ತನ್ನನ್ನು ನುಂಗಿದ ಪಕ್ಷಿಯ ಹೊಟ್ಟೆ ಸೀಳಿಕೊಂಡು ಹೊರ ಬಂದ ಹಾವು: ಆಗಸದಲ್ಲಿ ಕಂಡ ವಿಸ್ಮಯ ಇದು

ಕೆಲವೊಂದು ಫೋಟೋಗಳು ಅಥವಾ ಕೆಲವು ದೃಶ್ಯಗಳು ನಿಜಕ್ಕೂ ಊಹೆಗೆ ಮೀರಿದ್ದು ಅಥವಾ ನಾವು ಊಹೆಗೆ ನಿಲುಕದ್ದು ಎಂದೇ ಹೇಳಬಹುದು ಎನ್ನುವಂತೆ ಕಾಣುತ್ತದೆ. ಇಂತಹ ದೃಶ್ಯಗಳು ಕೂಡಾ ಅಪರೂಪಕ್ಕೆ ನಮಗೆ ಕಾಣುತ್ತದೆ. ಆಗ ಆ ದೃಶ್ಯಗಳನ್ನು ನಾವು ಜಾಣ್ಮೆಯಿಂದ ಕ್ಯಾಮೆರಾ ಸಹಾಯದಿಂದ ಸೆ ರೆ ಹಿಡಿದರೆ ಅದು ಕೂಡಾ ಒಂದು ಅದ್ಭುತವೇ ಆಗಿ ಬಿಡುತ್ತದೆ. ಇಂತಹುದೊಂದು ಅದ್ಭುತವಾದ, ಊಹೆಗೂ ನಿಲುಕದ ಸನ್ನಿವೇಶವನ್ನು ಅಮೆರಿಕಾದ ಫೋಟೋಗ್ರಾಫರ್ ಒಬ್ಬರು ಸೆರೆ ಹಿಡಿದಿದ್ದು ಎನ್ನಲಾಗಿದ್ದು, ಇದು ನಿಜಕ್ಕೂ ರೋಚಕ ಮತ್ತು ಬಹುದೊಡ್ಡ ವಿಸ್ಮಯ ಎನ್ನುವಂತೆ ಕಾಣುವುದನ್ನು ನಾವು ಕೂಡಾ ಗಮನಿಸಬಹುದಾಗಿದೆ‌.

ಅಮೆರಿಕಾದಲ್ಲಿ ಸ್ಯಾನ್ ಡೇವಿಸ್ ಎನ್ನುವ ಹೆಸರಿನ ಫೋಟೋಗ್ರಾಫರ್ ಒಬ್ಬರು ಕೆಲವು ದಿನಗಳ ಹಿಂದೆ ಮೇರಿ ಲ್ಯಾಂಡ್ ನ ಅರಣ್ಯಗಳಲ್ಲಿನ ಅದ್ಭುತ ಜೀವಿಗಳ ಫೋಟೋಗಳನ್ನು ತೆಗೆಯಲೆಂದು ಹೋಗಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿ ಅವರು ನಿಜಕ್ಕೂ ಊಹೆ ಕೂಡಾ ಮಾಡಿರದಂತಹ ಒಂದು ಘಟನೆಯು ಅವರ ಗಮನ ಸೆಳೆದಿದೆ. ಡೇವಿಸ್ ತನ್ನ ಕ್ಯಾಮೆರಾ ದಲ್ಲಿ ಬ್ಯುಸಿಯಾಗಿದ್ದ ಸಂದರ್ಭದಲ್ಲಿ ಅಚಾನಕ್ಕಾಗಿ ಅವರ ನೋಟ ಆಗಸದ ಕಡೆಗೆ ಹೋಗಿದೆ. ಆಗ ಅವರಿಗೆ ಅಲ್ಲಿ ಕಂಡಿದ್ದು ಒಂದು ಹಾರಿ ಬರುತ್ತಿದ್ದ ಹೆರಾನ್ ಹಕ್ಕಿ (ನಾರಾಯಣ ಪಕ್ಷಿ) ಒಂದು ಕಂಡಿದೆ. ಹಾರುವ ಹೆರಾನ್ ಹಕ್ಕಿಯನ್ನು ನೋಡುವುದರಲ್ಲಿ ನಿಜಕ್ಕೂ ವಿಶೇಷ ಎನ್ನುವುದು ಇರಲಿಲ್ಲ.

