TATA IPL-22 ರ ‘ಎಲ್ಲಕ್ಕೂ ದುಬಾರಿ ತಂಡ ಯಾವುದು? ಅದರ ಪರ್ಫಾರ್ಮೆನ್ಸ್ ಏನು’? ಟ್ಯಾಲಿ ಮಾಡಿದಾಗ ತಮಾಷೆ.
ಅಂತೂ ಇಂತೂ ಹಾಗೂ ಹೀಗೂ ನಮ್ಮ RCB ಒಟ್ಟಿನಲ್ಲಿ ಪ್ಲೆ ಆಫ್ ರೌಂಡ್ ತಲುಪಿತು. ಇನ್ನು ಮುಂದಿನ ಮೂರು ಪಂದ್ಯಗಳಲ್ಲಿ ಗೆದ್ದು ಮೊದಲ ಐಪಿಎಲ್ ಕಪ್ ಮುಡಿಗೇರಿಸಿ ಸಂಭ್ರಮಿಸುವ ಅವಕಾಶ ಕನ್ನಡಿಗರಿಗೆ ಸಿಗಲಿ.
ಇನ್ನು ಮಹತ್ವದ ವಿಷಯ ಈ ಐಪಿಎಲ್ ಬಗ್ಗೆ ಹೇಳಬೇಕಾದರೆ, ಫ್ರೆಂಚೈಸಿಗಳು ತಮ್ಮ ಈ ತಂಡವನ್ನು ಖರೀದಿಸುವ ಸಲುವಾಗಿ ಎಷ್ಟೊಂದು ಹಣವನ್ನು ಸುರಿದಿದ್ದಾರೆ ಎಂಬ ಮಾಹಿತಿಯನ್ನು ನಿಮಗಾಗಿ ಈ ಲೇಖನದಲ್ಲಿ ತಂದಿದ್ದೇವೆ. ಜೊತೆಗೆ ಆಟದಲ್ಲಿ ಆ ತಂಡಗಳು ಹಚ್ಚಿದ ದೀಪವೇಷ್ಟು ಎರಡನ್ನೂ ತಾಳೆ ಹಾಕಿ ನೋಡಲಾಗಿ ನಿಜಕ್ಕೂ ತಮಾಷೆ ಎನಿಸುತ್ತದೆ. ಹಣದ ಹೊಳೆಯನ್ನೇ ಸುರಿದು ಖರೀದಿಸಿದ ತಂಡ ಪರ್ಫಾರ್ಮನ್ಸ್ ನಲ್ಲಿ ಪಾತಾಳಕ್ಕೆ ಹೋಗಿ ಮುಟ್ಟಿದರೆ, ಎಲ್ಲ ತಂಡಗಳಿಗಿಂತಲೂ ಕಡಿಮೆ ಹಣದಲ್ಲಿ ಖರೀದಿಸಿದ ತಂಡಗಳು ಆಟದ ಪ್ರದರ್ಶನದಲ್ಲಿ ಮಾತ್ರ ಮೇರು ಪಂಕ್ತಿಯಲ್ಲಿ ಸ್ಥಾನ ಪಡೆದಿವೆ.

ಸದ್ಯ ಮೇ 23 ರ ಪ್ರಕಾರ ವಿಚಾರ ಮಾಡಲಾಗಿ, ಫ್ರಾಂಚೈಸಿಗಳು ತಮ್ಮ ತಂಡವನ್ನು ಕಟ್ಟುವ ಸಲುವಾಗಿ ಕೋಟ್ಯಾವಧಿ ರೂಪಾಯಿಗಳ ಹಣವನ್ನು ಸುರಿಸಿದ್ದಾರೆ. ಖರೀದಿಯಲ್ಲಿ ಸಾಕಷ್ಟು ಹಣವನ್ನು ಸುರಿದು ಖರೀದಿಸಿ ಮೊದಲ ಸಾಲಿನಲ್ಲಿದ್ದ ತಂಡಗಳು ಸದ್ಯದ ಸಮಯದಲ್ಲಿ ಪರ್ಫಾರ್ಮನ್ಸ್ ಲಿಸ್ಟ್ ನಲ್ಲಿ ಮಾತ್ರ ಕೆಳಗಿನಿಂದ ನಂಬರ್ ಹೊಡೆದಿವೆ. ಇದು ಒಂದು ರೀತಿಯಲ್ಲಿ ತಮಾಷೆಯ ವಿಷಯವೇ ಆಗಿದೆ. ಹಣದ ವಿಷಯದಲ್ಲಿ ತುಂಬಾ ಕಡಿಮೆ ಬೆಲೆಗೆ ಖರೀದಿಸಿದ ತಂಡ ಮಾತ್ರ ಆಟದ ಪರ್ಫಾರ್ಮನ್ಸ್ ನಲ್ಲಿ ಮೇಲಿನ ನಂಬರ್ ಗಿಟ್ಟಿಸಿವೆ. ಕ್ರಿಕೆಟ್ ಆಟದ ಬಗ್ಗೆ ಹೇಳಬೇಕಾದರೆ ನಿಜವಾಗಿಯೂ ಇದೊಂದು ಅನಿಶ್ಚಿತವಾದ ಆಟವಾಗಿದೆ. ಇಲ್ಲಿ ಯಾವ ತಂಡ ಯಾವಾಗ ಪ್ರಾಬಲ್ಯ ಮೆರೆಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅದಕ್ಕೆ ಉದಾಹರಣೆಯೇ ಈ ಐಪಿಎಲ್.
TATA IPL-22 ತಂಡ & ಖರೀದಿಸಿದ ಬೆಲೆ.
