ಕಸ್ಟಮರ್ ನಮ್ಮ ಬಳಿ ಸುಳಿಯುತ್ತಿಲ್ಲ, ಊಟ ಹಂಚುವ ಕಡೆ ಹೋದರೆ ಬೈದು ಕಳಿಸುತ್ತಾರೆ : ಲಾಕ್ ಡೌನ್ ನಿಂದ ಬದುಕುವುದೇ ದುಸ್ತರವಾಗಿರುವ ವೇ”ಶ್ಯಾ’ವೃತ್ತಿಯವರ ಅಳಲು

ಇಡೀ ವಿಶ್ವವನ್ನೇ ನಡುಗಿಸಿರುವ ಕರೋನ ಎಂಬ ಹೆಮ್ಮಾರಿಯ ಭಾರತದಲ್ಲಿನ ಎರಡನೇ ಅಲೆಯಿಂದಾಗಿ ಎಲ್ಲಾ ಜನರ ಜೀವನದ ಮೇಲೂ ಮೊದಲ ಅಲೆಗಿಂತಲೂ ಬಹಳ ಕೆಟ್ಟ ಪರಿಣಾಮ ಬೀರುತ್ತಿದೆ. ಅದರಲ್ಲೂ ವೇ'”ಶ್ಯೆಯರ ಜೀವನ ಎಲ್ಲರಿಗಿಂತಲೂ ಬಹಳಷ್ಟು ಬಿಗಡಾಯಿಸಿದೆ. ಏಕೆಂದರೆ ಕಾರಣ ನಿಮ್ಮೆಲ್ಲರಿಗೂ ಗೊತ್ತೇ ಇದೆ. ಮನೆಯ ಸದಸ್ಯರ ಮೇಲೆಯೇ ನಂಬಿಕೆ ಇಡದ ಪರಿಸ್ಥಿತಿ ಸದ್ಯ ನಿರ್ಮಾಣವಾಗಿದೆ. ಅಂಥದ್ರಲ್ಲಿ ಇವರುಗಳ ಬಳಿ ಯಾರು ಸುಳಿಯಬೇಕು?

ಇಂತಹ ಕಾರ್ಯಕರ್ತೆಯರಲ್ಲಿ ಒಬ್ಬ 19 ವರ್ಷ ವಯಸ್ಸಿನ ಯುವತಿಯ ಒಂದು ನೋವಿನ ಕಥೆಯ ವಿಡಿಯೋ ವೈರಲ್ ಆಗಿದ್ದು, ಅವಳ ಕಥೆ ಎಲ್ಲರ ಮನಸ್ಸನ್ನು ಘಾ’ಸಿ ಮಾಡುತ್ತಿದೆ, 12 ವರ್ಷ ವಯಸ್ಸಿದ್ದಾಗ ಅವಳನ್ನು ಜಾರ್ಖಂಡ್ ರಾಜ್ಯದಿಂದ ಅ’ಪ’ಹ’ರಿ’ಸಿ ಬಿಹಾರಕ್ಕೆ ತರಲಾಗಿತ್ತಂತೆ. ಬನ್ನಿ ನೋಡೋಣ ಅವಳಂತಹ ಇನ್ನೂ ಅನೇಕರ ಕರುನಾಜನಕ ಕಥೆಯನ್ನು…

