ಮಕ್ಕಳು ಎಷ್ಟೊಂದು ಕೀಟಕರಾಗಿರುತ್ತಾರೆಂದರೆ ಈ ವಿಡಿಯೋ ನೋಡಿ ಗೊತ್ತಾಗುತ್ತೆ; ತಾಯಿಯ ಹೌ ಹಾರಿಸಿದ ಬಾಲಕ!

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಕೆಲವು ವಿಡಿಯೋಗಳು ನೋಡುಗರ ಮೈ ನಡುಗಿಸುತ್ತವೆ. ಅದರಲ್ಲೂ ಮಸ್ತಿ ಮಾಡುವ ಮಕ್ಕಳ ಅವಿವೇಕಿತನ ಕೆಲವೊಮ್ಮೆ ಪೋಷಕರನ್ನು ತುಂಬಾ ಇಕ್ಕಟ್ಟಿಗೆ ಸಿಲುಕಿಸುತ್ತವೆ. ಸದ್ಯ ಇಲ್ಲಿ ನೋಡುವ ವಿಡಿಯೋ ಪೋಷಕರ ಜೊತೆಗೆ ನಿಮ್ಮನ್ನು ಹೌ ಹಾರಿಸುತ್ತದೆ.

ಪ್ರಸ್ತುತ ವಿಡಿಯೋದಲ್ಲಿ ಮಳೆಯಿಂದಾಗಿ ಮನೆಯ ಮುಂದಿನ ನಾಲೆ ತುಂಬಿ ಹರಿಯುತ್ತಿದೆ. ಈ ದೃಶ್ಯವನ್ನು ಇಬ್ಬರು ಮಹಿಳೆಯರು ತಮ್ಮ ಚಿಕ್ಕ ಮಕ್ಕಳೊಂದಿಗೆ ನೋಡುತ್ತ ನಿಂತಿದ್ದಾರೆ. ಒಬ್ಬಳು ಮಹಿಳೆ ಚಿಕ್ಕ ಮಗುವನ್ನು ನಾಲೆಯ ನೀರಿನಲ್ಲಿ ಇಳಿಸಿ ಮಗುವಿನ ಕಾಲಿಗೆ ನೀರು ತಾಗಿಸಿ ಆಟ ಆಡುತ್ತಿದ್ದಾಳೆ. ಇನ್ನೊಬ್ಬ ಸುಮಾರು ನಾಲ್ಕೈದು ವರ್ಷದ ಮಗ ಅಲ್ಲಿಯೇ ಬದಿಗೆ ನಿಂತು ನೀರನ್ನು ವೀಕ್ಷಿಸುತ್ತಿದ್ದಾನೆ. ತಾಯಿ ಚಿಕ್ಕ ಮಗುವನ್ನು ನೀರಿನಲ್ಲಿ ಆಡಿಸಿ ಮೇಲೆ ಎತ್ತುವಷ್ಟರಲ್ಲಿ ಬದಿಗೆ ನಿಂತ ಬಾಲಕ ಹಿಂದೆ ಮುಂದೆ ಯೋಚಿಸದೆ ಒಮ್ಮೆಲೇ ನೀರಿನಲ್ಲಿ ಧಡಂ ಎಂದು ಜಿಗಿದೇ ಬಿಟ್ಟಿದ್ದಾನೆ. ಆಕಸ್ಮಿಕವಾಗಿ ಘಟಿಸಿದ ಅವಾಂತರದಿಂದ ಬದಿಗೆ ನಿಂತ ತಾಯಿ ಗಾಬರಿಯಲ್ಲಿ ಕೈಯಲ್ಲಿದ್ದ ಪುಟ್ಟ ಮಗುವನ್ನು ಅಲ್ಲಿಯೇ ಎಸೆದು ನೀರಿನಲ್ಲಿ ಧುಮುಕಿದ ಮಗುವನ್ನು ಉಳಿಸಲು ಕ್ಷಣದಲ್ಲಿ ನೀರಿನಲ್ಲಿ ಜಿಗಿದಿದ್ದಾಳೆ. ಈ ದೃಶ್ಯ ನಿಜಕ್ಕೂ ರೋಮಾಂಚನದಿಂದ ಕೂಡಿದೆ. ಇತ್ತ ಬೇರೆ ಮಹಿಳೆಯೊಬ್ಬಳು ಕೆಳಗೆ ಬಿದ್ದ ಪುಟ್ಟ ಮಗುವನ್ನು ಮೇಲೆತ್ತಿದ್ದಾಳೆ. ತಾಯಿ ಮಾತ್ರ ನೀರಿನಲ್ಲಿ ಜಿಗಿದ ಮಗುವನ್ನು ಸುಖರೂಪವಾಗಿ ಉಳಿಸುವಲ್ಲಿ ಯಶಸ್ವಿಯಾಗಿದ್ದಾಳೆ.

ನೋಡಿ ಈ ವಿಡಿಯೋ…

 

View this post on Instagram

 

A post shared by caw caw potret (@caw_caw_potret)

ಪ್ರಸ್ತುತ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ instagram ನಲ್ಲಿ caw_caw_potret ಹೆಸರಿನ ಖಾತೆಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ 5 ಮಿಲಿಯನ್ ವೀಕ್ಷಣೆ ಪಡೆದಿದ್ದು 1 ಲಕ್ಷಕ್ಕೂ ಮೇಲ್ಪಟ್ಟು ಲೈಕ್ಸ್ ಗಳನ್ನು ಪಡೆದಿದೆ.