ಆದರೆ ಅಲ್ಲಿ ಒಂದು ದಿ ಗ್ಭ್ರಾಂ ತಿ ಗೊಳಿಸುವ ದೃಶ್ಯ ಕೂಡಾ ಕಂಡಿದೆ. ಅದೇನೆಂದರೆ ಆ ಹಕ್ಕಿಯ ಹೊಟ್ಟೆಯ ಭಾಗದಲ್ಲಿ ಒಂದು ಜೀವಂತ ಹಾವು ಕಂಡಿದೆ. ಮೊದಲು ಆ ದೃಶ್ಯವನ್ನು ನೋಡಿದ ಡೇವಿಸ್ ಬಹುಶಃ ಹೆರಾನ್ ಹಕ್ಕಿಯು ಯಾವುದೇ ಹಾವನ್ನು ಬೇಟೆಯಾಡಿ ಅದನ್ನು ಎತ್ತಿಕೊಂಡು ಹಾರಿ ಹೋಗುತ್ತಿದೆ ಎಂದು ಕೊಂಡಿದ್ದಾರೆ. ಆದರೆ ಹಕ್ಕಿಯು ಇನ್ನಷ್ಟು ಹತ್ತಿರಕ್ಕೆ ಬಂದು ಸ್ಪಷ್ಟವಾಗಿ ಕಂಡಾಗ ಡೇವಿಸ್ ಕೂಡಾ ಒಂದು ಕ್ಷಣ ಶಾ ಕ್ ಆಗಿದ್ದಾರೆ ಏಕೆಂದರೆ ಅದು ಹೆರಾನ್ ಹಿಡಿದುಕೊಂಡ ಹಾವಾಗಿರಲಿಲ್ಲ, ಬದಲಾಗಿ ಹೆರಾನ್ ನುಂಗಿದ್ದ ಹಾವು ಆ ಹಕ್ಕಿಯ ಹೊಟ್ಟೆಯನ್ನು ಸೀಳಿಕೊಂಡು ಬರುತ್ತಿರುವುದು ಕಂಡಿದೆ.

ಹಾವು ಹೆರಾನ್ ನ ಹೊಟ್ಟೆ ಸೀಳಿಕೊಂಡು ಹೊರಗೆ ಬರುತ್ತಿದ್ದರೂ ಕೂಡಾ ಅದು ಇನ್ನೂ ಹಾರುತ್ತಲೇ ಇರುವುದನ್ನು ಫೋಟೋಗ್ರಾಫರ್ ಗಮನಿಸಿದ್ದಾರೆ. ಹೆರಾನ್ ಹೊಟ್ಟೆಯಿಂದ ಹೊರ ಬಂದ ಹಾವು ಈಲ್ ಪ್ರಭೇದಕ್ಕೆ ಸೇರಿದ್ದು ಎನ್ನಲಾಗಿದ್ದು, ಇವು ಸಾಮಾನ್ಯವಾಗಿ ಸಮುದ್ರ ತೀರಗಳಲ್ಲಿ ಹಾಗೂ ಕೆಸರಿನಲ್ಲಿ ಕಂಡು ಬರುತ್ತದೆ ಎನ್ನಲಾಗಿದೆ. ಇವುಗಳ ಬಾಲ ಬಹಳ ಮೊನಚಾಗಿದ್ದು, ಅವು ತಮ್ಮನ್ನು ಯಾವುದಾದರೂ ಜೀವಿ ನುಂಗಿದರೆ ಜೀರ್ಣವಾಗುವ ಮೊನ್ನವೇ ಹೊರಗೆ ಬರಲು ಪ್ರಯತ್ನ ಮಾಡುತ್ತಾ ತಮ್ಮ ಮೊನಚಾದ ಬಾಲವನ್ನು ಬಳಸಿ ಹೊಟ್ಟೆ ಕತ್ತರಿಸಿ ಹೊರಗೆ ಬರಲು ಪ್ರಯತ್ನವನ್ನು ಮಾಡುತ್ತವೆ.

ಹೀಗೆಯೇ ಹೆರಾನ್ ಹಕ್ಕಿಯು ಈಲ್ ಅನ್ನು ನುಂಗಿದ್ದು ಅದು ಅದರ ಹೊಟ್ಟೆ ಸೀಳಿ ಹೊರಬಂದಿದೆ. ಆದರೆ ಇಲ್ಲಿ ವಿಚಿತ್ರ ಏನೆಂದರೆ ಸಾಮಾನ್ಯವಾಗಿ ಆ ರೀತಿ ತೀ ವ್ರ ವಾದ ಗಾಯವಾದರೆ ಯಾವುದೇ ಜೀವಿಯೇ ಆಗಲೀ ಕೂಡಲೇ ಪ್ರಾಣ ಬಿಡುತ್ತದೆ. ಆದರೆ ಇಲ್ಲಿ ಹೆರಾನ್ ಅಷ್ಟು ಗಾಯವಾಗಿದ್ದರೂ ಕೂಡಾ ಹಾರುತ್ತಿರುವುದನ್ನು ನೋಡಿ ಫೋಟೋ ಗ್ರಫರ್ ಸ್ಯಾನ್ ಡೇವಿಸ್ ನಿಜಕ್ಕೂ ಊಹೆಗೆ ನಿಲುಕದ್ದು ಹಾಗೂ ಹೆರಾನ್ ಹಕ್ಕಿಯ ಸಾಮರ್ಥ್ಯ ಎಂತದ್ದು ಎನ್ನುವುದನ್ನು ತಿಳಿಸಿರುವಂತೆ ಕಂಡಿದೆ.