ಬಿಹಾರಕ್ಕೆ ತಂದ ಮೇಲೆ ಅವಳಿಗೆ ಬರೋಬ್ಬರಿ 7 ವರ್ಷ ದೈ’ಹಿ’ಕ ಮಾ’ನ’ಸಿ’ಕ ಹಿಂ’”ಸೆ ನೀಡಿದ್ದಲ್ಲದೆ ಅವಳನ್ನು ಬ’ಲ’ವಂ’ತವಾಗಿ ಆರ್ಕೆಸ್ಟ್ರಾದಲ್ಲಿ ಡಾನ್ಸ್ ಮಾಡಲು ಒಂದೆಡೆಯಿಂದ ಮತ್ತೊಂದೆಡೆಗೆ ತೆಗೆದುಕೊಂಡು ಹೋಗುತ್ತಿದ್ದರಂತೆ. ಹೀಗೆ ಹೋಗುವಾಗ ಅವಳಿಗೆ ಯಾರೋ ಪುಣ್ಯಾತ್ಮರ ಕಡೆಯಿಂದ ಮಿಷನ್ ಮುಕ್ತಿ ಫೌಂಡೇಶನ್ ಎಂಬ NGO ದ ಡೈರೆಕ್ಟರ್ ವೀರೇಂದ್ರ ಕುಮಾರ್ ಸಿಂಹರವರ ಕಾಂಟಾಕ್ಟ್ ನಂಬರ್ ಸಿಕ್ಕಿತ್ತು.

ಅದ್ಹೇಗೋ ಅವರಿಗೆ ಕರೆ ಮಾಡಿ ತನ್ನ ಗೋಳು ತೋಡಿಕೊಂಡು ತನಗೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದಳು. ನಂತರ ವೀರೇಂದ್ರ ಕುಮಾರ್ ಅವರನ್ನು ಇನ್ನಿಲ್ಲದಂತೆ ಹುಡುಕಿ, ಪೊಲೀಸರ ಸಹಾಯದಿಂದ ಅವಳನ್ನು ಬಿಡಿಸಿಕೊಂಡು ಬಂದಿದ್ದಾರೆ.

ಕರೋನ ಮಹಾಮಾರಿಯು ಹಾಗೂ ಇದರಿಂದಾಗುತ್ತಿರುವ ಲಾಕ್ ಡೌನ್ ನಿಂದಾಗಿ ಮಹಿಳೆಯರನ್ನು ಹಾಗೂ ಹುಡುಗಿಯರನ್ನು ಕ’’ಳ್ಳ ಸಾ’ಗಾ”ಣಿ’ಕೆ ಮಾಡುತ್ತಿದ್ದವರ ಹಿಡಿತದಿಂದ ಹೊರ ತರಲು ಒಂದೊಳ್ಳೆ ಅವಕಾಶವಾಗಿರುವದರಿಂದ ಇದರ ಉಪಯೋಗವನ್ನು ಮಾನವ ಹಕ್ಕುಗಳ ಹೋರಾಟಗಾರರು ಸಂಪೂರ್ಣ ಪಡೆದು ಅಂತಹ ಶೋ’ಷಿ’ತ ಮಹಿಳೆಯರನ್ನು ಬಿಡಿಸುತ್ತಿದ್ದಾರೆ.

ಅಷ್ಟೇ ಅಲ್ಲದೇ Anti trafficking ಸಂಘಟನೆಗಳಿಗೆ ಈ ಕ’ಳ್ಳ’ಸಾ’ಗಾ’ಣಿ’ಕೆ’ದಾ’ರ’ರನ್ನು ತಡೆಯಲು ಒಂದು ಅವಕಾಶ ಸಿಕ್ಕಂತಾಗಿದೆ. ವೀರೇಂದ್ರ ಕುಮಾರ್ ಅವರು ಹಿಂದೂಸ್ತಾನ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ, ಮೊದಲ ಅಲೆಯ ಕರೋನ ಮಹಾಮಾರಿಯ ಸಮಯದಲ್ಲಾದ ಲಾಕ್ ಡೌನ್ ಸಮಯದಲ್ಲಾದ ಸಮಸ್ಯೆಯನ್ನು ವಯಸ್ಸಿನ ಹೆಣ್ಣುಮಕ್ಕಳನ್ನು ಈ ದಂ’ಧೆಯ ಬಲೆಗೆ ಬೀಳಿಸಿಕೊಳ್ಳಲು ಒಂದೊಳ್ಳೆ ಅವಕಾಶವಾಗಿ ಬಳಸಿಕೊಳ್ಳುತ್ತಿವೆ.

