ತಂದೆ ಆಸ್ತಿ ಮಾರಿದ ಎಷ್ಟು ದಿನದಲ್ಲಿ ಮಕ್ಕಳು ದಾವೆ ಮಾಡಬೇಕು.? ಬರಹವನ್ನು ಓದಿ ಮಾಹಿತಿಯನ್ನು ಪಡೆದುಕೊಳ್ಳಿ.
ತಂದೆ ಮಕ್ಕಳ ಗಮನಕ್ಕೆ ತರದೆ ಆಸ್ತಿಯನ್ನು ಮಾರಾಟ ಮಾಡಿದಾಗ ಎಷ್ಟು ದಿನದ ಒಳಗಾಗಿ ಮಕ್ಕಳು ದಾವೆಯನ್ನು ಮಾಡಬೇಕು ಎಂಬುದು ಹಲವರ ಪ್ರಶ್ನೆ. ಆಸ್ತಿಯನ್ನು ಪಡೆಯಲು ಕಾನೂನಿನ ಅಡಿಯಲ್ಲಿ ಯಾವ ರೀತಿ ಮುನ್ನಡೆಯಬೇಕು ಎಂಬುದರ ಕುರಿತಾಗಿ ಅನುಭವಿ ವಕೀಲರು ನೀಡಿರುವ ಮಾಹಿತಿಯನ್ನು ತಿಳಿದುಕೊಳ್ಳೋಣ.
ಪಿತೃಾರ್ಜಿತ ಆಸ್ತಿಯನ್ನು ತಂದೆಯು ಮಕ್ಕಳ ಗಮನಕ್ಕೆ ಬಾರದಂತೆ ಮಾರಾಟ ಮಾಡಿದಾಗ, ನ್ಯಾಯಯುತವಾಗಿಯೇ ಮಕ್ಕಳು ತಮ್ಮ ಹಕ್ಕನ್ನು ಪಡೆಯಬಹುದು. ಉದಾಹರಣೆಗೆ ಹೊಲದ ಉತಾರೆಯಲ್ಲಿ ತಂದೆಯ ಹೆಸರು ಮಾತ್ರ ಇರುವುದನ್ನು ನಾವು ಸಾಕಷ್ಟು ಬಾರಿ ನೋಡಿರುತ್ತೇವೆ. ಕೆಲವು ಸಮಯದಲ್ಲಿ ಮಕ್ಕಳು ದುಡಿದು ತಂದೆಗೆ ಗೌರವ ಕೊಡುವ ನಿಟ್ಟಿನಲ್ಲಿ ತಂದೆಯ ಹೆಸರನ್ನು ಹಚ್ಚಿರುವುದನ್ನು ನೋಡಿರುತ್ತೇವೆ. ಇನ್ನು ತಂದೆಗೆ ಬಂದಿರುವ ಆಸ್ತಿಯು ಪಿತ್ರಾರ್ಜಿತವಾಗಿದ್ದಲ್ಲಿ ದಾಖಲೆ ಪತ್ರಗಳಲ್ಲಿ ಏಕಮಾತ್ರ ಹೆಸರನ್ನು ಬರೆದಿರುವುದನ್ನು ಕೂಡ ಕಾಣಬಹುದು.
ತಂದೆಯಾದವನು ಯಾವುದೇ ಕಾರಣವಿಲ್ಲದೆ, ಮಕ್ಕಳ ಗಮನಕ್ಕೆ ತರದೆ, ಉತಾರೆಯಲ್ಲಿ ತನ್ನ ಹೆಸರೊಂದೇ ಇದೆ ಎಂಬ ಏಕ ಮಾತ್ರ ಕಾರಣಕ್ಕಾಗಿ ಆಸ್ತಿಯನ್ನು ಬೇರೆಯವರಿಗೆ ಮಾರಾಟ ಮಾಡಿದ್ದಾರೆ ಎಂದುಕೊಳ್ಳಿ. ಅಂತಹ ಸಮಯದಲ್ಲಿ ಮಕ್ಕಳು ಕಾನೂನಾತ್ಮಕವಾಗಿ ಹೋರಾಡಿ ಆಸ್ತಿಯನ್ನು ಮರುಪಡೆಯಲು ಅವಕಾಶಗಳಿವೆ. ಈ ರೀತಿಯಾಗಿ ತಂದೆಯು ಆಸ್ತಿಯನ್ನು ಮಾರಾಟ ಮಾಡಿದ ಸಮಯದಲ್ಲಿ ಮಕ್ಕಳು ತಂದೆಯ ಮೇಲೆ ಹಲ್ಲೆಯನ್ನು ಮಾಡಿರುವ, ಮನೆಯಿಂದ ಹೊರ ಹಾಕಿರುವ ಮತ್ತು ತಂದೆಯನ್ನು ಸಾಯಿಸುವ ಮಟ್ಟಕ್ಕೆ ಇಳಿದಿರುವ ಅನೇಕ ಘಟನೆಗಳು ಗ್ರಾಮೀಣ ಭಾಗದಲ್ಲಿ ಕಂಡು ಬರುತ್ತವೆ.
