ಇದು ಯಾವ ರೀತಿಯ ನಡವಳಿಕೆ? ಬಟ್ಟೆಯಿಂದಾಗಿ ಮಕ್ಕಳನ್ನು ರೆಸ್ಟೋರೆಂಟ್‌ನಿಂದ ಹೊರಗೆ ನೂಕಲಾಯಿತು, ವೀಡಿಯೊ ನೋಡಿ ಕೋಪಗೊಂಡ ನೇಟಿಜನ್ಸ್!!
ಫಾಸ್ಟ್ ಫುಡ್ ರೆಸ್ಟೋರೆಂಟ್‌ನಲ್ಲಿ ಕುಳಿತಿದ್ದ ಮೂವರು ಮಕ್ಕಳನ್ನು ಮಾಣಿ(ವೇಟರ್) ಹೊರಗೆಳೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹೈಫೈ ಬಟ್ಟೆ ಹಾಕಿಲ್ಲ ಎಂಬ ಕಾರಣಕ್ಕೆ ಈ ಮಕ್ಕಳನ್ನು ಹೊರ ಹಾಕಿದ್ದಾರೆ ಎನ್ನಲಾಗುತ್ತಿದೆ. ಇದನ್ನು ಯಾರೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಈಗ ಈ ವಿಡಿಯೋ ನೋಡಿ ನೆಟ್ಟಿಗರು ಸಂತಾಪ ವ್ಯಕ್ತ ಮಾಡುತ್ತಿದ್ದಾರೆ. ಮಾಣಿ ಹೊರಗೆ ಹೋಗಿ ಎಂದು ಹೇಳಿದಾಗ ಮಕ್ಕಳ ಮುಖ ಹತಾಶೆಗೊಂಡವು. ಈ ಬಗ್ಗೆ ಹಲವು ನೆಟಿಜನ್‌ಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಅವರ ಬಟ್ಟೆ ಹೇಗೆ ಇರಲಿ, ಒಂದು ವೇಳೆ ತಿನ್ನುವ ಆಹಾರದ ದುಡ್ಡು ಕೊಡುತ್ತಿದ್ದರೆ ಅವರು ಜೊತೆಗೆ ಈ ರೀತಿಯಾಗಿ ನಡೆದುಕೊಳ್ಳುವದು ತಪ್ಪು. ಈ ಘಟನೆ ಫುಟ್ ಚೆನ ರೆಸ್ಟೋರೆಂಟ್ ನಡೆದಿದೆ. ಹೀಗಾಗಿ ಇದನ್ನು ನೋಡಿದ ನೆಟ್ಟಿಗರು ಹತಾಶೆ ವ್ಯಕ್ತ ಪಡಿಸುತ್ತಿದ್ದಾರೆ. ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮೂವರು ಚಿಕ್ಕ ಮಕ್ಕಳು ರೆಸ್ಟೋರೆಂಟ್ ನಲ್ಲಿ ಬಂದು ಏನೋ ತಿನ್ನಲು ಕುಳಿತಿರುತ್ತಾರೆ. ಆದರೆ ಅಲ್ಲಿಂದ ಬಂದ ಒಬ್ಬ ವೇಟರ್ ಇವರನ್ನು ನೋಡಿದ ತದನಂತರ ಮೂವರನ್ನು ಹೊರಗೆ ಹೋಗಲು ಹೇಳುತ್ತಾನೆ.
ವಿಡಿಯೋ ನೋಡಿ
Don’t Know About The Place But If These Kids Have Paid For Something They Should Be Allowed To Sit Inside.
But The Way The Waiter Is Pushing Them Out And Kids Looking At Each Other Shows, We See The Financial Status Of Person And Decide How Much Respcet To Give.
— ਹਤਿੰਦਰ ਸਿੰਘ (@Hatindersinghr3) June 27, 2022
ಈ ಸಮಯದಲ್ಲಿ ಮಕ್ಕಳ ಮುಖ ಕೇಳಗಾಗುತ್ತದೆ. ಆಗ ಮಕ್ಕಳು ಆ ವೇಟರ್ ಕಡೆಗೆ ಹಾಗೆ ನೋಡುತ್ತಿರುತ್ತಾರೆ. ಈ ವಿಡಿಯೋ ಎಲ್ಲಿಂದ ಇದೆ ಎಂಬುದರ ಬಗ್ಗೆ ಇದುವರೆಗೆ ಮಾಹಿತಿ ದೊರೆತಿಲ್ಲ. ರೆಸ್ಟೋರೆಂಟ್ ಅಮೆರಿಕನ್ ಪಿಜ್ಜಾ ಚೆನ Sbrro ಇದೆ. ಭಾರತದಲ್ಲಿ ಈ ಹೆಸರಿನ ಅನೇಕ ಸ್ಟೋರ್ಸ್ಗಳಿವೆ.