ಏಕೆಂದರೆ ಗಂಡುಮಕ್ಕಳಿಗೆ ಕೆಲಸವಿಲ್ಲದ ಕಾರಣ ಹೆಣ್ಣುಮಕ್ಕಳು ಅನಿವಾರ್ಯವಾಗಿ ಮನೆಯನ್ನು ನಡೆಸಲು ಸಣ್ಣ ಪುಟ್ಟ ಕೆಲಸ ಮಾಡಲು ಹೊರಗೆ ಹೋಗುತ್ತಾರೆ, ಇದೆ ಅವಕಾಶ ಬಳಸಿಕೊಳ್ಳುತ್ತಿದ್ದಾರೆ ಈ ಆ’ಗಂ’ತು’ಕರು. ವೀರೇಂದ್ರ ಸಿಂಹ ಅವರು ಹೇಳುವ ಪ್ರಕಾರ, ಹೀಗೆ ಅ’ಪ’ಹ’ರಿ’ಸಿ’ದ ಯುವತಿಯರನ್ನು ಹಾಗೂ ಮಹಿಳೆಯರನ್ನು ವಾಟ್ಸಪ್ಪ್ ಚಾಟ್ ಗ್ರೂಪ್, ಮಸಾಜಿಂಗ್ ಸೆಂಟರ್ ಹಾಗೂ ಸ್ಪಾ ಗಳಲ್ಲಿ ಕೆಲಸ ಮಾಡಲು ತಳ್ಳುತ್ತಾರೆ.

ಇದೆ ವರ್ಷದ ಮಾರ್ಚ್ ನಲ್ಲಿ ಕರೋನ ಎರಡನೇ ಅಲೆಯ ಹೊಡೆತದಿಂದ ಈ ಎಲ್ಲಾ ದಂ’ಧೆಗಳು ನಲುಗಿ ಹೋಗಿದ್ದವು, ಇಂತ ಸಮಯದ ಲಾಭ ಪಡೆದ ವೀರೇಂದ್ರ ಸಿಂಹ ಅವರು 14 ಮಹಿಳೆಯರನ್ನು ರಕ್ಷಿಸಿದ್ದಾರೆ. ಅದರಲ್ಲಿ ಹೆಚ್ಚು ಮಹಿಳೆಯರು ಪಶ್ಚಿಮ ಬಂಗಾಲದವರಾಗಿದ್ದಾರೆ. ಇವರಲ್ಲಿ ಎರಡು ಮಕ್ಕಳ ತಾಯಿ ಕೂಡ ಇರುವುದು ವಿಪರ್ಯಾಸ! ಆ ಮಹಿಳೆಗೆ ರೆಸ್ಟೋರೆಂಟ್ ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಕರೆತಂದಿದ್ದರಂತೆ.

ಇನ್ನೂ ಈ ರೀತಿ ಬಿಡುಗಡೆ ಹೊಂದಿದ ಇಂತಹ ಅನೇಕ ಮಹಿಳೆಯರು ಈ NGO ಗೆ ಅಭಾರಿಯಾಗಿದ್ದಾರೆ, ಆದರೆ ಅವರ ಸಮಸ್ಯೆಗಳು ಬಹಳಷ್ಟು ಇವೆ, ಕೇವಲ ಗ್ಯಾಸ್ ಸಿಲಿಂಡರ್ ತುಂಬಿಸಿಕೊಳ್ಳಲು ಸಹ ದುಡ್ಡು ಇಲ್ಲದ ಪರಿಸ್ಥಿತಿಯಲ್ಲಿದ್ದಾರೆ. ತಮ್ಮ ಮಕ್ಕಳಿಗೆ ತಾವೇನು ಕೆಲಸ ಮಾಡುತ್ತೇವೆಂದು ತಿಳಿಯಬಾರದೆಂದು ಇವರು ಬಾಡಿಗೆಗೆ ಕೋಣೆಯನ್ನು ಹಿಡಿದು ಅವರನ್ನು ಅಲ್ಲಿಯೇ ಸಾಕುತ್ತಿದ್ದಾರೆ. ಆದರೆ ಎರಡು ತಿಂಗಳುಗಳಿಂದ ಆ ಕೋಣೆಗಳಿಗೂ ಸಹ ಬಾಡಿಗೆ ನೀಡಲಾಗಿಲ್ಲ.

