Articles

‘ಕಚ್ಚಾ ಬದಾಮ್’ ಹಾಡಿಗೆ ಸ್ಟೆಪ್ ಹಾಕಿದ ನಾಯಿಮರಿ: “ಸೂಪರ್ ಸ್ಟೆಪ್” ಎಂದು ಹೊಗಳಿದ ನೆಟ್ಟಿಗರು!!!.

 

ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿರುವ ಹಾಡು ಎಂದರೆ ಅದು ‘ಕಚ್ಚಾ ಬದಾಮ್’ ಸಾಂಗ್. ಈ ಹಾಡನ್ನು ಒಬ್ಬ ಕಡಲೆಕಾಯಿ ವ್ಯಪಾರಿ ತನ್ನ ವ್ಯಾಪಾರ್ ಚೆನ್ನಾಗಿ ಆಗಬೇಕು ಎಂಬ ಉದ್ದೇಶದಿಂದ ಸ್ವತಃ ಹಾಡು ರಚಿಸಿ ಹಾಡಿದ್ದನೆ. ಆದರೆ ಆ ವ್ಯಕ್ತಿಯ ಹಾಡು ಇಷ್ಟೊಂದು ಹಿಟ್ ಆಗುತ್ತೆ ಅಂತ ಆತ ಕನಸ್ಸಿನಲ್ಲಿಯೂ ಸಹ ಅಂದು ಕೊಂಡಿರಲಿಲ್ಲ. ಈ ಹಾಡಿನಿಂದ ಆ ವ್ಯಕ್ತಿ ಸಹ ಫೇಮಸ್ ಆಗಿದ್ದಾನೆ. ಈ ಹಾಡನ್ನು ಬುಬನ್ ಬಡೇಕರ್ ಎಂಬ ವ್ಯಕ್ತಿ ಹಾಡಿದ್ದನೆ. ಪ್ರಸ್ತುತ ಹಾಡು ಬಂಗಾಲಿ ಭಾಷೆಯಲ್ಲಿದ್ದು ಸದ್ಯಕ್ಕೆ ಟ್ರೆಂಡ್ ಆಗಿದೆ. ಈ ಹಾಡಿಗೆ ಸ್ಟೆಪ್ ಹಾಕದೆ ಯಾವುದೇ ವ್ಯಕ್ತಿ ಉಳಿದಿಲ್ಲ. ಕೆಲವು ಪ್ರಸಿದ್ಧ ವ್ಯಕ್ತಿಗಳು ಸಹ ಈ ಹಾಡಿಗೆ ಸ್ಟೆಪ್ ಹಾಕಿದ್ದಾರೆ.

ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಈ ಹಾಡಿನ ರೀಲ್ಸ್ ಗಳು ತುಂಬಾನೇ ವೈರಲ್ ಆಗುತ್ತಿವೆ. ಮನುಷ್ಯ ತನ್ನ ಇಷ್ಟ ಬಂದ ಹಾಡಿಗೆ ಸ್ಟೆಪ್ ಹಾಕುವದು ಸಾಮಾನ್ಯವಾದ ಸಂಗತಿ ಆದರೆ ಕೆಲವು ಪ್ರಾಣಿಗಳು ಸಹ ಕೆಲವೊಂದು ಹಾಡಿಗೆ ಸ್ಟೆಪ್ ಹಾಕುತ್ತವೇ ಅಂದರೆ ಡ್ಯಾನ್ಸ್ ಮಾಡುತ್ತವೆ. ಸದ್ಯಕ್ಕೆ ಅಂತಹದೇ ಒಂದು ಪ್ರಾಣಿಯ ಡ್ಯಾನ್ಸ್ ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಪ್ರಸ್ತುತ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಒಂದು ನಾಯಿಮರಿ ಕಚ್ಚಾ ಬದಾಮ್ ಹಾಡಿಗೆ ಸ್ಟೆಪ್ ಹಾಕಿದೆ. ಈ ನಾಯಿಯ ಡ್ಯಾನ್ಸ್ ನೋಡಿದರೆ ನೀವು ನಗದೆ ಇರಲಾರಿರಿ. ಈ ನಾಯಿಮರಿ ಮಾಡಿದ ಸ್ಟೆಪ್ ತುಂಬಾನೇ ವಿಭಿನ್ನವಾಗಿದೆ. ನಾಯಿಮರಿ ಮಾಡುವ ಈ ಡ್ಯಾನ್ಸ್ ನಲ್ಲಿ ಮೊದಲಿಗೆ ಕಚ್ಚಾ ಬದಾಮ್ ಹಾಡಿನ ಕೆಲವು ಸ್ಟೆಪ್ ಗಳಿವೆ ತದನಂತರ ಮ್ಯೂಜಿಕ ಬದಲಾಗುತ್ತೆ. ಆದರೂ ಸಹ ನಾಯಿಮರಿ ಆ ಬದಲಾದ ಸಾಂಗ್ ಮೇಲೆ ಡ್ಯಾನ್ಸ್ ಮಾಡುತ್ತೆ.

ಪ್ರಸ್ತುತ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ dogsslovers ಎಂಬ ಹೆಸರಿನ ಖಾತೆಯ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ವೀಡಿಯೋವನ್ನು ಮಿಲಿಯನ್ ಗಿಂತಲೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಅಷ್ಟೇ ಅಲ್ಲ ಸುಮಾರು ಎರಡೂವರೆ ಲಕ್ಷಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಸಾವಿರಕ್ಕೂ ಹೆಚ್ಚು ಜನರು ಕಾಮೆಂಟ್ ಮಾಡಿದ್ದಾರೆ. ಪ್ರತಿಯೊಬ್ಬರು ನಾಯಿಮರಿಯ ಸ್ಟೆಪ್ ಕುರಿತು ಹೊಗಳಿದ್ದಾರೆ. ಒಬ್ಬ ನೆಟ್ಟಿಗ ‘ಸೂಪರ್ ಸ್ಟೆಪ್’ ಎಂದು ಕಾಮೆಂಟ್ ಮಾಡಿದ್ದಾನೆ. ಮತ್ತೊಬ್ಬ ‘ ಈ ತರನು ಸ್ಟೆಪ್ ಮಾಡಬಹುದು ಅಂತ ನನಗೆ ಗೊತ್ತೇ ಇರಲಿಲ್ಲ’ ಅಂತ ಕಾಮೆಂಟ್ ಮಾಡಿದ್ದಾನೆ.

ವೀಡಿಯೋ ನೋಡಿ.

 

View this post on Instagram

 

A post shared by Dog lovers | pets (@dogloversshub)

 

Leave a Comment

Your email address will not be published. Required fields are marked *