್ನೊಂದು ಪದವಿಲ್ಲ, ಅಮ್ಮ ನಿನಗೊಂದು ಸಲಾಂ” ಎಂದು ಹೇಳುತ್ತಾ ತನ್ನ ಮನಸ್ಸಿನ ಮಾತನ್ನು ಹಂಚಿಕೊಂಡಿದ್ದಾರೆ. ಒಬ್ಬ ಮಹಿಳಾ ಟ್ವಿಟರ್ ಬಳಕೆದಾರರು, ನಾವು ನಿಜವಾಗಿಯೂ ಮಾನವರೇ??

ಆ ವಿಡಿಯೋ ಮಾಡುತ್ತಿರುವ ವ್ಯಕ್ತಿಯ ವರ್ತನೆಯನ್ನು ನೋಡಿದಾಗ ಹಾಗೆ ಅನಿಸುವುದಿಲ್ಲ ಎಂದು ಹೇಳುತ್ತಿದ್ದಾರೆ. ಅಂದರೆ ಆತ ಉಳಿಸುವ ಬದಲು ವಿಡಿಯೋ ಮಾಡುವುದು ತಪ್ಪು ಎನ್ನುವ ಅರ್ಥದಲ್ಲಿ ಅವರು ಈ ಮಾತನ್ನು ಹೇಳಿದ್ದಾರೆ. ಇನ್ನೊಬ್ಬ ಟ್ವಿಟರ್ ಬಳಕೆದಾರ ಬಹುಶಃ ಈ ವಿಡಿಯೋ ಮಾಡುವ ಉದ್ದೇಶದಿಂದ ಯಾರೋ ಕೋಳಿಗಳು ಹಾಗೂ ಅದರ ಮರಿಗಳು ಇತ್ತ ಜಾಗದಲ್ಲಿ ಬೇಕೆಂತಲೆ ಹಾವನ್ನು ಬಿಟ್ಟಿದ್ದಾರೆ ಎಂದಿದ್ದಾರೆ.

ಹೀಗೆ ನೆಟ್ಟಿಗರು ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಆದರೆ ವಿಡಿಯೋದಲ್ಲಿ ಕೋಳಿ ತನ್ನ ಮರಿಗಳ ರಕ್ಷಣೆಗೆ ತೋರಿದ ಧೈರ್ಯ ಹಾಗೂ ಅದರ ಪ್ರಯತ್ನಕ್ಕೆ ಪ್ರತಿಯೊಬ್ಬರೂ ಕೂಡಾ ಮೆಚ್ಚಲೇ ಬೇಕಾಗಿದೆ. ಕೋಳಿಯ ಈ ಸಾಹಸ ನೋಡಿ ತಾಯಿಗೆ ತನ್ನ ಪ್ರಾಣಕ್ಕಿಂತ ತಾನು ಜನ್ಮ ಕೊಟ್ಟ ಮರಿಗಳೇ ತನ್ನ ಜೀವ ಎಂದು ಹೇಳುತ್ತಿರುವಂತೆ ಕಾಣುತ್ತದೆ.
-Team Infotrend