ಜಿಬಿ ರಸ್ತೆಯ ನಿವಾಸಿಯಾದ ಮಹಿಳೆಯೊಬ್ಬರು ಹಿಂದೂಸ್ತಾನ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ ಸದ್ಯ ನನ್ನ ಬಳಿ ಒಂದೆ ಒಂದು ರೂಪಾಯಿಯು ಇಲ್ಲ, ಕೆಲವೊಮ್ಮೆ ದಿನಕ್ಕೆ ಒಂದೇ ಬಾರಿ ಊಟ ಮಾಡುತ್ತಿದ್ದೇವೆ ಹಾಗೂ ಊರಲ್ಲಿರುವ ನನ್ನ ತಾಯಿ ನಾನು ಒಂದು ಡಿಟರ್ಜೆಂಟ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತೇನೆಂದು ತಿಳಿದುಕೊಂಡಿದ್ದಾರೆ.

ಕರೋನ ಹಾಗೂ ಲಾಕ್ ಡೌನ್ ಆಗುವುದಕ್ಕೂ ಮೊದಲು ನನ್ನ ಬಳಿ ದಿನವೊಂದಕ್ಕೆ 3 ರಿಂದ 4 ಕಸ್ಟಮರ್ ಬರುತ್ತಿದ್ದರು, ದಿನವೊಂದಕ್ಕೆ ಅಟ್ಲಿಸ್ಟ್ 900 ರಿಂದ ಸಾವಿರ ರೂಪಾಯಿ ಗಳಿಸುತ್ತಿದ್ದೆ ಸದ್ಯ ಏನೂ ಇಲ್ಲ, ಇನ್ಯಾವಾಗ ಗಿರಾಕಿ ಬರುವರೋ ಎಂದು ಚಿಂತಿತಾರಾಗಿದ್ದಾರೆ. ಇಂತಹ ಅನೇಕ ಮಹಿಳೆಯರಿದ್ದಾರೆ.

ಅವರೆಲ್ಲ ಇದೆ ವೃತ್ತಿಯಲ್ಲಿ ಮುಂದುವರೆಯಲು ಇಚ್ಛೆಸುತ್ತಾರೆ ಏಕೆಂದರೆ, ಈ ಮಹಿಳೆಗೆ ಅಡುಗೆ ಮಾಡಲು ಹಾಗೂ ಪೊರಕೆ ಕಟ್ಟಲು ಬರುತ್ತದೆ, ಆದರೆ ಈ ಕೆಲಸಗಳಿಂದ ಸಿಗುವುದು ಕೇವಲ ಮೂರು ಸಾವಿರ ರೂಪಾಯಿ, ಅದರಲ್ಲಿ ತನ್ನ ಖರ್ಚು ಮಾಡಿಕೊಂಡು ತನ್ನ ತಾಯಿಗೆ ಹೇಗೆ ದುಡ್ಡು ಕಳಿಸಲು ಸಾಧ್ಯ?

ಅಷ್ಟೇ ಅಲ್ಲದೇ ಈ ಮಹಿಳೆಯ 5 ವರ್ಷದ ಮಗಳನ್ನು ಸಹ ಅವರ ತಾಯಿಯೇ ನೋಡಿಕೊಳ್ಳುತ್ತಿದ್ದಾರಂತೆ. ಹೋದ ವರ್ಷ ಇಂತವರಿಗೆ ತಮ್ಮ ಖಾಯಂ ಕಸ್ಟಮರ್ ಕಡೆಯಿಂದ ಏನೋ ಅಲ್ಪ ಸ್ವಲ್ಪ ಸಹಾಯ ದೊರೆತಿತ್ತು, ಆದರೆ ಈ ಸಲ ಅದು ಕೂಡ ಸಾಧ್ಯವಾಗಿಲ್ಲವಂತೆ.  ಯಾರೂ ಆ ಕಡೆ ಸುಳಿದೇ ಇಲ್ಲ, ಇನ್ನು ಸಹಾಯ ಮಾಡುವುದೆಲ್ಲಿ.

