ಅತ್ತಿತ್ತ ಹುಡುಕಾಡಬೇಡಿ, ಇಲ್ಲಿದ್ದಾನೆ ಶಕ್ತಿಮಾನ! ಕಚ್ಚಲು ಓಡಿ ಬರುತ್ತಿರುವ ಚಿರತೆಯಂಥ ನಾಯಿಗಳನ್ನು ಕ್ಷಣದಲ್ಲಿ ನಿಲ್ಲಿಸಿದ ಪ್ರತಾಪಿ…

ಇಂಟರ್ನೆಟ್ ನಲ್ಲಿ ಹರಿದಾಡುವ ಕೆಲವು ವಿಡಿಯೋಗಳು ತುಂಬಾ ಇಂಪ್ರೆಸ್ ಮಾಡುತ್ತವೆ. ಇಂಥ ವಿಡಿಯೋಗಳನ್ನು ನೋಡಿದಾಗ ಇವುಗಳಿಂದ ಅನೇಕ ಸಲ ಒಳ್ಳೆಯ ಪಾಠವನ್ನು ಸಹ ಕಲಿಯುತ್ತೇವೆ. ಇಂಥ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಣದಲ್ಲಿ ವೈರಲಾಗುತ್ತವೆ. ನಾಯಿಗಳೆಂದರೆ ಸಾಕಷ್ಟು ಜನರು ಅಂಜುವವರೇ. ಅಪರಿಚಿತ ಸ್ಥಳದಲ್ಲಿ ನಾಯಿ ಕಂಡರಂತೂ ಮುಗಿದೇ ಹೋಯಿತು. ಅದರಲ್ಲೂ ನಾಯಿಗೆ ಹೆದರುವವರು ಅಪರಿಚಿತ ಸ್ಥಳದಲ್ಲಿ ಕಂಡ ನಾಯಿಯಿಂದ ಬಚಾವ್ ಮಾಡಿಕೊಳ್ಳಲು ಬರೀ ಓಡುವುದೊಂದೇ ಮಾಡುತ್ತಾರೆ.

ಸದ್ಯ ಇಲ್ಲಿ ನೋಡುವ ವಿಡಿಯೋದಲ್ಲಿ ನಾಯಿಯಿಂದ ರಕ್ಷಿಸಿಕೊಳ್ಳುವುದು ಹೇಗೆ? ಇದಕ್ಕೆ ತುಂಬಾ ಒಳ್ಳೆಯ ಸೊಲ್ಯೂಷನ್ ಒಂದನ್ನು ಯುವಕನೊಬ್ಬ ತೋರಿಸಿದ್ದಾನೆ. ವಿಡಿಯೋದ ದೃಶ್ಯದಲ್ಲಿ ಕಂಡುಬರುವಂತೆ ಯುವಕ ತನ್ನಷ್ಟಕ್ಕೆ ತಾನು ಒಂದು ಮನೆಯ ಮುಂದಿನಿಂದ ಹೋಗುತ್ತಿರುತ್ತಾನೆ. ಆ ಸಂದರ್ಭದಲ್ಲಿ ಆತನ ಮೇಲೆ ಎರಡು ಪುಂಡನಾಯಿಗಳು ಹಾಠಾತ್ ಅಕ್ರಮಣ ಮಾಡುತ್ತವೆ.