ಈ ರೀತಿಯ ಸಮಸ್ಯೆಯು ಎದುರಾದಾಗ ಗ್ರಾಮೀಣ ಭಾಗದ ಹಿರಿಯರು ಸೇರಿ ಪಂಚಾಯತಿ ಕಟ್ಟೆಯನ್ನು ಕರೆದು ಸಮಸ್ಯೆಯನ್ನು ಬಗೆಹರಿಸುತ್ತಾರೆ. ಇನ್ನು ಪಂಚಾಯಿತಿಯಲ್ಲಿ ಬಗೆಹರಿಯದೆ ಉಳಿದ ತೊಡಕುಗಳು ಅನಿವಾರ್ಯವಾಗಿ ನ್ಯಾಯಾಲಯದ ಎದುರಲ್ಲಿ ಬಂದಾಗ ಯಾವೆಲ್ಲ ಅವಕಾಶಗಳು ಇವೆ ಎಂಬುದರ ಕುರಿತಾಗಿ ಅರಿವಿರಬೇಕು.ಮುಖ್ಯವಾಗಿ ಗಮನದಲ್ಲಿಡಬೇಕಾದ ವಿಷಯವೆಂದರೆ, ತಂದೆಯು ಆಸ್ತಿಯನ್ನು ಮಾರಾಟ ಮಾಡುವಾಗ ಮಕ್ಕಳು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾಗ ಅಂದರೆ ವಯಸ್ಕರಾಗಿದ್ದಾಗ ನ್ಯಾಯಾಲಯದ ಮೆಟ್ಟಿಲನ್ನು ಏರಬಹುದು.
ತಂದೆಯು ಆಸ್ತಿಯನ್ನು ಮಾರಾಟ ಮಾಡಿದ ದಿನಾಂಕದಿಂದ 3 ವರ್ಷದ ಅವಧಿಯ ಒಳಗಾಗಿ ದಾವೆಯನ್ನು ಹೂಡುವುದರ ಮೂಲಕ ಕಾನೂನಾತ್ಮಕ ನಡೆಯಲ್ಲಿ ತಮ್ಮ ಹಕ್ಕನ್ನು ಅಥವಾ ಆಸ್ತಿಯಲ್ಲಿ ದೊರಕಬೇಕಾದ ಪಾಲನ್ನು ಪಡೆಯಬಹುದು. ಇನ್ನೊಂದು ಸಂಗತಿಯಲ್ಲಿ ಮಕ್ಕಳು 18 ವರ್ಷ ತುಂಬದೇ ಇರುವ ಸಂದರ್ಭದಲ್ಲಿ, ಅಂದರೆ ಮಗು ಅಲ್ಪವಯಿ ಆಗಿದ್ದಾಗ ಎರಡು ನಾಲ್ಕು ಅಥವಾ ಹತ್ತು ವರ್ಷದ ಮಗುವಿದ್ದಾಗ ತಂದೆಯು ಆಸ್ತಿಯನ್ನು ಮಾರಾಟ ಮಾಡಿದ್ದಾರೆ ಎಂದುಕೊಳ್ಳಿ.
ಅಂತಹ ಸಮಯದಲ್ಲಿ ಮಕ್ಕಳು ತಾವು ವಯಸ್ಕರಾದಾಗ ಅಂದರೆ 18 ವರ್ಷ ತುಂಬಿದ ನಂತರದ ಮೂರು ವರ್ಷದ ಒಳಗಾಗಿ ನ್ಯಾಯಾಲಯದಲ್ಲಿ ಮರು ಆಸ್ತಿ ಪಡೆಯಲು ದಾವೆಯನ್ನು ಹೂಡಬಹುದು. ಈ ರೀತಿಯಾಗಿ ಕಾನೂನು ಎಲ್ಲರೂ ತಮ್ಮ ಆಸ್ತಿಯನ್ನು ಪಡೆಯುವಲ್ಲಿ ಅವಕಾಶಗಳನ್ನು ನೀಡಿರುತ್ತದೆ. ಲಿಮಿಟೇಶನ್ ಆಕ್ಟ್ ಎಂಬ ಕಾನೂನಿನ ಅಡಿಯಲ್ಲಿ ಈ ರೀತಿಯ ಪ್ರಕರಣಗಳು ನಡೆಯುತ್ತವೆ.
ಇನ್ನು ತಂದೆಯು ಅನಿವಾರ್ಯ ಕಾರಣದಿಂದಾಗಿ ಆಸ್ತಿಯನ್ನು ಮಾರಾಟ ಮಾಡುವ ಸಂದರ್ಭ ಬಂದರೆ ಅಂತಹ ಸಮಯದಲ್ಲಿ ತಂದೆಯಾದವನು ನ್ಯಾಯಾಲಯದಲ್ಲಿ ಸಕಾರಣವನ್ನು ನೀಡಿ ದಾವೆಯಲ್ಲಿ ಮಕ್ಕಳ ಹೆಸರನ್ನು ತೋರಿಸಿ ಮಾರಾಟ ಮಾಡುವ ಅವಕಾಶವಿದೆ. ಇಂತಹ ಹತ್ತಾರು ಸಮಸ್ಯೆಗಳನ್ನು ಸಾರ್ವಜನಿಕ ರಂಗವು ಎದುರಿಸುತ್ತಿದೆ. ಅನುಭವಿ ವಕೀಲರ ಹೇಳಿಕೆಗಳನ್ನು ಬಿತ್ತರಿಸುವ ಈ ಲೇಖನವು ಉಪಯುಕ್ತ ಮಾಹಿತಿಗಳನ್ನು ಒಳಗೊಂಡಿದೆ. ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ತಪ್ಪದೇ ವಿಡಿಯೋವನ್ನು ವೀಕ್ಷಿಸಿ.
ವೀಡಿಯೋ ನೋಡಿ.