T20 WC: ಪಾಕಿಸ್ತಾನದ ಮಹಿಳಾ ಕ್ರಿಕೆಟ್ ಟೀಮ್ ನ ಮಾಜಿ ನಾಯಕಿ ನೀಡಿದರು ವಿರಾಟ್ ಬಗ್ಗೆ ದೊಡ್ಡ ಹೇಳಿಕೆ…
ಪಾಕಿಸ್ತಾನದ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಸನಾ ಮೀರ್ ಅವರು ಭಾರತೀಯ ಕ್ರಿಕೆಟ್ ತಂಡದ ನಾಯಕರಾದ ವಿರಾಟ್ ಕೊಹ್ಲಿ ಅವರಿಗೆ ಬಾಯಿತುಂಬ ಹೊಗಳಿದ್ದಾರೆ. ಸೋಲನ್ನು ಸಂಪೂರ್ಣವಾಗಿ ಹೃದಯದಿಂದ ಸ್ವೀಕರಿಸುವ ಆದರ್ಶ ಆಟಗಾರ ಎಂದು ವಿರಾಟ್ ಕೊಹ್ಲಿ ಅವರನ್ನು ಹೊಗಳಿದ್ದಾರೆ. ಪಾಕಿಸ್ತಾನ ವಿರುದ್ಧದ ಹೀನಾಯ ಸೋಲಿನ ನಂತರವೂ ವಿರಾಟ್ ಕೊಹ್ಲಿ ಮಹಮದ್ ರಿಜವಾನ್ ಅವರನ್ನು ಅಪ್ಪಿಕೊಂಡು ಶುಭಾಶಯಗಳನ್ನು ಕೋರಿದರು. ಹಾಗೆ ಬಾಬರ್ ಆಜಮ್ ಅವರಿಗೂ ಅಭಿನಂದಿಸಿದರು.
T20 ವರ್ಲ್ಡ್ ಕಪ್ ಮೊದಲ ಪಂದ್ಯದಲ್ಲಿಯೇ ಪಾಕಿಸ್ತಾನವು ಭಾರತಕ್ಕೆ 10 ವಿಕೆಟ್ ಗಳಿಂದ ಸೋಲಿಸಿತು. ಇದರ ಜೊತೆಗೆ ಪಾಕಿಸ್ತಾನವು ಭಾರತದ ವಿರುದ್ಧ ವರ್ಲ್ಡ್ ಕಪ್ ನಲ್ಲಿಯ ಸತತವಾದ ಸರಣಿ ಸೋಲಿಗೆ ಅಂತ್ಯ ಹಾಡಿತು.
ಸನಾ ಮೀರ್ ಅವರು ಐಸಿಸಿಯ ಅಧಿಕೃತ ವೆಬ್ಸೈಟ್ ಮೇಲೆ ನೀಡಿದ ತಮ್ಮ ಹೇಳಿಕೆಯಲ್ಲಿ, ವಿರಾಟ್ ಕೊಹ್ಲಿ ಅವರು ಈ ಸೋಲನ್ನು ಸಂಪೂರ್ಣವಾಗಿ ಹೃದಯದಿಂದ ಸ್ವೀಕರಿಸಿದ್ದಾರೆ. ಇದೇ ಒಂದು ದೊಡ್ಡ ಗುಣದಿಂದ ನಾನು ಅವರನ್ನು ಹೊಗಳುತ್ತಿದ್ದೇನೆ. ದೊಡ್ಡ ಆಟಗಾರರು ಈ ರೀತಿಯ ವರ್ತನೆ ಮಾಡುವದು ನಿಜಕ್ಕೂ ತುಂಬಾ ಒಳ್ಳೆಯದು. ವಿಶೇಷವೆಂದರೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಸಹ ವಿರಾಟ್ ಕೊಹ್ಲಿ ಅವರ ಫೋಟೋ ಶೇರ್ ಮಾಡುತ್ತಾ ಅವರನ್ನು ಹೊಗಳಿದೆ.
ಸನಾ ಮೀರ್ ಅವರು, ಇದರಿಂದ ಅವರಲ್ಲಿರುವ ಒಳ್ಳೆಯ ಗುಣಗಳ ಭಾವನೆ ಅರ್ಥವಾಗುತ್ತದೆ ಮತ್ತು ಅವರು ವರ್ಲ್ಡ್ ಕಪ್ ನಲ್ಲಿ ಮತ್ತೆ ಕಂಬ್ಯಾಕ್ ಮಾಡುವಂತಹ ವಿಶ್ವಾಸ ವ್ಯಕ್ತವಾಗುತ್ತದೆ. ಮುಂದಿನ ಪಂದ್ಯಗಳಲ್ಲಿ ಭಾರತ ದೊಡ್ಡ ಜಯಭೇರಿ ಬಾರಿಸಿದರೆ ಆಶ್ಚರ್ಯವೇನೂ ಇಲ್ಲ ಎಂದು ಹೇಳುತ್ತಾರೆ. ನನಗೆ ಅನಿಸುವ ಮಟ್ಟಿಗೆ ಈ ಸ್ಪರ್ಧೆಯಲ್ಲಿ ಭಾರತ ಮತ್ತು ಪಾಕಿಸ್ತಾನ ಮತ್ತೊಮ್ಮೆ ಎದುರಾಗಲಿವೆ ಎಂಬ ಆಶಯವನ್ನು ಸಹ ವ್ಯಕ್ತಪಡಿಸಿದರು.