ರಾಷ್ಟ್ರೀಯ ಅಧ್ಯಯನದ ಪ್ರಕಾರ ಇವರಿಗೆ ತಮ್ಮ ಜೀವನೋಪಾಯ ಹಾಗೂ ಭವಿಷ್ಯದ ಚಿಂತೆಯಲ್ಲಿ ಮಾನಸಿಕ ಖಿನ್ನತೆ ಶುರುವಾಗಿದೆಯಂತೆ. ಸೋಶಿಯಲ್ ಡಿಸ್ಟೆನ್ಸ್ ಎಂಬಂತಹ ನಿಯಮಗಳಿಂದಾಗಿಯಂತೂ ಇವರಿಗೆ ಬಹಳ ತೊಂದರೆಯಾಗುತ್ತಿದೆಯಂತೆ.

ಸೊಸೈಟಿ ಫಾರ್ ಪಾರ್ಟಿಸಿಪೇಟರಿ ಇಂಟಿಗ್ರೇಟೆಡ್ ಡೆವಲಪ್ಮೆಂಟ್ ನ ಸಂಸ್ಥಾಪಕಿಯಾದ ಲಲಿತಾ ನಾಯಕ್ ಅವರು ಇಂತಹ ಸೆಕ್ಸ್ ವರ್ಕರ್ಸ್ ಗೆ 30 ವರ್ಷಗಳಿಂದ ಸಹಾಯ ಮಾಡುತ್ತ ಬಂದಿದ್ದಾರೆ. ಲಲಿತ ನಾಯಕ್ ಅವರ ಪ್ರಕಾರ ಈ ಮಹಾಮಾರಿಯು ಅವರಿಗೆ ಬಹಳಷ್ಟು ಸಮಸ್ಯೆ ಮಾಡಿದೆಯಂತೆ.

ಇವರು ಅವರಿಗೆ ಹುಟ್ಟಿದ ಮಕ್ಕಳ ಊಟ ವಸತಿ ನೋಡಿಕೊಳ್ಳುತ್ತಿದ್ದಾರಂತೆ. ಈ ಕೆಲಸಗಾರರಿಗೆ ಲಲಿತಾ ನಾಯಕ್ ಅವರು ಬಹಳಷ್ಟು ಸಹಾಯ ಮಾಡಬಯಸುತ್ತಾರೆ ಆದರೆ ಈ ಮಹಾಮಾರಿಯಿಂದಾಗಿ ಕೇವಲ ಅವರಿಗೆ ಊಟದ ವ್ಯವಸ್ಥೆ ಮಾಡಲಷ್ಟೇ ಸಾಧ್ಯವಾಗಿದೆ.

ಇನ್ನೂ ದುಃಖದ ಸಂಗತಿ ಎಂದರೆ, ಕೆಲವೊಂದು ಕಡೆ ನಿರ್ಗತಿಕರಿಗೆ ಊಟದ ವ್ಯವಸ್ಥೆ ಇದ್ದರೂ ಕೂಡ ಹೊಟ್ಟೆ ಹೊರೆದುಕೊಳ್ಳಲು ಸಹ ಇವರಿಗೆ ಹೋಗಲು ಆಗುವುದಿಲ್ಲ, ಏಕೆಂದರೆ ಅಲ್ಲಿನ ಜನ ಇವರ ಬಗ್ಗೆ ತಿಳಿದುಕೊಂಡು ಬಾಯಿಗೆ ಬಂದದ್ದು ಬೈದು ಕಳಿಸುತ್ತಾರಂತೆ. ಹೀಗಾಗಿ ಇಂಥವರ ಜೀವನವನ್ನು ಬಹಳ ಕಷ್ಟಕ್ಕೆ ತಳ್ಳಿದೆ ಈ ಕರೋನ ಎಂಬ ಹೆಮ್ಮಾರಿ.

-Team Infotrend