ಗಲೀಜಾಗಬಾರದೆಂದು ಚಪ್ಪಲಿ ಕೈಯಲ್ಲಿ ಹಿಡಿದು ಕೆಸರು ದಾಟಲು ಮುಂದಾದ ಯುವಕ; ಅಲ್ಲಿ ನಡೆದದ್ದೇ ಬೇರೆ, ದಯವಿಟ್ಟು ನಗಬೇಡಿ..
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಕೆಲವು ವಿಡಿಯೋಗಳು ಸಾಕಷ್ಟು ಮನರಂಜನೆಯನ್ನು ನೀಡುತ್ತವೆ. ವಿಡಿಯೋದ ದೃಶ್ಯದ ಜೊತೆಗೆ ಆಡ್ ಮಾಡಿರುವ ವಾಯ್ಸ್ ಓವರ್ ಹಾಸ್ಯಕ್ಕೆ ಮತ್ತಷ್ಟು ಕಿಕ್ ನೀಡುತ್ತದೆ. ಸದ್ಯ ಇಲ್ಲಿ ನೋಡುವ ವಿಡಿಯೋ ಸಹ ಇದೇ ರೀತಿಯ ಹಾಸ್ಯವನ್ನು ನೀಡುತ್ತದೆ. ದೃಶ್ಯ ತುಂಬಾ ಸಕ್ಕತ್ತಾಗಿದೆ ದಯವಿಟ್ಟು ನಗಬೇಡಿ ಫುಲ್ ಎಮೋಷನಲ್ ಇದೆ.
ಆ ವಿಡಿಯೋದಲ್ಲಿ ಕಂಡು ಬರುವ ಪ್ರಕಾರ, ವ್ಯಕ್ತಿಯೊಬ್ಬ ಬಯಲಿನಲ್ಲಿ ನಿಂತ ಕೊಳಚೆ ನೀರನ್ನು ದಾಟುವ ಸಲುವಾಗಿ ಪ್ರಯತ್ನ ಮಾಡುತ್ತಿರುತ್ತಾನೆ. ಈ ಸಂದರ್ಭದಲ್ಲಿ ಕಾಲಲ್ಲಿರುವ ಚಪ್ಪಲಿಗಳು ಕೊಳಚೆಯಾಗಬಾರದು ಎಂದು ಕಾಳಜಿ ವಹಿಸಿ ಅವುಗಳನ್ನು ಕೈಯಲ್ಲಿ ಹಿಡಿದು ತುಂಬಾ ಜಾಗೃತೆಯಿಂದ ದಾಟಲು ಯತ್ನಿಸಿದ್ದಾನೆ. ಇಲ್ಲಿ ನಡೆಯಬಾರದ ಘಟನೆಯೊಂದು ನಡೆದು ಹೋಗುತ್ತದೆ ಮತ್ತು ಹಾಸ್ಯಕ್ಕೆ ಎಡೆ ಮಾಡಿಕೊಡುತ್ತದೆ. ವ್ಯಕ್ತಿಯು ಕೈಯಲ್ಲಿ ಚಪ್ಪಲಿಗಳನ್ನು ಹಿಡಿದು ತುಂಬಾ ಜಾಗೃತೆಯಿಂದ ನೀರಿನಲ್ಲಿರುವ ಕಲ್ಲಿನ ಮೇಲೆ ಕಾಲಿಟ್ಟು ಇನ್ನೇನು ದಾಟಬೇಕು ಎಂದು ಕಾಲಿಡುತ್ತಲೇ ವ್ಯಕ್ತಿ ಸಂಪೂರ್ಣವಾಗಿ ಕೆಸರು ತುಂಬಿದ ಕೊಳಚೆ ನೀರಲ್ಲಿ ಮುಳುಗಿ ಮಂಗ ಮಾಯವಾಗಿ ಬಿಡುತ್ತಾನೆ. ಒಂದೆರಡು ಕ್ಷಣಗಳ ನಂತರ ಕೊಳಚೆ ನೀರಿನಿಂದ ಪುನಃ ಪ್ರತ್ಯಕ್ಷನಾಗುತ್ತಾನೆ. ಈ ದೃಶ್ಯ ನೋಡಿದಾಗ ಎಷ್ಟೇ ನಗು ತಡೆ ಹಿಡಿದರೂ ಕಂಟ್ರೋಲ್ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.
ನೋಡಿ ಈ ವಿಡಿಯೋ…
View this post on Instagram
ಪ್ರಸ್ತುತ ಈ ಹಾಸ್ಯದ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ tanu_shakya_3126 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಈ ವಿಡಿಯೋವನ್ನು ಸಾಕಷ್ಟು ಜನರು ನೋಡಿ ಆನಂದಿಸಿದ್ದಾರೆ.