ಇಂದಿನ ಶಾರ್ಟ್ ಬಟ್ ಸೂಪರ್ ಡಾನ್ಸ್! ಯುವತಿ ಮಾಡಿದಳು ಚಲಿಸುವ ಬಸ್ಸಿನಲ್ಲಿ ನೃತ್ಯ; ನಾಚಿ ನೀರಾದ ಹೆಂಗೆಳೆಯರು…
ಕಲೆ ಯಾರ ಸ್ವತ್ತೂ ಇಲ್ಲ. ಒಂದು ವೇಳೆ ನಿಮ್ಮಲ್ಲಿ ಅದ್ಭುತವಾದ ಕಲೆ ಏನಾದರೂ ಇದ್ದರೆ ಸಾಕು ಸೋಶಿಯಲ್ ಮೀಡಿಯಾ ಮುಖಾಂತರ ಕ್ಷಣದಲ್ಲೇ ಎಲ್ಲರಿಗೂ ಪರಿಚಯವಾಗಿ ಬಿಡುತ್ತೀರಿ. ಅದಕ್ಕೆ ಕಾರಣ ಇಂಟರ್ನೆಟ್ ಜಗತ್ತಿನಲ್ಲಿರುವ ವಿವಿಧ ಪ್ಲಾಟ್ ಫಾರ್ಮ್ ಗಳು. ಇಲ್ಲಿ ಎಲ್ಲರಿಗೂ ಸ್ಪರ್ಧಿಸುವ ಅವಕಾಶವಿದೆ. ಇದರಿಂದಲೇ ಅನೇಕರು ಯಾವುದೇ ರೀತಿಯ ಗಾಡ್ ಫಾದರ್ ಇಲ್ಲದೆ ಫೋಕಸ್ ನಲ್ಲಿ ಬಂದಿದ್ದಾರೆ. ಅದರಲ್ಲೂ ಇರುವ ಅನೇಕ ಕಲೆಗಳಲ್ಲಿ ನಿಮಗೆ ಡಾನ್ಸ್ ಬರುತ್ತಿದ್ದರೆ ನೀವು ಬಹುಬೇಗ ಫೇಮಸ್ ಆಗುತ್ತೀರಿ. ಕಾರಣ ಸೋಶಿಯಲ್ ಮೀಡಿಯಾದಲ್ಲಿ ನೃತ್ಯವನ್ನು ತುಂಬಾ ಇಷ್ಟಪಡುತ್ತಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಯುವತಿಯೊಬ್ಬಳು ಮಾಡಿದ ತುಂಬಾ ಸಿಂಪಲ್ ಡ್ಯಾನ್ಸ್ ಫುಲ್ ವೈರಲ್ ಆಗುತ್ತಿದೆ.
ಈ ವಿಡಿಯೋದಲ್ಲಿ ಕಂಡು ಬರುವ ಪ್ರಕಾರ, ಮಹಿಳೆಯರೆಲ್ಲರೂ ಕೂಡಿ ಬಸ್ಸಿನಲ್ಲಿ ಸುತ್ತಾಡಲು ಅಥವಾ ಪಿಕ್ನಿಕ್ ಗೆ ಹೊರಟಿರುವ ಹಾಗೆ ಕಂಡುಬರುತ್ತದೆ. ಇದೇ ಸಂದರ್ಭದಲ್ಲಿ ಯುತಿಯೊಬ್ಬಳು ಚಲಿಸುವ ಬಸ್ನಲ್ಲಿ ತುಂಬಾ ಸಿಂಪಲ್ಲಾಗಿ ಶಾರ್ಟ್ ಡ್ಯಾನ್ಸ್ ಮಾಡಿದ್ದಾಳೆ. ಈ ಡಾನ್ಸ್ ಸೋಶಿಯಲ್ ಮೀಡಿಯಾ ಯೂಸರ್ಸ್ ಗಳಿಗೆ ಸಖತ್ ಇಷ್ಟವಾದಂತೆ ಕಾಣುತ್ತಿದೆ. ಯುವತಿಯು ಕುಣಿಯುವುದನ್ನು ನೋಡಿ ಬಸ್ಸಿನಲ್ಲಿ ಕುಳಿತ ಸುತ್ತಮುತ್ತಲಿನ ಮಹಿಳೆಯರು ಯಾಕೋ ಗೊತ್ತಿಲ್ಲ ತುಂಬಾ ನಾಚುತ್ತಾ ರಿಯಾಕ್ಷನ್ ಕೊಡುತ್ತಿದ್ದಾರೆ. ಆದರೆ ಯುವತಿ ಮಾತ್ರ ಯಾರ ಗೊಡವೆಗೆ ಹೋಗದೆ ತನ್ನ ನೃತ್ಯದಲ್ಲಿ ತಾನು ಲೀನಾಗಿ ಒಳ್ಳೆಯ ಸ್ಟೆಪ್ ಸಾದರಪಡಿಸಿದ್ದಾಳೆ.
ನೋಡಿ ಈ ಚಲಿಸುವ ಬಸ್ಸಿನಲ್ಲಿಯ ನೃತ್ಯ…
View this post on Instagram
ಯುವತಿಯ ಈ ಸುಂದರ ನೃತ್ಯದ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ ratna_6333 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ 5.1 ಮಿಲಿಯನ್ ವೀಕ್ಷಣೆಯನ್ನು ಪಡೆದಿದೆ.