ಈ ಪ್ರಸಂಗದಲ್ಲಿ ಬೇರೆ ಯಾರೇ ಇರಲಿ ನೇರ ಅಲ್ಲಿಂದ ಕಾಲಿಗೆ ಬುದ್ಧಿ ಹೇಳುತ್ತಿದ್ದರು, ಮತ್ತು ನಾಯಿಗಳಿಂದ ಕಚ್ಚಿಸಿಕೊಳ್ಳುತ್ತಿದ್ದರು. ಆದರೆ ಪ್ರಸ್ತುತ ಯುವಕ ಒಂದೇ ಒಂದು ಕ್ಷಣವೂ ಸಹಿತ ಹೆದರದೆ ತಿರುಗಿ ನಾಯಿಗಳನ್ನೇ ಹೆದರಿಸಿದ್ದಾನೆ. ವಿಡಿಯೋ ತುಂಬಾ ವಿಶೇಷವಾಗಿದೆ. ತನ್ನನ್ನೇ ಕಚ್ಚಲು ವೇಗವಾಗಿ ಓಡಿ ಬರುತ್ತಿರುವ ನಾಯಿಗಳನ್ನು ಕಂಡು ಯುವಕ ಕಿಂಚಿತ್ತು ಹೆದರದೆ ತಿರುಗಿ ಅವುಗಳ ಮೇಲೆಯೇ ಅಟ್ಯಾಕ್ ಮಾಡಿದ್ದಾನೆ. ಯುವಕನ ಹಠಾತ್ ಬದಲಾದ ವರಸೆಯನ್ನು ನೋಡಿ ಕಚ್ಚಲು ಹಂಗು ತೊರೆದು ಓಡಿ ಹೋದ ನಾಯಿ ಒಮ್ಮೆಲೇ ಬೆಚ್ಚಿ ಬಿದ್ದು ಬ್ಯಾಲೆನ್ಸ್ ಕಳೆದು ಬೇರೆಡೆಗೆ ಓಡಿದೆ. ಅದರ ಹಿಂದೆ ಇನ್ನೊಂದು ನಾಯಿ ಆ ಯುವಕನಿಗೆ ಕಚ್ಚಲು ಮುಂದಾಗುತ್ತದೆ. ಅದರ ಅವಸ್ಥೆಯು ಸಹ ಮೊದಲಿನ ನಾಯಿಯ ತರವೇ ಆಗುತ್ತದೆ. ಈ ಸಂದರ್ಭದಲ್ಲಿ ಯುವಕ ಎಲ್ಲಿಯೂ ಹೆದರಿದಂತೆ ಮತ್ತು ಓಡಿ ಹೋಗಲು ಆತುರವಾಗಿದ್ದಂತೆ ಕಂಡು ಬರುತ್ತಿಲ್ಲ.

ಸೋಶಿಯಲ್ ಮೀಡಿಯಾದಲ್ಲಿ ಯುವಕನ ಈ ನಿಂಜಾ ಟೆಕ್ನಿಕ್ ನೆಟ್ಟಿಗರು ನೋಡಿ ಹೊಗಳಿದ್ದೇ ಹೊಗಳಿದ್ದು. ವಿಡಿಯೋದ ಬ್ಯಾಗ್ರೌಂಡಲ್ಲಿ ಚಿಕ್ಕಂದಿನಲ್ಲಿಯ ಫೇಮಸ್ ಟಿವಿ ಶೋ ಶಕ್ತಿಮಾನ್ ಹಾಡಿನ ಮ್ಯೂಸಿಕ್ ಕೇಳಿ ಬರುತ್ತಿದೆ. ಒಟ್ಟಿನಲ್ಲಿ ಯುವಕ ಕಚ್ಚಲು ಓಡಿ ಬರುತ್ತಿರುವ ನಾಯಿಗಳನ್ನು ಯಾವ ರೀತಿ ಹೇಗೆ ಮತ್ತು ಎಷ್ಟೊಂದು ಈಸಿಯಾಗಿ ಹ್ಯಾಂಡಲ್ ಮಾಡಬೇಕು ಎಂಬುದನ್ನು ತೋರಿಸಿದ್ದಾನೆ.

ನೋಡಿ ಈ ವಿಡಿಯೋ…

ಪ್ರಸ್ತುತ ಈ ನಿಂಜಾ ಟೆಕ್ನಿಕ್ ನ ವಿಡಿಯೋ ದೃಶ್ಯವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮಿನಲ್ಲಿ haasya_rasske_premi1 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಈ ವಿಡಿಯೋ ಇಲ್ಲಿಯವರೆಗೆ 1.4 ಮಿಲಿಯನ್ ವೀಕ್ಷಣೆಯನ್ನು ಪಡೆದಿದ್ದು 46 ಸಾವಿರ ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.