ನೆರೆಹೊರೆಯವರ ಜೊತೆ ಜಗಳ ಬರೀ ನಮ್ಮಲ್ಲಷ್ಟೇ ಅಲ್ಲ; ಸಮುದ್ರದ ಆಳದಲ್ಲಿಯೂ ಜೋರಾಗಿ ನಡೆಯುತ್ತದೆ! ಅದಕ್ಕೆ ಈ Video ನೆ ಸಾಕ್ಷಿ.

ಪ್ರತಿಯೊಬ್ಬರಿಗೂ ಬೇರೆ ಬೇರೆಯಾದ ಹವ್ಯಾಸವಿರುತ್ತದೆ. ಕೆಲವರು ಅಭ್ಯಾಸದಲ್ಲಿ ತಮ್ಮ ಇಷ್ಟ ತೋರಿದರೆ ಇನ್ನು ಕೆಲವರು ಆಟದಲ್ಲಿ. ಕೆಲವರು ವೈಲ್ಡ್ ಲೈಫ್ ಶೂಟ್ ನಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿದರೆ ಮತ್ತೆ ಕೆಲವರು ಸತತವಾಗಿ ಸಮುದ್ರದ ಆಳದಲ್ಲಿ ವಿಡಿಯೋ ಶೂಟ್ ಮಾಡುವ ಹವ್ಯಾಸವನ್ನು ಹೊಂದಿರುತ್ತಾರೆ. ಅಲ್ಲಿಯ ವಿವಿಧ ಜಲಚರ ಪ್ರಾಣಿಗಳ ಅದ್ಭುತ ವಿಡಿಯೋಗಳನ್ನು ಸೆರೆ ಹಿಡಿದು ಸುಂದರವಾದ ಡಾಕ್ಯುಮೆಂಟರಿಗಳನ್ನು ತಯಾರಿಸುವ ಅಭಿರುಚಿಯನ್ನು ಹೊಂದಿರುತ್ತಾರೆ.

ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ ಸದ್ಯ ಒಂದು ವಿಡಿಯೋ ನೋಡಲು ಸಿಗುತ್ತಿದೆ. ಈ ವಿಡಿಯೋ ತುಂಬಾನೇ ತಮಾಷೆಯಿಂದ ಕೂಡಿದೆ. ಇಲ್ಲಿ ಮನುಷ್ಯರ ವರ್ತನೆಯಂತೆ ವರ್ತಿಸಿದ ಮೀನುಗಳ ಅದ್ಭುತ ದೃಶ್ಯವೊಂದನ್ನು ನೋಡಬಹುದು.

ಸೋಶಿಯಲ್ ಮೀಡಿಯಾದಲ್ಲಿ ಕೆಲವು ದಿನಗಳ ಹಿಂದೆ ನೆರೆಹೊರೆಯವರು ಜಗಳಾಡುವ ವಿಡಿಯೋ ಒಂದು ತುಂಬಾ ವೈರಲ್ ಆಗಿದ್ದು ನಿಮಗೆ ನೆನಪಿರಬಹುದು. ಈ ವಿಡಿಯೋದಲ್ಲಿ ಮಹಿಳೆಯರು ತುಂಬಾ ಜೋರಾಗಿ ಕದನಕ್ಕೆ ಇಳಿದಿದ್ದರು. ಈ ಮಹಿಳೆಯರ ಜಗಳಕ್ಕೆ ಕಾರಣ ಬೀದಿಯ ಕಸವಾಗಿತ್ತು. ಒಬ್ಬಳು ತನ್ನ ಮನೆಯ ಮುಂದಿನ ಕಸವನ್ನು ನೆರೆಮನೆಯವಳ ಮುಂದೆ ಚೆಲ್ಲುವದು ಆಕೆ ಮತ್ತೆ ಅದೇ ಕಸವನ್ನು ಇತ್ತ ನೂಕುವದು ನಡೆದಿತ್ತು. ಮುಂದೆ ಇದೇ ಜಗಳ ಹೆಚ್ಚಾಗಿ ಚರಂಡಿ ನೀರು, ಗಲೀಜು ಒಬ್ಬರ ಮೇಲೊಬ್ಬರು ಚೆಲ್ಲುವವರೆಗೆ ಹೆಚ್ಚಾಗಿತ್ತು. ಇದೇ ಜಗಳವನ್ನು ನೆನಪಿಸುವ ಈ ಮೀನುಗಳ ದೃಶ್ಯ ಇಲ್ಲಿ ನೋಡಬಹುದು.

ಮೀನುಗಳ ಈ ಜಗಳದಲ್ಲಿ ಒಂದು ಮೀನು, ಬಾಯಲ್ಲಿ ಸಮುದ್ರದ ಉಸುಕು ಅಥವಾ ಮರಳನ್ನು ಹಿಡಿದು ಇನ್ನೊಂದು ಮೀನಿನ ವಾಸ ಸ್ಥಳದ ಮುಂದೆ ಚೆಲ್ಲುತ್ತದೆ. ಅದಕ್ಕೆ ಪ್ರತ್ಯುತ್ತರವಾಗಿ ಆ ಮೀನು ತನ್ನ ಬಾಯಲ್ಲಿ ಮರಳನ್ನು ಹಿಡಿದು ಮೊದಲ ಮೀನಿನ ವಾಸ ಸ್ಥಳದ ಮುಂದೆ ತಂದು ಚೆಲ್ಲುತ್ತದೆ. ಈ ರೀತಿಯಾಗಿ ಒಂದಕ್ಕೊಂದು ಮೇಲಿಂದ ಮೇಲೆ ಹಗೆ ತೀರಿಸಿಕೊಳ್ಳುವುದನ್ನು ಈ ವಿಡಿಯೋ ದೃಶ್ಯದಲ್ಲಿ ನೋಡಬಹುದು. ಬುದ್ಧಿ ಇರುವ ಜನರ ಜಗಳ ನೋಡುವುದು ಅಷ್ಟೊಂದು ಇಷ್ಟವಾಗುವುದಿಲ್ಲ. ಆದರೆ ಈ ಜಂಟಿ ಮೀನುಗಳ ಜಗಳ ಮಾತ್ರ ನೋಡಲು ತುಂಬಾ ಇಷ್ಟವಾಗುತ್ತದೆ ಅಷ್ಟೊಂದು ತಮಾಷೆ ಈ ಜಗಳದಲ್ಲಿದೆ.

ವಿಡಿಯೋ ನೋಡಿ…

ಮೀನುಗಳು ಜಗಳಾಡುವ ಸುಂದರ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಐ ಆಮ್ ಖಾಲಿದ್ ಹುಸೇನ್ ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಈ ವಿಡಿಯೋ ನೆಟ್ಟಿಗರಿಗೆ ತುಂಬಾ ಇಷ್ಟವಾಗಿದೆ. ವಿಡಿಯೋ ನೋಡಿದ ಯೂಸರ್ಸ್ ಗಳು ತುಂಬಾ ತಮಾಷೆಯ ಕಾಮೆಂಟ್ ಮಾಡಿದ್ದಾರೆ. ಅವರಲ್ಲಿ ಒಬ್ಬನು ಈ ಮೀನುಗಳು ಬಹುಶಃ ಮನುಷ್ಯನಿಂದ ಟ್ರೆನಿಂಗ್ ತೆಗೆದುಕೊಂಡಂತೆ ಕಾಣುತ್ತಿದೆ ಎಂದಿದ್ದಾನೆ. ಇನ್ನೊಬ್ಬ ಈ ಮೀನುಗಳು 100% ಫೀಮೇಲ್ ಆಗಿವೆ ಎಂದಿದ್ದಾನೆ.